ಸ್ಯಾಂಟೊ ಡೊಮಿಂಗೊ:- ನೈಟ್‌ಕ್ಲಬ್‌ನಲ್ಲಿ ಛಾವಣಿ ಕುಸಿದು ಕನಿಷ್ಠ 79 ಜನರು ಸಾವನ್ನಪ್ಪಿದ ಘಟನೆ ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿ ಜರುಗಿದೆ. ಘಟನೆಯಲ್ಲಿ 155 ಜನರು ಗಾಯಗೊಂಡಿದ್ದಾರೆ.
ಇಂದ್ರಜಿತ್ ಲಂಕೇಶ್ ಪುತ್ರನ ಮೊದಲ ಚಿತ್ರಕ್ಕೆ ಒಟಿಟಿಯಲ್ಲಿಯೂ ಮೆಚ್ಚುಗೆ..ಪರಭಾಷೆಯಲ್ಲಿಯೂ ಸಮರ್ಜಿತ್‌ಗೆ ಡಿಮ್ಯಾಂಡ್!
ದುರಂತದಲ್ಲಿ ಜನಪ್ರಿಯ ಗಾಯಕ, ಪ್ರಾಂತೀಯ ಗವರ್ನರ್ ಮತ್ತು ಇಬ್ಬರು ಮಾಜಿ ಮೇಜರ್ ಲೀಗ್‌ನ ಬೇಸ್‌ಬಾಲ್ ಆಟಗಾರರಾದ ಆಕ್ಟೇವಿಯೊ ಡೋಟೆಲ್ ಮತ್ತು ಟೋನಿ ಬ್ಲಾಂಕೊ ಮೃತಪಟ್ಟಿದ್ದಾರೆ.
ಡೊಮಿನಿಕನ್ ರಿಪಬ್ಲಿಕನ್‌ನ ತುರ್ತು ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಜುವಾನ್ ಮ್ಯಾನುಯೆಲ್ ಮೆಂಡೆಜ್ ಪ್ರಕಾರ, ಛಾವಣಿ ಕುಸಿತದ ಸಮಯದಲ್ಲಿ ಕ್ಲಬ್ ಒಳಗೆ ಇದ್ದ ಜನರ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಮಧ್ಯರಾತ್ರಿ 12:44 ಕ್ಕೆ ಈ ದುರ್ಘಟನೆ ಸಂಭವಿಸಿದೆ. ಕ್ಲಬ್‌ನಲ್ಲಿ 500 ರಿಂದ 1,000 ಜನರಿದ್ದರು ಕೆಲವು ಮಾಧ್ಯಮಗಳು ತಿಳಿಸಿವೆ ಎಂದರು.