ವಿಜಯಪುರ: 22 ವರ್ಷದ ಯುವಕನೊಬ್ಬ ತಂದೆಯ ಪಿಸ್ತೂಲ್’ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ನಗರದ ಶಿಕಾರಿ ಖಾನ ಪ್ರದೇಶದಲ್ಲಿ ನಡೆದಿದೆ. ಅಶನಾಮ್ ಪ್ರಕಾಶ ಮಿರ್ಜಿ (22) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಯುವಕನ ತಂದೆ ಹಾಗೂ ಮಾಜಿ ಪಾಲಿಕೆ ಸದಸ್ಯ ಪ್ರಕಾಶ್ ಮಿರ್ಜಿ ಹೆಸರಿನಲ್ಲಿದ್ದ ಪರವಾನಿಗೆ ಹೊಂದಿದ ಪಿಸ್ತೂಲ್ ಅನ್ನು ತೆಗೆದುಕೊಂಡು ಬೆಡ್ ರೂಂಗೆ ಹೋಗಿ ತಲೆಗೆ ಹೊಡೆದುಕೊಂಡ ಯುವಕ ಸಾವನ್ನಪ್ಪಿದ್ದಾನೆ. ತಂದೆ, ತಾಯಿ ಮತ್ತು ಸಂಬಂಧಿಗಳು ಮನೆಯಲ್ಲಿದ್ದಾಗಲೇ ಈ ಘಟನೆ ನಡೆದಿದ್ದು, https://ainkannada.com/did-you-know-mango-prevents-weight-gain/ ಗುಂಡಿನ ಶಬ್ದ ಕೇಳಿ ಕುಟುಂಬಸ್ಥರು ಬೆಡ್ ರೂಂ ಬಾಗಿಲು ತೆರೆದಿದ್ದಾರೆ. ತಕ್ಷಣ ಅಶನಂ ನನ್ನು ಬಿಎಲ್ಇಡಿ ಆಸ್ಪತ್ರೆಗೆ ಕುಟುಂಬಸ್ಥರು ಸ್ಥಳಾಂತರ ಮಾಡಿದ್ದಾರೆ. ಆದರೆ ಅಶನಂ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Author: Author AIN
ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯ ಪ್ರಮುಖ ಆರೋಪಿಗಳಿಗಾಗಿ ಭಾರತೀಯ ಸೇನೆಯು ಹಗಲು-ರಾತ್ರಿ ಹುಡುಕಾಟ ನಡೆಸುತ್ತಿದೆ. ಇದರ ಬೆನ್ನಲ್ಲೇ ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಲಷ್ಕರ್-ಎ-ತೈಬಾ ಟಾಪ್ ಕಮಾಂಡರ್‌ನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಅಲ್ತಾಫ್ ಲಲ್ಲಿ ಟಾಪ್ ಕಮಾಂಡರ್ ಆಗಿದ್ದು ಉಗ್ರ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ. ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಯಿತು. ಈ ಎನ್‌ಕೌಂಟರ್‌ನಲ್ಲಿ ಅಲ್ತಾಫ್ ಲಲ್ಲಿ ಹತ್ಯೆಯಾಗಿದ್ದಾನೆ. https://ainkannada.com/did-you-know-mango-prevents-weight-gain/ ಈ ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶ್ರೀನಗರಕ್ಕೆ ಇಂದು ಆಗಮಿಸಿದ್ದು ಅವರಿಗೆ ಕಾರ್ಯಾಚರಣೆಯ ವಿವರ ನೀಡಲಾಯಿತು.
ಡಾರ್ಲಿಂಗ್ ಪ್ರಭಾಸ್ ಹಾಗೂ ಸ್ವೀಟಿ ಅನುಷ್ಕಾ ಶೆಟ್ಟಿ ತೆಲುಗು ಸಿನಿಪ್ರೇಮಿಗಳು ಅಚ್ಚುಮೆಚ್ಚಿನ ಜೋಡಿ. ಬಾಹುಬಲಿ ಸರಣಿ ಸಿನಿಮಾ ಬಂದ್ಮೇಲೆ ಈ ಜೋಡಿಯನ್ನು ಅಭಿಮಾನಿಗಳು ಮತ್ತೊಮ್ಮೆ ತೆರೆಯಲ್ಲಿ ಒಟ್ಟಿಗೆ ನೋಡಲು ಕಾಯುತ್ತಿದ್ದಾರೆ. ಆದ್ರೆ ಇಲ್ಲಿವರೆಗೂ ಅನುಷ್ಕಾ ಪ್ರಭಾಸ್ ಮತ್ತೊಮ್ಮೆ ತೆರೆಹಂಚಿಕೊಂಡಿಲ್ಲ. ಇವರಿಬ್ಬರನ್ನು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯೊಂದು ಮಗದೊಮ್ಮೆ ಒಂದುಗೂಡಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಜಿಎಫ್, ಸಲಾರ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಈಗಾಗಲೇ ಪ್ರಭಾಸ್ ಜೊತೆ ಮೂರ್ನಾಲ್ಕು ಪ್ರಾಜೆಕ್ಟ್ ಮಾಡೋದಾಗಿ ಘೋಷಣೆ ಮಾಡಿದೆ. ಸದ್ಯ ಪ್ರಭಾಸ್ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಂಬಾಳೆ ಕೂಡ ಬೇರೆ ಸಿನಿಮಾಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದೆ. ಈ ನಡುವೆ ಪ್ರಭಾಸ್ ಒಪ್ಪಿಕೊಂಡಿರುವ ಮೂರ್ನಾಲ್ಕು ಪ್ರಾಜೆಕ್ಟ್ ಗಳ ಪೈಕಿ ಒಂದರಲ್ಲಿ ನಾಯಕಿಯಾಗಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎಂಬ ಹೊಸ ಸಮಾಚಾ ಹೊರಬಿದ್ದಿದೆ. ಹೊಂಬಾಳೆ ನಿರ್ಮಾಣದಲ್ಲಿ ಬಾಹುಬಲಿ ಜೋಡಿ ಮತ್ತೊಮ್ಮೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅನುಷ್ಕಾ-ಪ್ರಭಾಸ್ ಜೋಡಿಯಾಗಿ ನಟಿಸಿರುವ ‘ಬಿಲ್ಲಾ’, ‘ಮಿರ್ಚಿ’ ಹಾಗೂ ‘ಬಾಹುಬಲಿ’ ಸರಣಿ ಸಿನಿಮಾಗಳು ಸೂಪರ್ ಹಿಟ್ ಕಂಡಿವೆ. ಹೀಗಾಗಿ ಸಹಜವಾಗಿ…
ಬೆಂಗಳೂರು: ಕೇಂದ್ರ ಸರ್ಕಾರದ ಕೆಲವೊಂದು ಕ್ರಮಗಳ ಭಾಗವಾಗಿ ಕರ್ನಾಟಕದಲ್ಲಿರುವ ಪಾಕಿಸ್ತಾನಿಗಳನ್ನು ವಾಪಸ್ ಕಲುಹಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಧಿಕೃತವಾಗಿ ಇರುವವರು, ಅನಧಿಕೃತವಾಗಿ ಇರುವವರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಹಿಂದೆ ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ್ದೇವೆ. ಅದರಲ್ಲಿ ಪಾಕಿಸ್ತಾನಿ ಪ್ರಜೆಗಳು ಯಾರಿದ್ದಾರೆ, ಅಧಿಕೃತವಾಗಿ ಯಾರಿದ್ದಾರೆ ಎಂದು ತಿಳಿದು ಅವರನ್ನೆಲ್ಲ ವಾಪಸ್ ಕಳುಹಿಸಲೇಬೇಕಾಗುತ್ತದೆ” ಎಂದರು. https://ainkannada.com/did-you-know-mango-prevents-weight-gain/ “ಕೇಂದ್ರ ಸರ್ಕಾರ ವಾಪಸ್ ಕಳಿಸುವ ತೀರ್ಮಾನ ತೆಗೆದುಕೊಂಡಿದೆ. ಅನಧಿಕೃತವಾಗಿ ಇರುವುದರ ಬಗ್ಗೆ ಪರಿಶೀಲಿಸಬೇಕು. ಅಧಿಕೃತವಾಗಿ ಇರೋರನ್ನು ಕಳಿಸುವುದಕ್ಕೆ ತಕರಾರಿಲ್ಲ. ಈಗಾಗಲೇ ವೀಸಾ ಕ್ಯಾನ್ಸಲೇಷನ್ ಮಾಡಲಾಗಿದೆ, ವಾಪಸ್ ಹೋಗಿ ಅಂತ ಹೇಳಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಾಪಸ್ ಹೋಗಿ ಅಂತ ಹೇಳೋದಷ್ಟೇ ನಮ್ಮ ಕೆಲಸ. ಅನಧಿಕೃತವಾಗಿ ಇಲ್ಲಿ ಇರುವವರನ್ನು ಪೊಲೀಸರು ಹುಡುಕ್ತಿದ್ದಾರೆ” ಎಂದು ಹೇಳಿದರು.
