Author: Author AIN

ಬೆಂಗಳೂರು: ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ಸರಿಯಾಗಿ ಜಮಾ ಆಗುತ್ತಿತ್ತು. ಒಂದೆರೆಡು ದಿನಗಳಲ್ಲಿ 2000 ಹಣ ಮನೆಯ ಯಜಮಾನಿ ಖಾತೆಗೆ ಜಮಾ ಆಗುತ್ತಿತ್ತು. ಆದರೆ ಕಳೆದ ಮೂರು ತಿಂಗಳ ಹಣ ಸರಿಯಾಗಿ ಬರುತ್ತಿರಲಿಲ್ಲ, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಗಳ ಮೇಲೆ ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆ ರೋಪಕ್ಕೆ ಬಳ್ಳಾರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಲಕ್ಷ್ಮೀಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದಾರೆ. ಮೇ ತಿಂಗಳಲ್ಲಿ ಮೂರು ಕಂತಿನ ಹಣ ಬಿಡುಗಡೆಗೆ ಮಾಡೋದಾಗಿ ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ. ಬಾಕಿ ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಅನುಮೋದನೆ ಸಿಕ್ಕಿದೆ. ಹಾಗಾಗಿ ಮೇ ತಿಂಗಳಲ್ಲಿ ಮೊದಲು ಮೂರು ವಾರಗಳಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. https://ainkannada.com/do-you-leave-the-dishes-unwashed-after-dinner-a-story-you-must-watch/ ಗೃಹಲಕ್ಷ್ಮಿ…

Read More

ಬೆಂಗಳೂರು: ಇಂದಿನಿಂದ ವಾಹನ ಖರೀದಿಗೆ ಹೊಸ ತೆರಿಗೆ ನೀತಿ ಅನ್ವಯವಾಗಲಿರುವ ಹಿನ್ನೆಲೆ, ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನಗಳು ಸಹ ಜೀವಿತಾವಧಿ ತೆರಿಗೆ ಕಟ್ಟಬೇಕಿದೆ. ಮೆಟ್ರೋ, ಬಸ್‌ ಪ್ರಯಾಣ ದರ ಏರಿಕೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಜನರ ಆಕ್ರೋಶಕ್ಕೆ ಮತ್ತೊಮ್ಮೆ ಗುರಿಯಾಗುವಂತಹ ನಿರ್ಧಾರ ಕೈಗೊಂಡಿದೆ. ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡುವ ಮಾಲೀಕರಿಗೆ ಸರ್ಕಾರ ಶಾಕ್‌ವೊದನ್ನು ಕೊಟ್ಟಿದೆ. ಹೌದು ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದು, ಇಂದಿನಿಂದಲೇ ಈ ನೂತನ ಆದೇಶ ಜಾರಿಗೆ ಬರಲಿದೆ. ಕಟ್ಟಡ ಸಾಮಾಗ್ರಿ ಶಿಫ್ಟಿಂಗ್ ವಾಹನಗಳು ಮತ್ತು ವಾಣಿಜ್ಯ ಬಳಕೆ, ಎಲೆಕ್ಟ್ರಿಕ್ ಕಾರುಗಳಿಗೂ ಈ ದುಬಾರಿ ಟ್ಯಾಕ್ಸ್ ಪಾವತಿ ಮಾಡಬೇಕಾಗಿದೆ. https://ainkannada.com/do-you-leave-the-dishes-unwashed-after-dinner-a-story-you-must-watch/ ಈ ಹಿಂದೆ 10 ಲಕ್ಷ ರೂ. ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್‌ಗೆ ಮೂರು ತಿಂಗಳಿಗೊಮ್ಮೆ 100 ರೂ.ನಂತೆ 4 ಸೀಟ್ ವಾಹನಕ್ಕೆ 400 ರೂ.ಪಾವತಿ…

Read More

ಬೆಂಗಳೂರು: ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದೆ. ದೇಶದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನಿರ್ಧಾರ ಮಾಡಲು ಮತ್ತು ಭವಿಷ್ಯದ ಅನೇಕ ನಿರ್ಧಾರಕ್ಕೆ ಇದು ಸಹಾಯಕ ಎಂದು ಹೇಳಿದರು. https://ainkannada.com/do-you-leave-the-dishes-unwashed-after-dinner-a-story-you-must-watch/ ಜಾತಿ ಗಣತಿ, ಜನಗಣತಿ ಕುರಿತ ಕೇಂದ್ರದ ನಿರ್ಧಾರವು ಇಡೀ ದೇಶದ ಜನರಿಗೆ ಖುಷಿ ತಂದಿದೆ. ಇದನ್ನು ಸ್ವಾಗತಿಸುತ್ತೇವೆ. ವಿವಿಧ ಜಾತಿಗಳ ಪರಿಸ್ಥಿತಿ ತಿಳಿದುಕೊಳ್ಳಲು ಇದು ಸಹಾಯಕ. ಈ ನಿರ್ಧಾರವನ್ನು ಬಿಜೆಪಿ ಕರ್ನಾಟಕ ಘಟಕ ಸ್ವಾಗತಿಸುತ್ತದೆ ಎಂದರು. ಇವತ್ತು ಕೇಂದ್ರ ಸರ್ಕಾರವು ಜಾತಿಗಣತಿ ಮಾಡಲು ನಿರ್ಧರಿಸಿದ್ದು ಟಿ.ವಿ.ಗಳಲ್ಲಿ ಬರುತ್ತಿದೆ. ಇದು ಕೇಂದ್ರದ ಸಂವಿಧಾನದತ್ತ ಅಧಿಕಾರ. ಹಿಂದೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವು ಪಕ್ಷಗಳು ಜಾತಿ ಸಮೀಕ್ಷೆ ನಡೆಸಿದ್ದವು ಎಂದು…

Read More

ಕಿಚ್ಚ ಸುದೀಪ್‌ ಹಾಗೂ ಅನೂಪ್‌ ಭಂಡಾರಿ ಕಾಂಬಿನೇಷನ್‌ ಸಿನಿಮಾ ಬಿಲ್ಲ ರಂಗ ಬಾಷಾ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಚಿತ್ರದ ಯಾವುದೇ ಫೋಟೋ ಅಥವಾ ವಿಡಿಯೋ ವೈರಲ್‌ ಆಗದಂತೆ ಚಿತ್ರತಂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅದಕ್ಕಾಗಿ ಟೈಟ್‌ ಸೆಕ್ಯೂರಿಟಿ ವ್ಯವಸ್ಥೆ ಮಾಡಿದೆ. ಶೂಟಿಂಗ್‌ ಪ್ರೊಸೆಸಿಂಗ್‌ ವಿಡಿಯೋವೊಂದನ್ನು ಚಿತ್ರತಂಡ ಶೇರ್‌ ಮಾಡಿದೆ. ಅದ್ರಲ್ಲಿ ಕಿಚ್ಚ ಕನ್ನಡಿ ಮುಂದೆ ಕುಳಿತು ಮೇಕಪ್‌ ಹಾಕಿಕೊಳ್ಳುವಾಗ ಕುತ್ತಿಗೆಯಲ್ಲಿ ಟ್ಯಾಟು ಅಭಿಮಾನಿಗಳನ್ನು ಕಾಡೋದಿಕ್ಕೆ ಶುರು ಮಾಡಿದೆ. ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್‌ ವಿಡಿಯೋವೊಂದನ್ನು ನಿರ್ದೇಶಕ ಅನೂಪ್ ಭಂಡಾರಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್‌ ಪ್ರಕ್ರಿಯೆಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಕಿಚ್ಚ ಸುದೀಪ್ ನಿತ್ಯದ ಎಂಟ್ರಿ ಕೂಡ ಇಂಟ್ರಸ್ಟಿಂಗ್ ಆಗಿದೆ. ತಮ್ಮ K ಅಕ್ಷರದ ಕಾರ್ ನಿಂದ ಇಳಿಯೋ ಕಿಚ್ಚ ಸುದೀಪ್ ಕ್ಯಾರವಾನ್‌ಗೆ ಹೋಗುತ್ತಾರೆ. ರೆಡಿ ಆಗುತ್ತಾರೆ. ಆ ಮೇಲೆ ಶೂಟಿಂಗ್ ಸೆಟ್‌ಗೂ ಕಾಲಿಡುತ್ತಾರೆ ನೋಡಿ. https://x.com/anupsbhandari/status/1917798729710723295 ಶೂಟಿಂಗ್‌ ಅಖಾಡಕ್ಕೆ ಇಳಿಯುವ ಮುನ್ನ ಕಿಚ್ಚ ಕನ್ನಡಿ ಮುಂದೆ ಮೇಕಪ್‌ ಹಾಕಿಸಿಕೊಂಡಿರುವ…

