ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ. ತಾಯಿ ಆಗಿ ಬಡ್ತಿ ಪಡೆದ ಮೇಲೆ ಅವರು ಇಂಡಸ್ಟ್ರೀಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಶಾರುಖ್ ಖಾನ್ ನಟಿಸಲಿರೋ ಬಹು ನಿರೀಕ್ಷಿತ ಕಿಂಗ್ ಸಿನಿಮಾದ ಶೂಟಿಂಗ್ ಇಷ್ಟರಲ್ಲೇ ಆರಂಭವಾಗಲಿದೆ. ಈ ಸಿನಿಮಾದ ಅನೌನ್ಸ್ ಬೆನ್ನಲ್ಲೇ ಸಿನಿಮಾದ ನಾಯಕಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಇದಕ್ಕೀಗ ಉತ್ತರ ಸಿಕ್ಕಿದ್ದು ದೀಪಿಕಾ ಪಡುಕೋಣೆ, ಶಾರುಖ್ಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಇದೇ ತಿಂಗಳ 18 ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಡಾರ್ಲಿಂಗ್ ಪ್ರಭಾಸ್ ನಟಿಸುತ್ತಿರುವ ಸ್ಪಿರಿಟ್ ಸಿನಿಮಾಗೂ ದೀಪಿಕಾನೇ ನಾಯಕಿಯಂತೆ. ಅಕ್ಟೋಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಹಿಂದೆ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಒಟ್ಟಿಗೆ ನಟಿಸಿದ್ದರು. ಆದಾದ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ. ಅನಿಮಲ್, ಅರ್ಜುನ್ ರೆಡ್ಡಿಸಿನಿಮಾಗಳ ಸಾರಥಿ ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್…
Author: Author AIN
ಸೆಲೆಬ್ರಿಟಿಗಳ ಲೈಫ್ ಕಲರ್‌ಫುಲ್, ಅಷ್ಟೇ ದುಬಾರಿ.. ಅವರು ಹಾಕೋ ಬಟ್ಟೆಯಿಂದ ಹಿಡಿದು ತಿನ್ನೋ ಊಟ ಕೂಡ ಹೈಫೈ ಆಗಿರುತ್ತೇ. ಲಕ್ಷ ಲಕ್ಷ ಬೆಲೆಯ ಬಟ್ಟೆ ಹಾಕ್ತಾರೆ. ಕೋಟಿ ಕೋಟಿ ಕಾರಿನಲ್ಲಿ ಓಡಾಡ್ತಾರೆ. ಸದ್ಯ ಟಾಲಿವುಡ್ ಮನ್ಮಥ ನಾಗಾರ್ಜುನ್ ಅಕ್ಕಿನೇನಿ ಪುತ್ರ ಅಕ್ಕಿನೇನಿ ನಾಗಚೈತನ್ಯ ಪತ್ನಿ ಶೋಭಿತಾ ಧೂಳಿಪಾಲ ತೊಟ್ಟ ಸೀರೆ ಎಲ್ಲರ ಕಣ್ಣು ಕುಕ್ಕಿದೆ. ನಿನ್ನೆ ಮುಂಬೈನ ಜಿಯೋವರ್ಲ್ಡ್ ಸೆಂಟರ್‌ನಲ್ಲಿ ವೇವ್ಸ್ ಶೃಂಗಸಭೆ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಹೇಮಾ ಮಾಲಿನಿ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ತೆಲುಗಿನಿಂದ ನಟ ಚಿರಂಜೀವಿ, ನಟ ನಾಗಾರ್ಜುನ್ ಹಾಗೂ ಪತ್ನಿ ಶೋಭಿತಾ ಕೂಡ ವೇವ್ಸ್ ನಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶೋಭಿತಾ ಮಲ್ಲಿಗೆ ಹೂವು ಮುಡಿದು, ಹಣೆಗೆ ಕುಂಕುಮ ಹಾಕಿ ಭಾರತೀಯ ನಾರಿಯಂತೆ ಮಿಂಚಿದ್ದಾರೆ. ಶೋಭಿತಾ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಶೋಭಿತಾ ತೊಟ್ಟ ಸೀರೆ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿರೋದು. ಆಲಿವ್ ಗ್ರೀನ್ ಟಿಶ್ಯೂ ಕಸೂತಿ ಸೀರೆಯ ಬೆಲೆ ಬರೋಬ್ಬರಿ 4 ಲಕ್ಷವಂತೆ.…
ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದ ಛಲಪುತ್ರಿ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಚಲಪತಿ ಪುತ್ರ ಹರ್ಷವರ್ಧನ್ ಒಟ್ಟು 625 ಅಂಕಗಳಿಗೆ 595 ಅಂಕಗಳನ್ನು ಪಡೆದುಕೊಂಡಿದ್ದು, ಇಡೀ ಕುಟುಂಬ ಸಂತಸಕೊಂಡಿದೆ. ಕನ್ನಡದಲ್ಲಿ 121 ಅಂಕ, ಇಂಗ್ಲೀಷ್‌ನಲ್ಲಿ 93, ಹಿಂದಿಯಲ್ಲಿ 100ಕ್ಕೂ 100, ಗಣಿತದಲ್ಲಿ 97, ವಿಜ್ಞಾನದಲ್ಲಿ 86 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಸೇರಿ ಅತ್ಯುತ್ತಮ ಸಾಧನೆ ತೋರಿಸಿದ್ದಾನೆ. ಮಗನ ಸಾಧನೆಗೆ ತಂದೆ ಚಲಪತಿಗೆ ಖುಷಿಯಾಗಿದ್ದಾರೆ. ಚಲಪತಿ ಅವರಿ ಇಬ್ಬರೂ ಮಕ್ಕಳು. ಅಮೂಲ್ಯ ಹಾಗೂ ಹರ್ಷವರ್ಧನ್. ಇವರಿಬ್ಬರನ್ನು ಪುನೀತ್ ರಾಜ್‌ಕುಮಾರ್ ಓದಿಸುತ್ತಿದ್ದರು. 3 ವರ್ಷದ ಹಿಂದೆ ಕೂಡ ಇಬ್ಬರ ಶಾಲಾ ಶುಲ್ಕವನ್ನು ಪುನೀತ್ ರಾಜ್‌ಕುಮಾರ್ ಭರಿಸಿದ್ದನ್ನು ಚಲಪತಿ ಅವರು ನೆನಪು ಮಾಡಿಕೊಂಡಿದ್ದರು. ಅಪ್ಪು ಸರ್ ಆಸೆಯಂತೆ ಅಮೂಲ್ಯ ಹಾಗೂ ಹರ್ಷವರ್ಧನ್ ಇಬ್ಬರೂ…
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸಾಮಾಜಿಕ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಬಡ ಕುಟುಂಬಳಿಗೆ ಸೂರು ಕಟ್ಟಿಸಿ ಕೊಡುವ ಭರವಸೆ ನೀಡಿದ್ದರು. ನುಡಿದಂತೆ ರೂಪೇಶ್ ಶೆಟ್ಟಿ ನಡೆದಿದ್ದು, ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಈ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಮನೆಗೆ ʻಪ್ರೇಮ ನಿಲಯʼ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ರಿಯಲ್ ಲೈಫ್‌ನಲ್ಲಿಯೂ ರೂಪೇಶ್ ಶೆಟ್ಟಿ ಹೀರೋ ಆಗಿದ್ದಾರೆ. ರೂಪೇಶ್ ಶೆಟ್ಟಿ “ನೆಮ್ಮದಿ” ಅನ್ನುವ ಒಂದು ಚಾರಿಟೇಬಲ್ ಟ್ರಸ್ಟ್ ಹುಟ್ಟುಹಾಕಿದ್ದಾರೆ. ಈ ನೆಮ್ಮದಿ ಸಂಸ್ಥೆ ಮೂಲಕ ಮತ್ತಷ್ಟು ಒಳ್ಳೆ ಕೆಲಸ ಮಾಡೋ ಉದ್ದೇಶ ಇದೆ. ಈ ಒಂದು ಸಂಸ್ಥೆಯನ್ನ ಹೊಸ ಮನೆಯ ಗೃಹಪ್ರವೇಶದ ದಿನವೇ ಉದ್ಘಾಟಿಸಿದ್ದಾರೆ. ಹಾಗೆ ಹೊಸ ಮನೆಯ ಅಂಗಳದಲ್ಲಿಯೇ ನಿಂತುಕೊಂಡು ವಿಷಯ ಹಂಚಿಕೊಂಡಿದ್ದಾರೆ. “ಕಷ್ಟದಲ್ಲಿರುವ ಕುಟುಂಬಕ್ಕೆ ಮನೆ ಕಟ್ಟಿ ಕೊಡುತ್ತೇನೆ ಎಂದು ನಾನು ನನ್ನ ಹುಟ್ಟುಹಬ್ಬದ ದಿನ ಒಂದು ವಿಡಿಯೋ ಮಾಡಿದ್ದೆ. ಇವತ್ತು ಆ ಮನೆಯ ಕೆಲಸ ಮುಗಿದು ಗೃಹ ಪ್ರವೇಶ ನಡೆಯುತ್ತಿದೆ.…
ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘A for ಆನಂದ್’ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿದೆ. ಶುಭ ಶುಕ್ರವಾರವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿದರು. ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಿದರು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ಮುಹೂರ್ತದ ಬಳಿಕ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆ ಮಕ್ಕಳು. ‘A for ಆನಂದ್’ ಮಕ್ಕಳ ಸಿನಿಮಾವಾಗಿರುವುದರಿಂದ ವಿಶೇಷವಾಗಿ ಸುದ್ದಿಗೋಷ್ಠಿ ನಡೆಸಲಾಯಿತು. ವೇದಿಕೆ ಅತಿಥಿಗಳನ್ನು ಮಕ್ಕಳು ಸ್ವಾಗತಿಸಿದರು. ಇದೇ ವೇಳೆ ಹಾಡು ಹೇಳಿ ನೆರೆದಿದ್ದವರನ್ನು ಮಕ್ಕಳು ರಂಜಿಸಿದರು. ಬಳಿಕ ಮಾತನಾಡಿದ ಶಿವಣ್ಣ, ಶ್ರೀನಿ ಜೊತೆ ಎರಡನೇ ಸಿನಿಮಾ. ಅವರು ನನಗೆ ಹದಿನೈದು ವರ್ಷದಿಂದ ಸ್ನೇಹಿತರು. ಶಿವ ಸಿನಿಮಾಗಾಗಿ ಫೋಟೋಶೂಟ್ ಮಾಡಿದ್ದರು. ಅಂದಿನಿಂದ ಪರಿಚಯ. ಅಂದಿನಿಂದ ಒಂದು ಕಥೆ ಇದೆ ಎಂದು ಹೇಳುತ್ತಿದ್ದರು. ತುಂಬಾ ಬಾರಿ…
ಕನ್ನಡ ಚಿತ್ರರಂಗ ಭಾಷೆ, ಗಡಿ ದಾಟಿ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸಾಧನೆ ಮಾಡಿದೆ. ಕೆಜಿಎಫ್, ಕಾಂತಾರ, ಚಾರ್ಲಿ 777 ಸಿನಿಮಾಗಳು ಇಂಡಿಯನ್ ಸಿನಿ ಇಂಡಸ್ಟ್ರೀ ಇತಿಹಾಸದಲ್ಲಿ ತಿಕ್ಕಿ ಅಳಿಸಿ ಹಾಕದಂತಹ ದಾಖಲೆ ಬರೆದಿವೆ. ಆದ್ರೆ ಇಂತಹ ಚಿತ್ರರಂಗವನ್ನು ಕಡೆಗಣಿಸಲಾಗುತ್ತಿದೆಯೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ..ನಿನ್ನೆಯಿಂದ ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗಸಭೆ. ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ ವೇವ್ಸ್-ವಿಶ್ವ ಆಡಿಯೋ ವಿಷುಯಲ್ ಎಂಟರ್ಟೈನ್ಮೆಂಟ್) ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಮುಂಬೈನಲ್ಲಿ ಬಹಳ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಈ ಸಭೆ ಕನ್ನಡ ಚಿತ್ರರಂಗ ಹೊರತುಪಡಿಸಿ ಬೇರೆ ಇಂಡಸ್ಟ್ರೀಯ ತಾರೆಯರು ಭಾಗಿಯಾಗಿದ್ದಾರೆ. ಈ ಶೃಂಗಸಭೆಗೆ ಕನ್ನಡಿಗರಿಗೆ ಆಹ್ವಾನ ನೀಡಿಲ್ವಾ ಎಂಬ ಚರ್ಚೆ ಶುರುವಾಗಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೀರಕಪುತ್ರ ಶ್ರೀನಿವಾಸ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು. “ಕನೆಕ್ಟಿಂಗ್ ಕ್ರಿಯೇಟರ್ಸ್, ಕನೆಕ್ಟಿಂಗ್ ಕಂಟ್ರಿಸ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಭಾರತವನ್ನು ಮಾಧ್ಯಮ,…
