Author: Author AIN

ಯಾವುದೇ ಗಾಡ್‌ ಫಾದರ್‌ ಇಲ್ಲದೇ ತಮಿಳು ಇಂಡಸ್ಟ್ರೀಯಲ್ಲಿ ಸ್ಟಾರ್‌ ಪಟ್ಟ ಪಡೆದವರು ಥಲಾ ಅಜಿತ್ ಕುಮಾರ್. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅಜಿತ್ ಸಿನಿಮಾಗಳನ್ನು ಹಬ್ಬದಂತೆ ಸೆಲೆಬ್ರೆಟ್‌ ಮಾಡುವ ದೊಡ್ಡ ಅಭಿಮಾನಿ ಬಳಗವಿದೆ. ಝೀರೋದಿಂದ ಹೀರೋ ಆದ ಅಜಿತ್‌ ಸಿನಿಮಾ ಇಂಡಸ್ಟ್ರೀಗೆ ಬಂದಿದ್ದೇ ರೋಚಕ. ಅಜಿತ್‌ ಕಲಾ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಾವು ಸಿನಿಮಾ ಇಂಡಸ್ಟ್ರೀಗೆ ಪದಾರ್ಪಣೆ ಮಾಡಿದ್ದೇಕೆ ಅನ್ನೋದನ್ನು ರಿವೀಲ್‌ ಮಾಡಿದ್ದಾರೆ. ತಮಿಳು ಇಂಡಸ್ಟ್ರೀಯ ಐಕಾನ್ ಆಗಿರುವ ಅಜಿತ್‌, ತಮ್ಮನ್ನು ತಾವು ಆಕಸ್ಮಿಕ ನಟ ಎಂದು ಪರಿಗಣಿಸುವುದಾಗಿ ಹೇಳಿಕೊಂಡಿದ್ದು, ಅವರಿಗೆ ಸಿನಿಮಾ ಎಂದಿಗೂ ಮೊದಲ ಆಯ್ಕೆಯಾಗಿರಲಿಲ್ಲ. ಸಾಲ ತೀರಿಸಲು ಮಾಡೆಲಿಂಗ್‌ ಶುರು ಮಾಡಿದೆ. ಆ ನಂತರ ಇಂಡಸ್ಟ್ರೀಗೆ ಬಂದಿರುವುದಾಗಿ ಹೇಳಿದ್ದಾರೆ. ಅಜಿತ್ 18 ವರ್ಷದವನಾಗಿದ್ದಾಗ ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರೇಸಿಂಗ್‌ ಗೀಳು ಅಂಟಿಸಿಕೊಂಡಿದ್ದ ಅವರು, ಅದಕ್ಕಾಗಿ ರೇಸಿಂಗ್‌ ಹೋಗಲು ಮಾಡೆಲಿಂಗ್ ಕೈಗೆತ್ತಿಕೊಂಡರು. ಆಗ ಅವರಿಗೆ…

Read More

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ರಾಮಾಯಣ ಸಿನಿಮಾದ ಶೂಟಿಂಗ್ ಹಿನ್ನೆಲೆಯಲ್ಲಿ ಟಾಕ್ಸಿಕ್ ಸಿನಿಮಾದಿಂದ ಸಣ್ಣದೊಂದು ಬ್ರೇಕ್ ತಗೊಂಡಿದ್ದಾರೆ ಯಶ್. ಇದೀಗ ಟಾಕ್ಸಿಕ್ ಕುರಿತು ಇಂಪಾರ್ಟೆಂಡ್ ಅಪ್ಡೇಟ್ ಒಂದು ಸಿಕ್ಕಿದೆ. ಟಾಕ್ಸಿಕ್ ಸಿನಿಮಾವನ್ನು ಆರು ಭಾಷೆಗಳಲ್ಲಿ ಬಿಡುಗಡೆ ಮಾಡೋಕೆ ಚಿತ್ರತಂಡ ಸಿದ್ಧತೆ ನಡೆಸಿದೆ.. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದೆ ಭಾಷೆಯಲ್ಲಿ ಬಿಡುಗಡೆ ಆಗ್ತಿದ್ದು, ಇಂಗ್ಲೀಷ್ ಮೂಲಕ ವಿಶ್ವದಾದ್ಯಂತ ಪ್ರದರ್ಶನ ಮಾಡಲು ಟಾಕ್ಸಿಕ್ ಟೀಂ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಟಾಕ್ಸಿಕ್ ಸಿನಿಮಾದಲ್ಲಿ ಹಾಲಿವುಡ್‌ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಚಿತ್ರವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒಟ್ಟಿಗೆ ಶೂಟ್ ಮಾಡಲಾಗುತ್ತಿದೆ. ಈ ಸಿನಿಮಾಗೆ ಹಾಲಿವುಡ್‌ನ ಫೇಮಸ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಆಕ್ಷನ್ ದೃಶ್ಯಗಳನ್ನು ಡೈರೆಕ್ಷನ್ ಮಾಡಿದ್ದಾರೆ. ಯಶ್ ಮತ್ತು ಕೆವಿಎನ್ ಸಂಸ್ಥೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ಕೆಜಿಎಫ್ 2 ಹಿಟ್ ಆದ್ಮೇಲೆ ಯಶ್ ಅವರು ಗೀತು ಮೋಹನ್ ದಾಸ್…

Read More

ಬೆಂಗಳೂರು: ಜನಗಣತಿ ಯೊಂದಿಗೆ ಜಾತಿಗಣತಿ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ  ಸಮೀಕ್ಷೆಯೂ ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು  ಆಗ್ರಹಿಸಿದರು. ಅವರು ಇಂದು ಕಾವೇರಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದರು. ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿ ಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು.‌ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು ಎಂದರು.ರಾಹುಲ್ ಗಾಂಧಿಯವರು ಕೂಡಾ ಇದನ್ನೇ ಆಗ್ರಹಿಸಿದ್ದು, ಜಾತಿ ಗಣತಿ ವೇಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು  ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. https://ainkannada.com/do-you-leave-the-dishes-unwashed-after-dinner-a-story-you-must-watch/ ಬಡವರು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಅನುಕೂಲ ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳುತ್ತದೆ. ಜಾತಿ ಗಣತಿ ಯೊಂದಿಗೆ ಸಾಮಾಜಿಕ, ಆರ್ಥಿಕ ,  ಶೈಕ್ಷಣಿಕ ಮಾಡಿದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಲು ಅನುಕೂಲವಾಗುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸಮೀಕ್ಷೆ…

Read More

ಬೆಂಗಳೂರು: ‌ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷರ ಮಾರ್ಗದರ್ಶನ ಪ್ರಮುಖ ಪಾತ್ರವಹಿಸುತ್ತದೆ. ಇಂದು ದೇಶದಲ್ಲಿ ಉನ್ನತ ಸ್ಥಾನದಲ್ಲಿರುವವರು ಸರ್ಕಾರಿ ಶಾಲೆಗಳಿಂದ ಬೆಳೆದು ಬಂದವರು ಎಂದು ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಹೇಳಿದರು. ಪುಣ್ಯ ಫೌಂಡೇಶನ್‌ ಟ್ರಸ್ಟ್‌, ಮೀಡಿಯಾ ಕನೆಕ್ಟ್‌ ಸಂಸ್ಥೆ ವತಿಯಿಂದ ಇಡಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ (ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ) 2000 ರಿಂದ 2001ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿಕೊಂಡರು. ಇದರ ನಿಮಿತ್ತ ಇಂದು ನಗರದ ಭಾರತೀಯ ವಿದ್ಯಾಭವನದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆ.ವಿ ಪ್ರಭಾಕರ್ ಅವರು, ಪುಣ್ಯ ಫೌಂಡೇಶನ್ ಪುಣ್ಯದ ಕೆಲಸ ಮಾಡ್ತಿದೆ. ನಮ್ಮ ಜೀವನದಲ್ಲಿ ಶಿಕ್ಷಕರ ಸ್ಥಾನ ದೊಡ್ಡದು. ನನ್ನನ್ನು ತಿದ್ದಿ ತೀಡಿದ ಶಿಕ್ಷಕರಿಂದ ಇವತ್ತು ನಾನಿಲ್ಲಿ ನಿಂತಿದ್ದೇನೆ. ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವವರು ಶಿಕ್ಷಕರು. ಇತ್ತೀಚೆಗೆ ನಾನು ನನ್ನ ಶಾಲೆಗೆ ಭೇಟಿ ನೀಡಿ…