Read More

ಬೆಂಗಳೂರು: ಕೇಂದ್ರ ಸರ್ಕಾರ ಸ್ಪಷ್ಟ, ವೈಜ್ಞಾನಿಕ ಹಾಗೂ ಕಾನೂನುಬದ್ಧ, ಅಧಿಕಾರದ ಭಾಗವಾಗಿ ಜಾತಿ ಗಣತಿಯನ್ನು ಮಾಡಲಿದೆ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡಲು ಅಧಿಕಾರ ಇಲ್ಲದಿದ್ದರೂ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೇ ಅಡಿಯಲ್ಲಿ ಜಾತಿಗಣತಿ ನಡೆಸಿವೆ. ಆದರೆ, ಕರ್ನಾಟಕದಲ್ಲಿ ಈ ವಿಷಯದಲ್ಲಿ ಗೊಂದಲವಾಗಿತ್ತು. ಇದು ಸರಿಯಾಗಿ ಮಾಡಿಲ್ಲ, ಕಾನೂನುಬದ್ಧವಾಗಿ ಇಲ್ಲ. ಪ್ರತಿ ಮನೆಗೆ ಹೋಗಿಲ್ಲ ಹಾಗೂ ಎಲ್ಲ ಜಾತಿಯ ಗಣತಿ ಸರಿಯಾಗಿ ನಡೆದಿಲ್ಲ ಎಂಬ ಕೂಗು ಕೇಳಿಸಿತ್ತು ಎಂದರು. https://ainkannada.com/do-you-leave-the-dishes-unwashed-after-dinner-a-story-you-must-watch/ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಗೊಂದಲ ನಿರ್ಮಾಣ ಮಾಡಿತ್ತು. ಸಮಾಜದಲ್ಲಿ ಗೊಂದಲ, ಜಾತಿಗಳ ನಡುವೆ ಗೊಂದಲಕ್ಕೆ ಕಾರಣವಾಗಿತ್ತು. ಇದಕ್ಕೆಲ್ಲ ಅಂತ್ಯ ಕಾಣಿಸಲು ಮತ್ತು ತೆರೆ ಎಳೆಯಲು ಕೇಂದ್ರ ಸರ್ಕಾರ ಸ್ಪಷ್ಟ, ವೈಜ್ಞಾನಿಕ ಹಾಗೂ ಕಾನೂನುಬದ್ಧ, ಅಧಿಕಾರದ ಭಾಗವಾಗಿ ಜಾತಿ ಗಣತಿಯನ್ನು ಮಾಡಲಿದೆ. ವ್ಯವಸ್ಥಿತವಾಗಿ ಇದು ನಡೆಯಲಿದೆ ಎಂದು ಹೇಳಿದರು. ಸಮಾಜದ ಎಲ್ಲರ ಸ್ಥಿತಿಗತಿ ಗೊತ್ತಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ…

Read More

ಬೆಂಗಳೂರು: ಆರ್ಥಿಕ ಸುರಕ್ಷತೆಯ ವಿಷಯದಲ್ಲೂ ಚಿನ್ನದ ಎತ್ತಿದ ಕೈ ಎನ್ನಬಹುದು. ಒಬ್ಬ ವ್ಯಕ್ತಿಯಿಂದ ಹಿಡಿದು ರಾಷ್ಟ್ರದ ಆರ್ಥಿಕ ಸದೃಢತೆಯಲ್ಲೂ ಚಿನ್ನ ಮಹತ್ವದ ಪಾತ್ರವಹಿಸಿದೆ. ಆರ್ಥಿಕವಾಗಿ ತಲೆದೋರುವ ಕಷ್ಟಕಾಲದ ಆಪದ್ಬಾಂಧವನಂತೆ ಚಿನ್ನ ಕಾರ್ಯ ನಿರ್ವಹಿಸುತ್ತದೆ. ಇನ್ನು, ಚಿನ್ನದ ಬೆಲೆ ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಹಲವಾರು ಜಾಗತಿಕ ವಿದ್ಯಮಾನಗಳು ಹಾಗೂ ಸ್ಥಳೀಯ ಕಾರಣಗಳಿಂದಾಗಿ ನಿತ್ಯ ಅದರ ಬೆಲೆ ಪ್ರಭಾವಿಸಲ್ಪಡುತ್ತಲೇ ಇರುತ್ತದೆ. ಹಾಗಾಗಿ ನಿತ್ಯದ ಬೆಲೆಯ ಅಪ್ಡೇಟ್ ಸಾಕಷ್ಟು ಜನರಿಗೆ ಉಪಯುಕ್ತ ಎನ್ನಬಹುದು. ಇಂದು ಗುರುವಾರ ಭರ್ಜರಿ ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್​​​ಗೆ ಬರೋಬ್ಬರಿ 200 ರೂ ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,975 ರೂ ಇದ್ದದ್ದು 8,775 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 9,573 ರೂಗೆ ಇಳಿದಿದೆ. ವಿದೇಶಗಳಲ್ಲಿ ಕೆಲವೆಡೆ ಸ್ವರ್ಣ ಬೆಲೆ ಇಳಿಕೆಯಾಗಿದೆ. ಇನ್ನು, ಚಿನ್ನದಂತೆ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆ ಕಂಡಿದೆ. ಗ್ರಾಮ್​​ಗೆ 2 ರೂನಷ್ಟು ಇಳಿಮುಖವಾಗಿದೆ ಬೆಳ್ಳಿ ಬೆಲೆ. ಬೆಂಗಳೂರು, ಮುಂಬೈ ಮೊದಲಾದ ಕಡೆ ಈಗ…

Read More

ಭಾರತ ಸರ್ಕಾರ ಆಯೋಜಿಸಿರುವ ವೇವ್ಸ್ ಶೃಂಗಸಭೆ (ವಿಶ್ವ ಆಡಿಯೋ ವಿಷುವಲ್ ಎಂಟರ್ಟೈನ್ಮೆಂಟ್ ಸಮ್ಮಿಟ್) ಇಂದಿನಿಂದ ಪ್ರಾರಂಭವಾಗಿದೆ. ಮುಂಬೈನ ಜಿಯೋ ವರ್ಲ್ಡ್‌ ಸೆಂಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ವಿಶ್ವದ ಉನ್ನತ ಮಾಧ್ಯಮ ಸಿಇಒಗಳು, ಮನರಂಜನಾ ಐಕಾನ್‌ಗಳು, ಸೆಲೆಬ್ರಿಟಿಗಳು ಮತ್ತು ಜಗತ್ತಿನಾದ್ಯಂತದ ಸೃಜನಶೀಲ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೇವ್ಸ್‌ ಶೃಂಗ ಸಭೆಯಲ್ಲಿ ನಟಿಯರಾದ ಆಲಿಯಾ ಭಟ್‌, ದೀಪಿಕಾ ಪಡುಕೋಣೆ, ಹೇಮಾ ಮಾಲಿನಿ,  ಶಾರುಖ್‌ ಖಾನ್, ಅಕ್ಷಯ್ ಕುಮಾರ್, ರಜನಿಕಾಂತ್, ಚಿರಂಜೀವಿ, ಮೋಹನ್‌ ಲಾಲ್‌ ಸೇರಿದಂತೆ ಬಹುತೇಕ ಸ್ಟಾರ್ಸ್‌ ಭಾಗಿಯಾಗಿದ್ದಾರೆ. ಆದ್ರೆ ಕನ್ನಡ ಚಿತ್ರರಂಗದ ಯಾವುದೇ ತಾರೆಯರಿಗೆ ಆಹ್ವಾನ ನೀಡಿಲ್ವಾ? ಅಥವಾ ಆಹ್ವಾನವಿದ್ದರೂ ಹೋಗಿಲ್ವಾ ಅನ್ನೋದಂತು ಗೊತ್ತಿಲ್ಲ.‌ ವೇವ್ಸ್‌ ಶೃಂಗಸಭೆ ಆರಂಭಕ್ಕೂ ಮುನ್ನ ಭಾರತೀಯ ಚಿತ್ರರಂಗದ ಲೆಜೆಂಡರಿಗಳು ಒಂದೇ ಫೋಟೋ ಪ್ರೇಮ್‌ ನಲ್ಲಿ ಸೆರೆಯಾಗಿದ್ದಾರೆ. ಸೂಪರ್‌ ಸ್ಟಾರ್‌ ರಜನಿಕಾಂತ್‌, ಮೆಗಾಸ್ಟಾರ್‌ ಚಿರಂಜೀವಿ, ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌, ನಟಿ ಹೇಮ ಮಾಲಿನಿ ಹಾಗೂ ಮೋಹನ್‌ ಲಾಲ್‌, ಮಿಥುನ್‌ ಚಕ್ರವರ್ತಿ ಒಟ್ಟಿಗೆ ಫೋಟೋಗೆ…

Read More

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ (CSK vs PBKS) ನಡುವೆ ನಡೆದ 2025 ರ ಐಪಿಎಲ್​ನ (IPL 2025) 49ನೇ ಪಂದ್ಯದಲ್ಲೂ ಸಿಎಸ್​ಕೆ ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 190 ರನ್ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಪಂಜಾಬ್ ಕಿಂಗ್ಸ್ ಕೊನೆಯ ಓವರ್​ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಪಂಜಾಬ್ ಪರ ಪ್ರಭ್ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​ನಲ್ಲಿ ಮಿಂಚಿದ ಚಾಹಲ್ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಪಂಜಾಬ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಸಿಎಸ್​ಕೆ ತಂಡ ಅಧಿಕೃತವಾಗಿ ಪ್ಲೇಆಫ್ ರೇಸ್‌ನಿಂದ ಹೊರಬಿತ್ತು. ಈ ಸೋಲಿನ ಬಳಿಕ ಮಾತನಾಡಿದ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೆವು. ಅದರಲ್ಲೂ ನಮ್ಮ ಬ್ಯಾಟಿಂಗ್ ಉತ್ತಮವಾಗಿತ್ತು. ಇದೇ ಮೊದಲ ಬಾರಿಗೆ ನಾವು ಸಾಕಷ್ಟು ರನ್​ಗಳಿಸಲು ಯಶಸ್ವಿಯಾದೆವು. https://ainkannada.com/do-you-leave-the-dishes-unwashed-after-dinner-a-story-you-must-watch/…