ಜೀನಿ ಮಾಲೀಕನೀಂದ ಲೈಂಗಿಕ ಕಿರುಕುಳ: ನೊಂದ ಮಹಿಳೆಯಿಂದ ದೂರು ದಾಖಲು https://www.youtube.com/watch?v=blWoc4OaNhc&t=4s
ನಮ್ಮಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತೇವೆ. ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಉಂಗುರಗಳನ್ನು ಧರಿಸುತ್ತಾರೆ. ಕೆಲವರು ತಮ್ಮ ರಾಶಿಚಕ್ರ ಮತ್ತು ನಕ್ಷತ್ರವನ್ನು ಆಧರಿಸಿ ಉಂಗುರಗಳನ್ನು ಧರಿಸುತ್ತಾರೆ. ಉಂಗುರದ ಪ್ರಕಾರವನ್ನು ಅವಲಂಬಿಸಿ, ಯಾವ ಕೈಯಲ್ಲಿ ಉಂಗುರವನ್ನು ಧರಿಸುವುದು ಉತ್ತಮ ಎಂಬುದರ ಕುರಿತು ನಿಯಮಗಳಿವೆ. https://ainkannada.com/did-you-know-mango-prevents-weight-gain/ ಆದಾಗ್ಯೂ, ಈ ಉಂಗುರಗಳನ್ನು ಚಿನ್ನ, ಬೆಳ್ಳಿ ಮತ್ತು ತಾಮ್ರದಿಂದಲೂ ತಯಾರಿಸಲಾಗುತ್ತದೆ ಮತ್ತು ಧರಿಸಲಾಗುತ್ತದೆ. ತಾಮ್ರದ ಉಂಗುರ ಧರಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಪ್ರಯೋಜನಗಳನ್ನು ತಿಳಿಯಲು, ನೀವು ಪೂರ್ಣ ವಿವರಗಳಿಗೆ ಹೋಗಬೇಕು. ತಾಮ್ರದ ಉಂಗುರ ಧರಿಸುವುದರಿಂದ ಹಲವು ಪ್ರಯೋಜನಗಳಿವೆ ಎಂದು ಆಯುರ್ವೇದ ಆರೋಗ್ಯ ತಜ್ಞರು ಹಾಗೂ ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ತಾಮ್ರದಲ್ಲಿರುವ ಖನಿಜಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ತಾಮ್ರವು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ತಾಮ್ರದ ಉಂಗುರ ಧರಿಸುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ತಾಮ್ರದ ಉಂಗುರವನ್ನು ಧರಿಸುವುದರಿಂದ ಮನಸ್ಸಿಗೆ ಶಾಂತಿ…
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಪಟಾಕಿ ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ರನ್ಯಾ ರಾವ್ ಅವರನ್ನು ಬಂಧಿಸಿರುವುದು ಎಲ್ಲಾರಿಗೂ ಗೊತ್ತಿರುವ ವಿಚಾರವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ರನ್ಯಾ ಅವರನ್ನು ವಶಕ್ಕೆ ಪಡೆದಿದ್ದರು. https://ainkannada.com/did-you-know-mango-prevents-weight-gain/ ಇದೀಗ ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಹೀಗಾಗಿ ರನ್ಯಾರಾವ್ 1 ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಎದುರಾಗಿದೆ. ರನ್ಯಾರಾವ್ 100 ಕೆಜಿಯಷ್ಟು ಚಿನ್ನವನ್ನು ವಿದೇಶದಿಂದ ಕಳ್ಳ ಸಾಗಾಣೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ರನ್ಯಾರಾವ್, ತರುಣ್ ಕೊಂಡಾರಾಜ್ ಮತ್ತು ಸಾಹಿಲ್ ಜೈನ್ ವಿರುದ್ಧ ಕಾಫಿಪೋಸಾ ಜಾರಿ ಮಾಡಲಾಗಿದೆ. ಏನಿದು ಕಾಫಿಪೋಸಾ ಕಾಯ್ದೆ? ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು…
ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಕುಮಾರ್ ವಿರುದ್ದ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಾಗಿದೆ. ದಿಲೀಪ್ ಕುಮಾರ್ ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ (Sexual harassment ) ನೀಡುತ್ತಿದ್ದಾರೆ ಎಂದು ಆರೋಪಿಸಿ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಮಹಿಳೆ ಮೇಘನಾ ಎಂಬುವವರು ದೂರು ನೀಡಿದ್ದಾರೆ. ಶಿರಾ ತಾಲೂಕಿನ ಯರಗುಂಟೆಯಲ್ಲಿರುವ ಜೀನಿ ಸಂಸ್ಥೆಯಲ್ಲಿ ಹತ್ತು ತಿಂಗಳ ಹಿಂದೆ ನಾನು ಕೆಲಸಕ್ಕೆ ಸೇರಿದ್ದೆ, ಕಳೆದ 15 ದಿನಗಳಿಂದ ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಕುಮಾರ್ ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿ, ನನ್ನನ್ನು ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ. ನನ್ನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡ್ರೆ ನನ್ನ ಹೆಂಡ್ತಿಗಿಂತ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ವತ್ತಾಯ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. https://www.youtube.com/watch?v=blWoc4OaNhc ಈ ಹಿಂದೆ ದೂರು ನೀಡಿದ್ದರೂ ಎಫ್‌ಐಆರ್ ದಾಖಲಿಸದೆ ಪೊಲೀಸರು ಕೇಸನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಕುಮಾರ್…
ಬೆಂಗಳೂರು: ಪದ್ಮವಿಭೂಷಣ ಪುರಸ್ಕೃತ, ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್(84) ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೆ.ಕಸ್ತೂರಿರಂಗನ್ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು 1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿದ್ದರು. ಕೆ. ಕೃಷ್ಣಸ್ವಾಮಿ ಅವರು ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ಭಾರತ ಸರ್ಕಾರದ ಕಾರ್ಯದ ಬಾಹ್ಯಾಕಾಶ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಡಾ. ಕಸ್ತೂರಿರಂಗನ್ ಅವರು ನಿಧನರಾಗಿದ್ದಾರೆ. https://ainkannada.com/did-you-know-mango-prevents-weight-gain/ ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ 9 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದರು. ಇವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಅದ್ಭುತವಾಗಿ ಮುನ್ನಡೆಸಿದ್ದರು.
ಸೂಪರ್‌ಸ್ಟಾರ್ ರಜನಿಕಾಂತ್ ‘ಜೈಲರ್ 2’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡು-ಕೇರಳ ಗಡಿಯ ಅಟ್ಟಪ್ಪಾಡಿ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಂದು ಚಿತ್ರೀಕರಣಕ್ಕೆ ತೆರಳುತ್ತಿದ್ದಾಗ ಕೊಯಮತ್ತೂರು ಬಳಿಯ ಅನೈಕಟ್ಟಿ ಬೆಟ್ಟಗಳಲ್ಲಿರುವ ಮಾತೇಶ್ವರನ್ ಶಿವನ್ ದೇವಸ್ಥಾನಕ್ಕೆ ರಜನಿ ಅನಿರೀಕ್ಷಿತವಾಗಿ ಭೇಟಿ ಕೊಟ್ಟಿದ್ದಾರೆ. ರಜನಿ ಆಗಮನ ಸುದ್ದಿ ಕೇಳುತ್ತಿದ್ದ ಅಭಿಮಾನಿಗಳು ಜಮಾಯಿಸಿದ್ದು, ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ‘ಜೈಲರ್ 2’ ಸಿನಿಮಾ 2023 ರ ಬ್ಲಾಕ್‌ಬಸ್ಟರ್ ಜೈಲರ್ ಚಿತ್ರದ ಮುಂದುವರಿದ ಭಾಗವಾಗಿದ್ದು, ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ. ಜೈಲರ್‌ನಲ್ಲಿ, ರಜನಿಕಾಂತ್ “ಟೈಗರ್” ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ, ರಮ್ಯಾ ಕೃಷ್ಣನ್, ಯೋಗಿ ಬಾಬುಸ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಜೈಲರ್ 2ಗೂ ಮೊದಲೇ ರಜನಿಯ ಕೂಲಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದಾರೆ.