ಕೋಲಾರ:- ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಕಳ್ಳತನ ಮಾಡುತ್ತಿದ್ದ 3 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಶಿಧರ್(39), ಹರ್ಷಿತ್ (25), ಸೂರ್ಯಪ್ರಕಾಶ್ (24 ಬಂದಿತರು.
ಕಾಲ್ತುಳಿತ ಕೇಸ್: RCB ಅಭಿಮಾನಿಗಳಿಂದ ಪರಸರಕ್ಕೂ ಹಾನಿ.. ದೂರು ದಾಖಲು!
ಆರೋಪಿಗಳು ಕೋಲಾರ ನಗರ ಪೊಲೀಸ್ ಹಾಗೂ ಬಂಗಾರಪೇಟೆ ಠಾಣೆಯ ಸರಹದ್ದಿನಲ್ಲಿ ಸರಗಳ್ಳತನ ಮಾಡಿದ್ದರ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 9 ಲಕ್ಷ ಬೆಲೆ ಬಾಳುವು ವಸ್ತುಗಳನ್ನು ಸೀಜ್ ಮಾಡಲಾಗಿದೆ.
(95 ಗ್ರಾಂ ತೂಕದ ಚಿನ್ನ ಗಟ್ಟಿಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 2 ಹೊಂಡಾ ಶೈನ್ ದ್ವಿಚಕ್ರ ವಾಹನಗಳ ವಶಕ್ಕೆ ಪಡೆಯಲಾಗಿದೆ).
ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.