ಹೌಸ್ ಅರೆಸ್ಟ್ ಶೋ ಬ್ಯಾನ್ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಸಭ್ಯತೆಯ ಗಡಿ ಮೀರಿದ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಲೈಂಗಿಕ ಭಂಗಿಗಳ ಪ್ರದರ್ಶಿಸುವುದು, ಎಲ್ಲರ ಎದುರು ಬಟ್ಟೆ ಬಿಚ್ಚಿಸುವುದು, ಸೇರಿದಂತೆ ಅನೇಕ ಅಶ್ಲೀಲ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಇದರ ವಿರುದ್ಧ ಹಲವು ಟೇಕೆಗಳು ವ್ಯಕ್ತವಾಗುತ್ತಿವೆ. ಅಜಾಜ್ ಖಾನ್ ನಡೆಸಿಕೊಡುವ ʻಹೌಸ್ ಅರೆಸ್ಟ್ʼ ಅಶ್ಲೀಲ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಟೇಕೆಗೆ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ಅಶ್ಲೀಲತೆಯನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ವೀಕ್ಷಕರು ಆರೋಪಿಸಿ ವ್ಯಕ್ತಪಡಿಸಿದ್ದಾರೆ. ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸ್ಟ್ರೀಮಿಂಗ್ ಅಪ್ಲಿಕೇಶನ್ ಅನ್ನು ಸರ್ಕಾರ ಇನ್ನೂ ಏಕೆ ನಿಷೇಧಿಸಿಲ್ಲ ಎಂದು ಕೇಳಿದ್ದಾರೆ. “ಉಲ್ಲು ಆಪ್ ಮತ್ತು ಆಲ್ಟ್ ಬಾಲಾಜಿಯಂತಹ ಆಪ್‌ಗಳು ಅಶ್ಲೀಲ ವಿಷಯದ ಆಪ್‌ಗಳ ಮೇಲಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಷೇಧದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ ಎಂದು ನಾನು ಸ್ಥಾಯಿ ಸಮಿತಿಯಲ್ಲಿ ಪ್ರಸ್ತಾಪಿಸಿದ್ದೇನೆ. ನಾನು ಇನ್ನೂ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ” ಎಂದು ಸಂಸದೆ ಪ್ರಿಯಾಂಕಾ…
ಸಿಂಪಲ್ ಸ್ಟಾರ್ ರಕ್ಷಿಣ್ ಶೆಟ್ಟಿ ಕಾಣೆಯಾಗಿದ್ದಾರೆ. ಹೀಗಂತಾ ನಾವ್ ಹೇಳ್ತಿಲ್ಲ. ಇದು ಅವರ ಅಭಿಮಾನಿಗಳ ಮಾತು. 777 ಚಾರ್ಲಿ ಸಿನಿಮಾ ಆದ್ಮೇಲೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ರಕ್ಷಿತ್ ಆ ನಂತರೆ ಫುಲ್ ಸೈಲೆಂಟ್ ಆಗಿದ್ದಾರೆ. ಅವರ ಸುದ್ದಿಯೇ ಇಲ್ಲ. ಎಲ್ಲೋದ್ರು ಸಿಂಪಲ್ ಸ್ಟಾರ್ ಅಂತಾ ಹುಡುಕಲು ಶುರು ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಬಳಿಕ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೋನಿ ಸಿನಿಮಾ ಟೇಕಾಫ್ ಮಾಡಬೇಕಿತ್ತು. ಹೊಂಬಾಳೆ ಬ್ಯಾನರ್‌ನಡಿ ಈ ಚಿತ್ರ ಮೂಡಿ ಬರಬೇಕಿತ್ತು. ಸಣ್ಣ ಟೀಸರ್ ಬಿಟ್ಟು ಥ್ರಿಲ್ ಹೆಚ್ಚಿಸಿದ್ದ ಸಿಂಪಲ್ ಸ್ಟಾರ್ ಈಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡೋದಿಕ್ಕೆ ರೆಡಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಬಹುನಿರೀಕ್ಷಿತ ಸಿನಿಮಾ ರಿಚರ್ಡ್ ಆಂಟೋನಿ ಶೀಘ್ರದಲ್ಲೇ ಸೆಟ್ಟೇರಲಿದ್ದು, ಮುಂದಿನ ವರ್ಷ ಬಿಡುಗಡೆಯಾಗುವುದು ಖಚಿತ ಅಂತಾ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಹೇಳಿಕೇಳಿ ರಿಚರ್ಡ್ ಆಂಟೋನಿ ಸಿನಿಮಾ ಉಳಿದವರು ಕಂಡಂತೆ ಸಿನಿಮಾದ ಪ್ರೀಕ್ವೆಲ್. ಉಡುಪಿಯಲ್ಲಿಯೇ ಇಡೀ ಸಿನಿಮಾದ ಚಿತ್ರೀಕರಣ ನಡೆಯುವ…
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಶ್ರೀ ಸಂಚಾರಿ ವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ `ಪುತ್ತೂರು ಭರತ್’ ಎಂದೇ ಜನಪ್ರಿಯರಾಗಿದ್ದ ಶ್ರೀ ಭರತ್ ಕುಮಾರ್ ನಿನ್ನೆ ರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಪುತ್ತೂರಿನ, ಪಡ್ನೂರು ಗ್ರಾಮದ ಮತಾವು ಮನೆಯ ದಿ. ಹರೀಶ ಗೌಡ ಮತ್ತು ಜಯಂತಿ ದಂಪತಿಯ ಹಿರಿಯ ಪುತ್ರ ಭರತ್ 43 ವರ್ಷ ಪ್ರಾಯದವರಾಗಿದ್ದು, ಬೆಂಗಳೂರಿನಲ್ಲಿ ಸಿವಿಲ್ ಬಿಲ್ಡರ್ ಆಗಿ ಸ್ವಯಂವೃತ್ತಿ ನಿರತರಾಗಿದ್ದರು. ಭರತ್ ಅವರು ಬೆಂಗಳೂರು ಮತ್ತು ಪುತ್ತೂರು ಕಂಬಳ ಕೂಟಗಳ ಸದಸ್ಯರೂ ಆಗಿದ್ದು ಜನಾನುರಾಗಿಯಾಗಿದ್ದರು. ಮೃತ ಭರತ್ ಅವರು ಅಮ್ಮ, ಪತ್ನಿ ರವಿಕಲಾ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಮಗ ನಿಹಾರ್ ಮತ್ತು ಮಗಳು ಹಂಸಿಕಾ, ತಮ್ಮ ಆದರ್ಶ, ತಂಗಿ ಸೌಮ್ಯಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದ್ದು, ಸಿನಿಮಾ ರಂಗದಲ್ಲಿ ಇನ್ನಷ್ಟು ಸಾಧಿಸುವ ಕನಸು ಹೊತ್ತಿದ್ದ ಭರತ್, ಎಳೆಯರದಲ್ಲೇ ದೂರವಾಗಿದ್ದು ತುಂಬಲಾರದ ನಷ್ಟ.
ಖ್ಯಾತ ಗಾಯ ಸೋನು ನಿಗಮ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ಭಾಷೆ ಹಾಗೂ ಕನ್ನಡ ಹಾಡುಗಳ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಲೇ ಸೋನು ನಿಗಮ್ ವಿವಾದತ್ಮಾಕ ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರಿನನಲ್ಲಿ ನಡೆದ ಸಂಗೀತ ಕಾರ್ಯಕ್ರೆಮದಲ್ಲಿ ಅವರು ಮಾತನಾಡಿದ ಮಾತುಗಳು ಕನ್ನಡಿಗರನ್ನು ಕೆರಳಿಸಿದೆ. ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಸೋನು ನಿಗಮ್ ಗೆ ಅಭಿಮಾನಿಗಳು ಮನವಿ ಮಾಡಿದರು. ಈ ವೇಳೆ . ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಮಾತಾಡುವ ಭರದಲ್ಲಿ ಪಹಲ್ಗಾಮ್ ದಾಳಿ ಹಾಗೂ ಕರ್ನಾಟಕದ ಬಗ್ಗೆ ಮಾತಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ದಿ ಬೆಸ್ಟ್ ಸಾಂಗ್ಸ್ ಹಾಡಿರೋದು ಹೆಚ್ಚು ಕನ್ನಡದಲ್ಲಿ. ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ. ತುಂಬಾ ಆಸೆಯಿಂದಲೇ ಇಲ್ಲಿ ಬರ್ತೇನೆ. ಸಾಮಾನ್ಯವಾಗಿ ಕನ್ನಡ ಸಾಂಗ್ಸ್ ಹಾಡಿ ಅಂತ ಕೇಳ್ತಾರೆ. ಯಾವುದೇ…