ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶೇಷ ರೀತಿಯಲ್ಲಿ ವಿದಾಯ ಹೇಳಲು ಆಸ್ಟ್ರೇಲಿಯಾ ಕ್ರಿಕೆಟ್ ಸಿದ್ಧತೆ ನಡೆಸಿದೆ.
ಸೂಟ್ಕೇಸ್ನಲ್ಲಿ ಬಾಲಕಿ ಶವ ಪತ್ತೆ ಕೇಸ್: ಪ್ರಕರಣ ಬೇಧಿಸಿದ ಪೊಲೀಸರಿಗೆ ಅಚ್ಚರಿ ಮಾಹಿತಿ ರಿವೀಲ್!
ಕ್ರಿಕೆಟ್ ಲೋಕ ಕಂಡ ಇಬ್ಬರು ದಂತೆಕತೆಗಳು ಇವರು. ಕ್ರಿಕೆಟ್ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಈ ದಿಗ್ಗಜರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ವಿಶೇಷ ಗೌರವ ನೀಡೋದಾಗಿ ಘೋಷಿಸಿದೆ.
ಅಂದ್ಹಾಗೆ ಇವರಿಬ್ಬರು ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಮುಂದಿನ ಅಕ್ಟೋಬರ್ನಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯನ್ನು ಆಡಲು ಆಸ್ಟ್ರೇಲಿಯಾಗೆ ಹೋಗಲಿದೆ. ಈ ವೇಳೆ ರೋಹಿತ್ ಮತ್ತು ಕೊಹ್ಲಿ ಟೀಂ ಇಂಡಿಯಾದ ಭಾಗವಾಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ವಿದಾಯದ ಸರಣಿಯಾಗಿ ಏರ್ಪಡಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಇಬ್ಬರು ದಂತಕತೆಗಳು ಆಸ್ಟ್ರೇಲಿಯಾ ಪ್ರವಾಸವನ್ನು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಬೀಳ್ಕೊಡುಗೆ ನೀಡಲು ಆಸ್ಟ್ರೇಲಿಯಾ ಕ್ರಿಕೆಟ್ ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ. ಯಾಕೆಂದರೆ ರೋಹಿತ್ ಮತ್ತು ಕೊಹ್ಲಿ ಆಸ್ಟ್ರೇಲಿಯಾಗೆ ಮತ್ತೆ ಟೀಂ ಇಂಡಿಯಾದ ಭಾಗವಾಗಿ ಬ್ಯಾಟ್ ಬಿಸಲು ಬರುತ್ತಾರೆ ಅನ್ನೋದಕ್ಕೆ ಗ್ಯಾರಂಟಿ ಇಲ್ಲ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಇಂಥ ಪ್ಲಾನ್ ಮಾಡಿದೆ.