ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೀವನ ಪಯಣ ಪುಸ್ತಕ ರೂಪ ತಾಳಿದ್ದು, ಇಂದು ಆ ಪುಸ್ತಕವನ್ನು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಬಿಡುಗಡೆ ಮಾಡಲಾಗಿದೆ. ಸ್ಟೈಲೀಶ್ ಆಗಿ ಕೋಟು ತೊಟ್ಟು ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಭಾಗಿಯಾಗಿದ್ದಾರೆ.
ಶಿವಣ್ಣ ಮನೆಯವರಿಂದ, ಸ್ನೇಹಿತರು ಸಿನಿಮಾ ಇಂಡಸ್ಟ್ರಿಯವರಿಂದಲೇ ಶಿವಣ್ಣ ಬಗೆಗಿನ ಮಾಹಿತಿ ಕಲೆ ಹಾಕಿ ಬಯೋಗ್ರಫಿ ರಚಿಸಲಾಗಿದೆ. ಅದನ್ನೆ ಆಧರಿಸಿಯೇ ಈ ಪುಸ್ತಕವನ್ನ ಬರೆಯಲಾಗಿದೆ. ನಿವೇದನಾ ಆರ್ಟ್ಸ್ ಆನಂದ್ ನೇತೃತ್ವದಲ್ಲಿಯೇ ಈ ಪುಸ್ತಕ ತಯಾರಾಗಿದೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಣ್ಣ ತಮ್ಮಿಷ್ಟದ ಹಾಡು ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.