ಬೆಂಗಳೂರು:- ಯುವಕನೋರ್ವನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಕೊಡೀಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ನಗರದ ಮಾಲ್ ಆಫ್ ಏಷ್ಯಾ ಮುಂಭಾಗದ ರಸ್ತೆಯಲ್ಲಿ ಈ ಘಟನೆ ಜರುಗಿದ್ದು, ಫ್ಲೈಓವರ್ ಮೇಲಿಂದ ಬಿದ್ದು ಸತ್ತಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ 12:30 ರ ಸುಮಾರಿಗೆ ಈ ಘಟನೆ ಜರುಗಿದೆ. ಶವ ಕಂಡು ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಯುವಕನ ಸಾವು ಹೇಗಾಗಿದೆ ಅನ್ನೋ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದೇ ಜಾಗದ ಫ್ಲೈ ಓವರ್ ಮೇಲೆ ಅಪರಿಚಿತ ಬೈಕ್ ನಿಂತಿದೆ.
ಬೈಕ್ ನಲ್ಲಿ ಬಂದು, ಬೈಕ್ ನಿಲ್ಲಿಸಿ ಬಳಿಕ ಕೆಳಗೆ ಬಿದ್ದು, ಸತ್ತಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೊಡಿಗೇಗಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.