ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸ್ಟಾರ್ ಡೈರೆಕ್ಟರ್ ಅಟ್ಲಿ ಜೊತೆ ದೊಡ್ಡ ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ. ಬರೋಬ್ಬರಿ 800 ಕೋಟಿ ಪ್ರಾಜೆಕ್ಟ್ ನಲ್ಲಿ ಸಿನಿಮಾ ತಯಾರಾಗುತ್ತಿದೆ ಎನ್ನಲಾಗುತ್ತಿದೆ. ಹಾಲಿವುಡ್ ರೇಂಜ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗಾಗಿ ಅಲ್ಲು ಅರ್ಜುನ್ ಹೊಸ ಅವತಾರ ತಾಳಿದ್ದಾರೆ.
ಪುಷ್ಪ ಸರಣಿ ಸಿನಿಮಾಗಾಗಿ ಗಡ್ಡ ಬಿಟ್ಟು ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಬನ್ನಿ ಗಡ್ಡ ಟ್ರಿಮ್ ಮಾಡಿಸಿ, ಹೊಸ ಹೇರ್ ಸ್ಟೈಲ್ ನಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾರೆ. ಇತ್ತೀಚೆಗೆ ತಮ್ಮ ಸೋದರಸಂಬಂಧಿಯ ಮದುವೆಗೆ ಪತ್ನಿ ಸ್ನೇಹಾ ರೆಡ್ಡಿ ಮತ್ತು ಅವರ ಮಗಳು ಅರ್ಹಾ ಜೊತೆ ಆಗಮಿಸಿದ್ದರು. ಅಲ್ಲು ಅರ್ಜುನ್ ಕಪ್ಪು ಪ್ಯಾಂಟ್ ಜೊತೆಗೆ ಸರಳವಾದ ಕಂದು ಬಣ್ಣದ ಕುರ್ತಾ ಧರಿಸಿ, ಸ್ಟೈಲೀಶ್ ಆಗಿ ಐಕಾನ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್-ಅಟ್ಲಿ ಸಿನಿಮಾಗೆ AA22xA6 ಅಂತ ಟೈಟಲ್ ಇಡಲಾಗಿದ್ದು, ಅಲ್ಲು ಬರ್ತಡೇ ವಿಶೇಷವಾಗಿ ಅನೌನ್ಸ್‌ಮೆಂಟ್ ಜೊತೆಗೆ ಸಿನಿಮಾಗೆ ಪೂರ್ವ ತಯಾರಿ ಕ್ಷಣಗಳನ್ನು ವಿಡಿಯೋ ರಿಲೀಸ್ ಮಾಡಿತ್ತು. ಅಟ್ಲಿ ಮತ್ತು ಅರ್ಜುನ್ ಅವರುಗಳು ಅಮೆರಿಕಕ್ಕೆ ತೆರಳಿ ʼಅವತಾರ್’, ‘ಟರ್ನಿಮೇಟರ್’ ಇನ್ನೂ ಹಲವು ಹಾಲಿವುಡ್ನ ಐಕಾನಿಕ್ ಫ್ಯೂಚರಿಸ್ಟಿಕ್ ಸಿನಿಮಾಗಳಿಗೆ ಕೆಲಸ ಮಾಡಿರುವ ಸ್ಟುಡಿಯೋಗಳಿಗೆ ಭೇಟಿ ನೀಡಿದ್ದಾರೆ, ಅಲ್ಲಿನ ಟಾಪ್ ವಿಎಫ್ಎಕ್ಸ್, ಪ್ರಾಪ್, ಮೋಷನ್ ಕ್ಯಾಪ್ಚರ್ ಸ್ಟುಡಿಯೋಗಳೊಂದಿಗೆ ಈ ಜೋಡಿ ಒಪ್ಪಂದ ಮಾಡಿಕೊಂಡಿದೆ. ಅಷ್ಟಕ್ಕೂ ಇಂತಹ ಅದ್ಧೂರಿ ಪ್ರಾಜೆಕ್ಟ್ ಗೆ ಕೋಟಿ ಕೋಟಿ ಹಣ ಸುರಿಯುತ್ತಿರುವುದು ಸನ್ ಪಿಕ್ಚರ್ಸ್ ನ ಕಲಾನಿಧಿ ಮಾರನ್. ಇದೊಂದು ಆಕ್ಷನ್ ಅಡ್ವೆಂಚರ್ ಮೂವೀ ಅಂತಾ ಹೇಳಲಾಗ್ತಿದ್ದು, ಭಸರತೀಯ ಚಿತ್ರರಂಗದ ಅತಿ ದುಬಾರಿ ಚಿತ್ರವಂತೆ.