ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯೋದಿಕ್ಕೆ ನಟಿ ವೈಷ್ಣವಿ ಗೌಡ ಸಜ್ಜಾಗಿದ್ದಾರೆ. ಅದರ ಮೊದಲ ಭಾಗವಾಗಿ ನಿನ್ನೆ ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ನಿಶ್ಚಿತಾರ್ಥ ನಡೆದಿದೆ. ಎಂಗೇಜ್ ಮೆಂಟ್ ಫೋಟೋ ಜೊತೆಗೆ ಫೋಟೋಶೂಟ್ ವಿಡಿಯೋವನ್ನು ವೈಷ್ಣವಿ ಹಂಚಿಕೊಂಡಿದ್ದಾರೆ. ವೈಷ್ಣವಿ ಕೈ ಹಿಡಿಯುತ್ತಿರುವ ಹುಡುಗನ ಹೆಸರು ಅನುಕೂಲ್. ಏರ್ ಪೋರ್ಸ್ ನಲ್ಲಿ ತಮ್ಮ ಭಾವಿ ಪತಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕನ್ನಡ ಕಲಿತಿದ್ದಾರೆ. ಅದನ್ನು ಹೇಗೆ ಕಲಿತರು ಅನ್ನೋದನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ.