Author: Author AIN

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಜೊತೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡಿದ್ದ ಛಲಪುತ್ರಿ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಚಲಪತಿ ಪುತ್ರ  ಹರ್ಷವರ್ಧನ್ ಒಟ್ಟು 625 ಅಂಕಗಳಿಗೆ 595 ಅಂಕಗಳನ್ನು ಪಡೆದುಕೊಂಡಿದ್ದು, ಇಡೀ ಕುಟುಂಬ ಸಂತಸಕೊಂಡಿದೆ. ಕನ್ನಡದಲ್ಲಿ 121 ಅಂಕ, ಇಂಗ್ಲೀಷ್‌ನಲ್ಲಿ  93, ಹಿಂದಿಯಲ್ಲಿ 100ಕ್ಕೂ 100, ಗಣಿತದಲ್ಲಿ 97, ವಿಜ್ಞಾನದಲ್ಲಿ 86 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಸೇರಿ ಅತ್ಯುತ್ತಮ ಸಾಧನೆ ತೋರಿಸಿದ್ದಾನೆ. ಮಗನ ಸಾಧನೆಗೆ ತಂದೆ ಚಲಪತಿಗೆ ಖುಷಿಯಾಗಿದ್ದಾರೆ. ಚಲಪತಿ ಅವರಿ ಇಬ್ಬರೂ ಮಕ್ಕಳು. ಅಮೂಲ್ಯ ಹಾಗೂ ಹರ್ಷವರ್ಧನ್.‌ ಇವರಿಬ್ಬರನ್ನು ಪುನೀತ್ ರಾಜ್‌ಕುಮಾರ್ ಓದಿಸುತ್ತಿದ್ದರು. 3 ವರ್ಷದ ಹಿಂದೆ ಕೂಡ ಇಬ್ಬರ ಶಾಲಾ ಶುಲ್ಕವನ್ನು ಪುನೀತ್ ರಾಜ್‌ಕುಮಾರ್ ಭರಿಸಿದ್ದನ್ನು ಚಲಪತಿ ಅವರು ನೆನಪು ಮಾಡಿಕೊಂಡಿದ್ದರು. ಅಪ್ಪು ಸರ್ ಆಸೆಯಂತೆ ಅಮೂಲ್ಯ ಹಾಗೂ ಹರ್ಷವರ್ಧನ್ ಇಬ್ಬರೂ…

Read More

ಬಿಗ್‌ ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಸಾಮಾಜಿಕ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಬಡ ಕುಟುಂಬಳಿಗೆ ಸೂರು ಕಟ್ಟಿಸಿ ಕೊಡುವ ಭರವಸೆ ನೀಡಿದ್ದರು. ನುಡಿದಂತೆ ರೂಪೇಶ್‌ ಶೆಟ್ಟಿ ನಡೆದಿದ್ದು, ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಈ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಮನೆಗೆ ʻಪ್ರೇಮ ನಿಲಯʼ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ರಿಯಲ್‌ ಲೈಫ್‌ನಲ್ಲಿಯೂ ರೂಪೇಶ್‌ ಶೆಟ್ಟಿ ಹೀರೋ ಆಗಿದ್ದಾರೆ. ರೂಪೇಶ್ ಶೆಟ್ಟಿ “ನೆಮ್ಮದಿ” ಅನ್ನುವ ಒಂದು ಚಾರಿಟೇಬಲ್ ಟ್ರಸ್ಟ್ ಹುಟ್ಟುಹಾಕಿದ್ದಾರೆ. ಈ ನೆಮ್ಮದಿ ಸಂಸ್ಥೆ ಮೂಲಕ ಮತ್ತಷ್ಟು ಒಳ್ಳೆ ಕೆಲಸ ಮಾಡೋ ಉದ್ದೇಶ ಇದೆ. ಈ ಒಂದು ಸಂಸ್ಥೆಯನ್ನ ಹೊಸ ಮನೆಯ ಗೃಹಪ್ರವೇಶದ ದಿನವೇ ಉದ್ಘಾಟಿಸಿದ್ದಾರೆ. ಹಾಗೆ ಹೊಸ ಮನೆಯ ಅಂಗಳದಲ್ಲಿಯೇ ನಿಂತುಕೊಂಡು ವಿಷಯ ಹಂಚಿಕೊಂಡಿದ್ದಾರೆ. “ಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ಕಟ್ಟಿ ಕೊಡುತ್ತೇನೆ ಎಂದು ನಾನು ನನ್ನ ಹುಟ್ಟುಹಬ್ಬದ ದಿನ ಒಂದು ವಿಡಿಯೋ ಮಾಡಿದ್ದೆ. ಇವತ್ತು ಆ ಮನೆಯ ಕೆಲಸ ಮುಗಿದು ಗೃಹ ಪ್ರವೇಶ ನಡೆಯುತ್ತಿದೆ.…

Read More

ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘A for ಆನಂದ್’ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿದೆ. ಶುಭ ಶುಕ್ರವಾರವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ನಿರ್ಮಾಪಕಿ ಗೀತಾ ಶಿವರಾಜ್‌ ಕುಮಾರ್‌ ಕ್ಲ್ಯಾಪ್‌ ಮಾಡಿದರು. ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಿದರು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ಮುಹೂರ್ತದ ಬಳಿಕ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆ ಮಕ್ಕಳು. ‘A for ಆನಂದ್’ ಮಕ್ಕಳ ಸಿನಿಮಾವಾಗಿರುವುದರಿಂದ ವಿಶೇಷವಾಗಿ ಸುದ್ದಿಗೋಷ್ಠಿ ನಡೆಸಲಾಯಿತು. ವೇದಿಕೆ ಅತಿಥಿಗಳನ್ನು ಮಕ್ಕಳು ಸ್ವಾಗತಿಸಿದರು. ಇದೇ ವೇಳೆ ಹಾಡು ಹೇಳಿ ನೆರೆದಿದ್ದವರನ್ನು ಮಕ್ಕಳು ರಂಜಿಸಿದರು. ಬಳಿಕ ಮಾತನಾಡಿದ ಶಿವಣ್ಣ, ಶ್ರೀನಿ ಜೊತೆ ಎರಡನೇ ಸಿನಿಮಾ. ಅವರು ನನಗೆ ಹದಿನೈದು ವರ್ಷದಿಂದ ಸ್ನೇಹಿತರು. ಶಿವ ಸಿನಿಮಾಗಾಗಿ ಫೋಟೋಶೂಟ್‌ ಮಾಡಿದ್ದರು. ಅಂದಿನಿಂದ ಪರಿಚಯ. ಅಂದಿನಿಂದ ಒಂದು ಕಥೆ ಇದೆ ಎಂದು ಹೇಳುತ್ತಿದ್ದರು. ತುಂಬಾ ಬಾರಿ…

Read More

ಕನ್ನಡ ಚಿತ್ರರಂಗ ಭಾಷೆ, ಗಡಿ ದಾಟಿ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸಾಧನೆ ಮಾಡಿದೆ. ಕೆಜಿಎಫ್‌, ಕಾಂತಾರ, ಚಾರ್ಲಿ 777 ಸಿನಿಮಾಗಳು ಇಂಡಿಯನ್ ಸಿನಿ ಇಂಡಸ್ಟ್ರೀ ಇತಿಹಾಸದಲ್ಲಿ ತಿಕ್ಕಿ ಅಳಿಸಿ ಹಾಕದಂತಹ ದಾಖಲೆ ಬರೆದಿವೆ. ಆದ್ರೆ ಇಂತಹ ಚಿತ್ರರಂಗವನ್ನು ಕಡೆಗಣಿಸಲಾಗುತ್ತಿದೆಯೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ..ನಿನ್ನೆಯಿಂದ ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್‌ ಶೃಂಗಸಭೆ. ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ ವೇವ್ಸ್‌-ವಿಶ್ವ ಆಡಿಯೋ ವಿಷುಯಲ್ ಎಂಟರ್ಟೈನ್ಮೆಂಟ್) ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಮುಂಬೈನಲ್ಲಿ ಬಹಳ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಈ ಸಭೆ ಕನ್ನಡ ಚಿತ್ರರಂಗ ಹೊರತುಪಡಿಸಿ ಬೇರೆ ಇಂಡಸ್ಟ್ರೀಯ ತಾರೆಯರು ಭಾಗಿಯಾಗಿದ್ದಾರೆ. ಈ ಶೃಂಗಸಭೆಗೆ ಕನ್ನಡಿಗರಿಗೆ ಆಹ್ವಾನ ನೀಡಿಲ್ವಾ ಎಂಬ ಚರ್ಚೆ ಶುರುವಾಗಿದ್ದು, ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವೀರಕಪುತ್ರ ಶ್ರೀನಿವಾಸ್‌ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು. “ಕನೆಕ್ಟಿಂಗ್ ಕ್ರಿಯೇಟರ್ಸ್, ಕನೆಕ್ಟಿಂಗ್ ಕಂಟ್ರಿಸ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಭಾರತವನ್ನು ಮಾಧ್ಯಮ,…

Read More

ಹೌಸ್‌ ಅರೆಸ್ಟ್‌ ಶೋ ಬ್ಯಾನ್‌ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಸಭ್ಯತೆಯ ಗಡಿ ಮೀರಿದ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಲೈಂಗಿಕ ಭಂಗಿಗಳ ಪ್ರದರ್ಶಿಸುವುದು, ಎಲ್ಲರ ಎದುರು ಬಟ್ಟೆ ಬಿಚ್ಚಿಸುವುದು, ಸೇರಿದಂತೆ ಅನೇಕ ಅಶ್ಲೀಲ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಇದರ ವಿರುದ್ಧ ಹಲವು ಟೇಕೆಗಳು ವ್ಯಕ್ತವಾಗುತ್ತಿವೆ. ಅಜಾಜ್‌ ಖಾನ್‌ ನಡೆಸಿಕೊಡುವ ʻಹೌಸ್‌ ಅರೆಸ್ಟ್‌ʼ ಅಶ್ಲೀಲ ಕ್ಲಿಪ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಭಾರೀ ಟೇಕೆಗೆ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ಅಶ್ಲೀಲತೆಯನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ವೀಕ್ಷಕರು ಆರೋಪಿಸಿ ವ್ಯಕ್ತಪಡಿಸಿದ್ದಾರೆ. ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸ್ಟ್ರೀಮಿಂಗ್ ಅಪ್ಲಿಕೇಶನ್ ಅನ್ನು ಸರ್ಕಾರ ಇನ್ನೂ ಏಕೆ ನಿಷೇಧಿಸಿಲ್ಲ ಎಂದು ಕೇಳಿದ್ದಾರೆ. “ಉಲ್ಲು ಆಪ್ ಮತ್ತು ಆಲ್ಟ್ ಬಾಲಾಜಿಯಂತಹ ಆಪ್‌ಗಳು ಅಶ್ಲೀಲ ವಿಷಯದ ಆಪ್‌ಗಳ ಮೇಲಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಷೇಧದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ ಎಂದು ನಾನು ಸ್ಥಾಯಿ ಸಮಿತಿಯಲ್ಲಿ ಪ್ರಸ್ತಾಪಿಸಿದ್ದೇನೆ. ನಾನು ಇನ್ನೂ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ” ಎಂದು ಸಂಸದೆ ಪ್ರಿಯಾಂಕಾ…

Read More

ಸಿಂಪಲ್‌ ಸ್ಟಾರ್‌ ರಕ್ಷಿಣ್‌ ಶೆಟ್ಟಿ ಕಾಣೆಯಾಗಿದ್ದಾರೆ. ಹೀಗಂತಾ ನಾವ್‌ ಹೇಳ್ತಿಲ್ಲ.  ಇದು ಅವರ ಅಭಿಮಾನಿಗಳ ಮಾತು. 777 ಚಾರ್ಲಿ ಸಿನಿಮಾ ಆದ್ಮೇಲೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ರಕ್ಷಿತ್‌ ಆ ನಂತರೆ ಫುಲ್‌ ಸೈಲೆಂಟ್‌ ಆಗಿದ್ದಾರೆ. ಅವರ ಸುದ್ದಿಯೇ ಇಲ್ಲ. ಎಲ್ಲೋದ್ರು ಸಿಂಪಲ್‌ ಸ್ಟಾರ್ ಅಂತಾ ಹುಡುಕಲು ಶುರು ಮಾಡಿದ್ದಾರೆ. ಸಪ್ತ  ಸಾಗರದಾಚೆ ಎಲ್ಲೋ ಬಳಿಕ ರಕ್ಷಿತ್‌ ಶೆಟ್ಟಿ ರಿಚರ್ಡ್‌ ಆಂಟೋನಿ ಸಿನಿಮಾ ಟೇಕಾಫ್‌ ಮಾಡಬೇಕಿತ್ತು. ಹೊಂಬಾಳೆ ಬ್ಯಾನರ್‌ನಡಿ ಈ ಚಿತ್ರ ಮೂಡಿ ಬರಬೇಕಿತ್ತು. ಸಣ್ಣ ಟೀಸರ್‌ ಬಿಟ್ಟು ಥ್ರಿಲ್ ಹೆಚ್ಚಿಸಿದ್ದ ಸಿಂಪಲ್‌ ಸ್ಟಾರ್‌ ಈಗ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಡೋದಿಕ್ಕೆ ರೆಡಿಯಾಗಿದ್ದಾರೆ. ರಕ್ಷಿತ್‌ ಶೆಟ್ಟಿ ಬಹುನಿರೀಕ್ಷಿತ ಸಿನಿಮಾ ರಿಚರ್ಡ್‌ ಆಂಟೋನಿ ಶೀಘ್ರದಲ್ಲೇ ಸೆಟ್ಟೇರಲಿದ್ದು, ಮುಂದಿನ ವರ್ಷ ಬಿಡುಗಡೆಯಾಗುವುದು ಖಚಿತ ಅಂತಾ ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ. ಹೇಳಿಕೇಳಿ ರಿಚರ್ಡ್‌ ಆಂಟೋನಿ ಸಿನಿಮಾ ಉಳಿದವರು ಕಂಡಂತೆ ಸಿನಿಮಾದ ಪ್ರೀಕ್ವೆಲ್. ಉಡುಪಿಯಲ್ಲಿಯೇ ಇಡೀ ಸಿನಿಮಾದ ಚಿತ್ರೀಕರಣ ನಡೆಯುವ…

Read More

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಶ್ರೀ ಸಂಚಾರಿ ವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ `ಪುತ್ತೂರು ಭರತ್’ ಎಂದೇ ಜನಪ್ರಿಯರಾಗಿದ್ದ ಶ್ರೀ ಭರತ್ ಕುಮಾರ್ ನಿನ್ನೆ ರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಪುತ್ತೂರಿನ, ಪಡ್ನೂರು ಗ್ರಾಮದ ಮತಾವು ಮನೆಯ ದಿ. ಹರೀಶ ಗೌಡ ಮತ್ತು ಜಯಂತಿ ದಂಪತಿಯ ಹಿರಿಯ ಪುತ್ರ ಭರತ್ 43 ವರ್ಷ ಪ್ರಾಯದವರಾಗಿದ್ದು, ಬೆಂಗಳೂರಿನಲ್ಲಿ ಸಿವಿಲ್ ಬಿಲ್ಡರ್ ಆಗಿ ಸ್ವಯಂವೃತ್ತಿ ನಿರತರಾಗಿದ್ದರು. ಭರತ್ ಅವರು ಬೆಂಗಳೂರು ಮತ್ತು ಪುತ್ತೂರು ಕಂಬಳ ಕೂಟಗಳ ಸದಸ್ಯರೂ ಆಗಿದ್ದು ಜನಾನುರಾಗಿಯಾಗಿದ್ದರು. ಮೃತ ಭರತ್ ಅವರು ಅಮ್ಮ, ಪತ್ನಿ ರವಿಕಲಾ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಮಗ ನಿಹಾರ್ ಮತ್ತು ಮಗಳು ಹಂಸಿಕಾ, ತಮ್ಮ ಆದರ್ಶ, ತಂಗಿ ಸೌಮ್ಯಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದ್ದು, ಸಿನಿಮಾ ರಂಗದಲ್ಲಿ ಇನ್ನಷ್ಟು ಸಾಧಿಸುವ ಕನಸು ಹೊತ್ತಿದ್ದ ಭರತ್, ಎಳೆಯರದಲ್ಲೇ ದೂರವಾಗಿದ್ದು ತುಂಬಲಾರದ ನಷ್ಟ.

Read More

ಖ್ಯಾತ ಗಾಯ ಸೋನು ನಿಗಮ್‌ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ಭಾಷೆ ಹಾಗೂ ಕನ್ನಡ ಹಾಡುಗಳ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಲೇ ಸೋನು ನಿಗಮ್‌ ವಿವಾದತ್ಮಾಕ ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರಿನನಲ್ಲಿ ನಡೆದ ಸಂಗೀತ ಕಾರ್ಯಕ್ರೆಮದಲ್ಲಿ ಅವರು ಮಾತನಾಡಿದ ಮಾತುಗಳು ಕನ್ನಡಿಗರನ್ನು ಕೆರಳಿಸಿದೆ. ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಸೋನು ನಿಗಮ್‌ ಗೆ ಅಭಿಮಾನಿಗಳು ಮನವಿ ಮಾಡಿದರು. ಈ ವೇಳೆ . ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಮಾತಾಡುವ ಭರದಲ್ಲಿ ಪಹಲ್ಗಾಮ್ ದಾಳಿ ಹಾಗೂ ಕರ್ನಾಟಕದ ಬಗ್ಗೆ ಮಾತಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ದಿ ಬೆಸ್ಟ್ ಸಾಂಗ್ಸ್ ಹಾಡಿರೋದು ಹೆಚ್ಚು ಕನ್ನಡದಲ್ಲಿ. ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ. ತುಂಬಾ ಆಸೆಯಿಂದಲೇ ಇಲ್ಲಿ ಬರ್ತೇನೆ. ಸಾಮಾನ್ಯವಾಗಿ ಕನ್ನಡ ಸಾಂಗ್ಸ್ ಹಾಡಿ ಅಂತ ಕೇಳ್ತಾರೆ. ಯಾವುದೇ…

Read More

ಹುಬ್ಬಳ್ಳಿ: ಹುಬ್ಬಳ್ಳಿ ಸಮೀಪ ನೂಲ್ವಿ ಕ್ರಾಸ್ ಬಳಿ ಪ್ಕೈವುಡ್ ಮತ್ತು ಬಟ್ಟೆ ರೂಲ್ ಗಳನ್ನು ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಜರುಗಿದೆ. https://ainkannada.com/do-you-have-these-symptoms-if-so-it-means-you-have-liver-cancer-see-a-doctor-immediately/ ಬಾಂಬೆಯಿಂದ ಬೆಂಗಳೂರು ಕಡೆ ಹೊರಟಿದ್ದ ಚಿತ್ರದುರ್ಗ ಮೂಲದ ಕ್ಯಾಂಟರ್ ಶಾಟ್೯ ಸಕ್ಯೂ೯ಟ್ ನಿಂದ ದಿಡೀರನೇ ಬೆಂಕಿ ತಗುಲಿದ ಪರಿಣಾಮ ಇಡೀ ಕ್ಯಾಂಟರ್ ಬೆಂಕಿಗೆ ಆಹುತಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗುವ ಜೊತೆಗೆ ಟ್ರಾಪಿಕ್ ಅನ್ನೂ ಕ್ಲೀಯರ್ ಮಾಡಿದ್ದಾರೆ.

Read More

ಯಾವುದೇ ಗಾಡ್‌ ಫಾದರ್‌ ಇಲ್ಲದೇ ತಮಿಳು ಇಂಡಸ್ಟ್ರೀಯಲ್ಲಿ ಸ್ಟಾರ್‌ ಪಟ್ಟ ಪಡೆದವರು ಥಲಾ ಅಜಿತ್ ಕುಮಾರ್. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅಜಿತ್ ಸಿನಿಮಾಗಳನ್ನು ಹಬ್ಬದಂತೆ ಸೆಲೆಬ್ರೆಟ್‌ ಮಾಡುವ ದೊಡ್ಡ ಅಭಿಮಾನಿ ಬಳಗವಿದೆ. ಝೀರೋದಿಂದ ಹೀರೋ ಆದ ಅಜಿತ್‌ ಸಿನಿಮಾ ಇಂಡಸ್ಟ್ರೀಗೆ ಬಂದಿದ್ದೇ ರೋಚಕ. ಅಜಿತ್‌ ಕಲಾ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಾವು ಸಿನಿಮಾ ಇಂಡಸ್ಟ್ರೀಗೆ ಪದಾರ್ಪಣೆ ಮಾಡಿದ್ದೇಕೆ ಅನ್ನೋದನ್ನು ರಿವೀಲ್‌ ಮಾಡಿದ್ದಾರೆ. ತಮಿಳು ಇಂಡಸ್ಟ್ರೀಯ ಐಕಾನ್ ಆಗಿರುವ ಅಜಿತ್‌, ತಮ್ಮನ್ನು ತಾವು ಆಕಸ್ಮಿಕ ನಟ ಎಂದು ಪರಿಗಣಿಸುವುದಾಗಿ ಹೇಳಿಕೊಂಡಿದ್ದು, ಅವರಿಗೆ ಸಿನಿಮಾ ಎಂದಿಗೂ ಮೊದಲ ಆಯ್ಕೆಯಾಗಿರಲಿಲ್ಲ. ಸಾಲ ತೀರಿಸಲು ಮಾಡೆಲಿಂಗ್‌ ಶುರು ಮಾಡಿದೆ. ಆ ನಂತರ ಇಂಡಸ್ಟ್ರೀಗೆ ಬಂದಿರುವುದಾಗಿ ಹೇಳಿದ್ದಾರೆ. ಅಜಿತ್ 18 ವರ್ಷದವನಾಗಿದ್ದಾಗ ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರೇಸಿಂಗ್‌ ಗೀಳು ಅಂಟಿಸಿಕೊಂಡಿದ್ದ ಅವರು, ಅದಕ್ಕಾಗಿ ರೇಸಿಂಗ್‌ ಹೋಗಲು ಮಾಡೆಲಿಂಗ್ ಕೈಗೆತ್ತಿಕೊಂಡರು. ಆಗ ಅವರಿಗೆ…

Read More