Read More

ಮುಖದ ಮೇಲೆ ನೆರಿಗೆಗಳು ಮೂಡುವುದು ವೃದ್ದಾಪ್ಯದ ಲಕ್ಷಣವಾಗಿರುವ ಕಾರಣ ಹೀಗೆ ಕಾಣಿಸಿಕೊಳ್ಳಲು ಯಾರಿಗೂ ಇಷ್ಟವಾಗುವುದಿಲ್ಲ. ಬಟ್ಟೆಗಳಿಗೇ ನೆರಿಗೆ ಮೂಡಿಸಲು ನಮಗೆ ಇಷ್ಠವಿಲ್ಲದಿರುವಾಗ ಮುಖದ ಮೇಲೆ ಇರುವುದು ಇಷ್ಟ ವಾಗುತ್ತದೆಯೇ? ಚರ್ಮದಲ್ಲಿ ಆರ್ದತೆ ಮತ್ತು ಸೆಳೆತ ಇಲ್ಲವಾದಾದ ನೆರಿಗೆ ಸಹಜವಾಗಿ ಮೂಡುತ್ತದೆ. ಇದಕ್ಕೆ ವಯಸ್ಸು, ವಾತಾವರಣ ಹಾಗೂ ಕೆಲವು ಅನುವಂಶಿಕ ಗುಣಗಳು ಕಾರಣವಾಗಿವೆ. https://ainkannada.com/do-you-leave-the-dishes-unwashed-after-dinner-a-story-you-must-watch/ ಈ ಸ್ಥಿತಿಗೆ ಕಾರಣ ನಿರ್ಲಕ್ಷ್ಯ ಮತ್ತು ಸರಿಯಾದ ಆರೈಕೆಯ ಕೊರತೆ ಎನ್ನುತ್ತಾರೆ ಚರ್ಮ ತಜ್ಞರು. ಈಗ ನೀವು ಹೇಗಾದರೂ ಕೈಗಳಿಂದ ಸುಕ್ಕುಗಳನ್ನು ತೆಗೆದು ಹಾಕಲೇಬೇಕು ಎಂದು ಯೋಚಿಸುತ್ತಿದ್ದರೆ ನಾವು ನಿಮಗಿಲ್ಲಿ ಸುಲಭವಾದ ಐಡಿಯಾ ಕೊಡುತ್ತಿದ್ದೇವೆ ನೋಡಿ ಓದಿ. ​ನಿಂಬೆ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ನಿಮಗೆಲ್ಲ ಗೊತ್ತಿರುವ ಹಾಗೆ ವಿಟಮಿನ್ ಸಿ ಅಂಶ ಒಂದು ಅತ್ಯಂತ ಬಲವಾದ ಆಂಟಿ ಆಕ್ಸಿಡೆಂಟ್ ಅಂಶವಾಗಿದ್ದು, ತನ್ನ ಬ್ಲೀಚಿಂಗ್ ಗುಣಲಕ್ಷಣಗಳಿಂದ, ವಯಸ್ಸಾಗುತ್ತಿದ್ದಂತೆ ಮುಖದ ಮೇಲೆ ಕಂಡುಬರುವ ಕಲೆಗಳು ಮತ್ತು ಗೆರೆಗಳನ್ನು ಅತ್ಯಂತ ಸುಲಭವಾಗಿ ಹೋಗಲಾಡಿಸುತ್ತದೆ. ನಿಮ್ಮ…

Read More

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಐಪಿಎಲ್ 2025 ರ ಮಧ್ಯದಲ್ಲಿ ದೆಹಲಿ ಹೈಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದೆ. ಬಿಸಿಸಿಐ ಇತ್ತೀಚೆಗೆ ಐಪಿಎಲ್‌ನಲ್ಲಿ ರೋಬೋಟ್ ನಾಯಿಯನ್ನು ಪರಿಚಯಿಸಿತು. ಈ ರೋಬೋಟ್ ನಾಯಿಯನ್ನು ಐಪಿಎಲ್ ಪಂದ್ಯಗಳ ಟಾಸ್ ಸಮಯದಲ್ಲಿ ಬಳಸಲಾಗುತ್ತದೆ. ಈ ನಾಯಿ ಅಭ್ಯಾಸದ ಸಮಯದಲ್ಲಿ ಆಟಗಾರರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುವುದರಲ್ಲಿ ನಿರತವಾಗಿದೆ. ಕೆಲವು ದಿನಗಳ ಹಿಂದೆ, ಒಂದು ರೋಬೋಟ್ ನಾಯಿಗೆ ಚಂಪಕ್ ಎಂದು ಹೆಸರಿಸಲಾಯಿತು. ಈಗ ಈ ಹೆಸರು ಬಿಸಿಸಿಐಗೆ ತಲೆನೋವನ್ನುಂಟು ಮಾಡಿದೆ. https://ainkannada.com/do-you-leave-the-dishes-unwashed-after-dinner-a-story-you-must-watch/ ವಾಸ್ತವವಾಗಿ, ಪ್ರಸಿದ್ಧ ಮಕ್ಕಳ ನಿಯತಕಾಲಿಕೆಯ ಹೆಸರು ಕೂಡ ಚಂಪಕ್, ಅದಕ್ಕಾಗಿಯೇ ಈ ಕಂಪನಿಯು ಬಿಸಿಸಿಐ ವಿರುದ್ಧ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿತ್ತು. ರೋಬೋಟ್ ಶ್ವಾನಕ್ಕೆ ಚಂಪಕ್ ಎಂದು ಹೆಸರಿಸುವ ಮೂಲಕ ಬಿಸಿಸಿಐ ನೋಂದಾಯಿತ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ಪತ್ರಿಕೆಯ ನಿರ್ದೇಶಕರ ಮಂಡಳಿ ಆರೋಪಿಸಿದೆ. ರೋಬೋಟ್ ಶ್ವಾನಕ್ಕೆ ಚಂಪಕ್ ಎಂದು ಹೆಸರಿಸಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಬಿಸಿಸಿಐಗೆ ನೋಟಿಸ್…

Read More

ವಾಷಿಂಗ್ಟನ್‌: ಕಾಶ್ಮೀರದಲ್ಲಿ ನಡೆದ ಈ ಅಸಮರ್ಪಕ ದಾಳಿಯ ತನಿಖೆಗೆ ಪಾಕಿಸ್ತಾನ ಸಹಕರಿಸಬೇಕು ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ಕಳೆದ ಏಪ್ರಿಲ್ 22ರಂದು ಪಾಕಿಸ್ತಾನ ಉಗ್ರರು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನರಮೇಧ ನಡೆಸಿದರು. ಬೈಸರನ್ ವ್ಯಾಲಿಗೆ ಪ್ರವಾಸಕ್ಕೆ ಹೋಗಿದ್ದ 26 ಪ್ರವಾಸಿಗರನ್ನ ಬಲಿ ಪಡೆದರು. ಈ ವಿಚಾರವಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಕರೆ ಮಾಡಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಾತುಕತೆ ನಡೆಸಿದ್ದಾರೆ. https://ainkannada.com/do-you-leave-the-dishes-unwashed-after-dinner-a-story-you-must-watch/ ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕರಿಸಲು ಯುಎಸ್ ಬದ್ಧವಾಗಿದೆ ಎಂದು ರುಬಿಯೊ ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರದಲ್ಲಿ ನಡೆದ ಈ ಅಸಮರ್ಪಕ ದಾಳಿಯ ತನಿಖೆಗೆ ಪಾಕಿಸ್ತಾನ ಸಹಕರಿಸಬೇಕು ಎಂದು ಅಮೆರಿಕ ಒತ್ತಾಯಿಸಿದೆ. ಪಹಲ್ಗಾಮ್‌ ದಾಳಿಯಿಂದ ಜೀವ ಕಳೆದುಕೊಂಡವರ ಬಗ್ಗೆ ಅಮೆರಿಕ ವಿಷಾದ ವ್ಯಕ್ತಪಡಿಸಿತು. ಭಯೋತ್ಪಾದನೆ ವಿರುದ್ಧ ಭಾರತಕ್ಕೆ ಸಹಕಾರ ನೀಡಲು ನಾವು ಬದ್ಧ. ಆದರೆ, ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಶಾಂತಿ, ಸುವ್ಯವಸ್ಥೆ…

Read More

ಬೆಂಗಳೂರು: “ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಜಾತಿ ಗಣತಿ ನಡೆಸುವುದು ಕೇಂದ್ರದ ಜವಾಬ್ದಾರಿ ಎಂದು ಹೇಳುತ್ತಿದ್ದರು. ರಾಹುಲ್ ಗಾಂಧಿಯವರ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ನಿರ್ಧರಿಸಿರುವ ಬಗ್ಗೆ ಕೇಳಿದಾಗ, “ಜಾತಿಗಣತಿಗೆ ಇಂತಿಷ್ಟು ಸಮಯ ಎಂದು ನಿಗದಿ ಮಾಡಿ ಪೂರ್ಣಗೊಳಿಸಬೇಕು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದು. ಇದರಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು. https://ainkannada.com/do-you-leave-the-dishes-unwashed-after-dinner-a-story-you-must-watch/ ಸಮಾಜದ ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದರೆ ಜನಸಂಖ್ಯೆಯ ಆಧಾರದ ಮೇಲೆ ದೇಶದ ಜನರಿಗೆ ಸೌಲಭ್ಯಗಳನ್ನು ನೀಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಮೂಲ ಆಶಯ, ಸಿದ್ಧಾಂತ,‌ ಬೇಡಿಕೆಯಾಗಿದೆ. ಮುಖ್ಯಮಂತ್ರಿಗಳು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರ ಇದಕ್ಕೆ ಬೇಕಾದಂತಹ ಸಹಕಾರ ನೀಡಲಿದೆ” ಎಂದರು.

Read More

ಬೆಂಗಳೂರು: ಕಾಂಗ್ರೆಸ್‌ ಅವಧಿಯಲ್ಲಿ ಜಾತಿ ಸಮೀಕ್ಷೆಯನ್ನು ಏಕೆ ಮಾಡಲಿಲ್ಲ ಎಂದು ತಿಳಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸವಾಲೆಸೆದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಬ್ರಿಟಿಷರ ನಂತರ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಪ್ರಧಾನಿಯಾದರೂ, ಕಾಂಗ್ರೆಸ್‌ ಜಾತಿ ಸಮೀಕ್ಷೆ ಮಾಡಲಿಲ್ಲ. ಕಾಂಗ್ರೆಸ್‌ಗೆ ಅಂತಹ ಸಾಮಾನ್ಯ ಜ್ಞಾನ ಕೂಡ ಇಲ್ಲ. ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಜಾತಿ ಗಣತಿ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು ಎಂದರು. 2029 ಕ್ಕೆ ಮಹಿಳಾ ಮೀಸಲಾತಿ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದಕ್ಕೆ ಜನಗಣತಿ ಹಾಗೂ ಜಾತಿ ಸಮೀಕ್ಷೆ ನೆರವಾಗಲಿದೆ. ಇಂತಹ ಉತ್ತಮ ಕೆಲಸ ಮಾಡುತ್ತಿರುವ ಪ್ರಧಾನಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು. ಈಗ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. 2015 ರಲ್ಲಿ ಜಾತಿ ಗಣತಿ ಮಾಡಿ ಹತ್ತು ವರ್ಷಗಳ ನಂತರ ಅದನ್ನು ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಕಾಂಗ್ರೆಸ್‌ ಮೊದಲು…

Read More

ಐಪಿಎಲ್ 2025 ರ ನಂತರ, ಟೀಮ್ ಇಂಡಿಯಾ ಐದು ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಭಾರತ ತಂಡದ ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಆರಂಭಿಸಿದೆ. ಐದು ಟೆಸ್ಟ್ ಸರಣಿ ಮತ್ತು ಅದಕ್ಕೂ ಮುನ್ನ ನಡೆಯಲಿರುವ ಭಾರತ ‘ಎ’ ಪ್ರವಾಸಕ್ಕಾಗಿ ಮಂಡಳಿಯು ಆಟಗಾರರ ಹೆಸರುಗಳನ್ನು ಸಿದ್ಧಪಡಿಸಿದೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಭಾರತ ‘ಎ’ ಮತ್ತು ಟೆಸ್ಟ್ ತಂಡಗಳಿಗೆ ಆಯ್ಕೆಯಾದ ಸುಮಾರು 35 ಆಟಗಾರರಲ್ಲಿ ರೋಹಿತ್ ಶರ್ಮಾ ಅವರ ಹೆಸರು ಶಾರ್ಟ್‌ಲಿಸ್ಟ್ ಆಗಿದೆ. ಟೆಸ್ಟ್ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಊಹಾಪೋಹಗಳಿವೆ ಎಂದು ತಿಳಿದಿದೆ. https://ainkannada.com/do-you-leave-the-dishes-unwashed-after-dinner-a-story-you-must-watch/ ಇಂತಹ ಮಹತ್ವದ ಪ್ರವಾಸದಲ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕಲು ತಂಡ ಸಿದ್ಧವಾಗಿದೆಯೇ ಎಂದು ಆಯ್ಕೆದಾರರು ಮತ್ತು ಮಂಡಳಿಗೆ ಇನ್ನೂ ಖಚಿತವಿಲ್ಲ ಎಂದು ತೋರುತ್ತದೆ. ಪಾಟೀದಾರ್ ಮತ್ತು ನಾಯರ್‌ಗಳಿಗೆ ಅವಕಾಶ.. ಮಂಡಳಿಯು ಇಂಗ್ಲೆಂಡ್ ಪ್ರವಾಸವನ್ನು ಯೋಜಿಸಲು ಪ್ರಾರಂಭಿಸಿದೆ. ಆಯ್ಕೆದಾರರು ಮೇ ಎರಡನೇ ವಾರದೊಳಗೆ ತಂಡಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆಯ್ಕೆದಾರರಿಗೆ ಇರುವ ದೊಡ್ಡ ತಲೆನೋವೆಂದರೆ 5 ಅಥವಾ…

Read More