Read More

ಮಿಶಾ ಅಗರ್ವಾಲ್ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ತನಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಕೇವಲ 24 ವರ್ಷ ವಯಸ್ಸಿನಲ್ಲೇ ಅವರು ಲಕ್ಷಾಂತರ ಜನರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ. ಪ್ರಯಾಗ್‌ರಾಜ್ ನಿವಾಸಿಯಾದ ಮಿಶಾ, ತಮ್ಮ ವಿಶಿಷ್ಟ ಕಾಮಿಕ್ ಕಂಟೆಂಟ್ ಮತ್ತು ತಮಾಷೆಯ ರೀಲ್‌ಗಳಿಂದ ದೊಡ್ಡ ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನೆಲ್ ‘ದಿ ಮಿಶಾ ಅಗರ್ವಾಲ್ ಶೋ’ ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ಅವರು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮೀಶಾ ಕೇವಲ ವಿಷಯ ರಚನೆಕಾರರಲ್ಲ, ಅವರು ಕಾನೂನು ಅಧ್ಯಯನ ಮಾಡುತ್ತಿದ್ದಾರೆ ಮತ್ತು PCSJ ಗೆ ತಯಾರಿ ನಡೆಸುತ್ತಿದ್ದಾರೆ. ಅವರ ಸೃಜನಶೀಲತೆ ಮತ್ತು ಬುದ್ಧಿವಂತಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಯುವಕರಲ್ಲಿ ಅವರನ್ನು ವಿಶೇಷ ಉಪಸ್ಥಿತಿಯನ್ನಾಗಿ ಮಾಡಿದೆ. ಮಿಶಾ ಅವರ ವೀಡಿಯೊಗಳು ಒಂದೆಡೆ ಹಾಸ್ಯ ಮತ್ತು ನಿಜ ಜೀವನದ ಕಥೆಗಳನ್ನು ಒಳಗೊಂಡಿವೆ. ಮತ್ತೊಂದೆಡೆ, ಅವು ಅವಳ ನಿಜವಾದ ಭಾವನೆಗಳನ್ನು ಪ್ರತಿಬಿಂಬಿಸುವಂತೆ ಮಾಡುತ್ತವೆ. ಈ ಕಾರಣದಿಂದಾಗಿ ಅಭಿಮಾನಿಗಳು ಅವರೊಂದಿಗೆ ಹೆಚ್ಚು…

Read More

ಇಸ್ಲಾಮಾಬಾದ್: ಪಹಲ್ಗಾಮ್ ನರಮೇಧ ಕನಸಿನಲ್ಲೂ ಬೆಚ್ಚಿ ಬೀಳೋ ಭಯಾನಕ ಕೃತ್ಯ. ದಾಳಿಕೋರರ ಹಿಂದೆ ಬಿದ್ದಿರೋ ಭಾರತೀಯ ಸೇನೆ ರೋಚಕ ಅಂಶಗಳನ್ನು ಕಲೆ ಹಾಕುತ್ತಿದೆ. ಉಗ್ರರು ಅಡಗಿದ್ದ ಮನೆಗಳನ್ನು ಧ್ವಂಸ ಮಾಡಿರುವ ಯೋಧರು, ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ್ದು ಹೇಗೆ ಅನ್ನೋ ಇಂಚಿಂಚೂ ರಹಸ್ಯವನ್ನು ಬೇಧಿಸುತ್ತಿದ್ದಾರೆ. ಅದಲ್ಲದೆ ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿಕೆ ನೀಡಿದ್ದಾರೆ. ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಇತರ ದೇಶಗಳು ಪ್ರಯತ್ನಗಳನ್ನು ಮಾಡಿದರೂ, ಕಾಲ ಕಳೆದಂತೆ ಭಾರತದೊಂದಿಗೆ ಸಂಘರ್ಷದ ಸಾಧ್ಯತೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. https://ainkannada.com/do-you-leave-the-dishes-unwashed-after-dinner-a-story-you-must-watch/ ಇತ್ತೀಚಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಗಮನಹರಿಸಿದಾಗ, ಕಾಲ ಕಳೆದಂತೆ ಸಂಘರ್ಷದ ಸಾಧ್ಯತೆ ಹೆಚ್ಚುತ್ತಿದ್ದು, ಕಡಿಮೆಯಾಗುತ್ತಿಲ್ಲ. ಆದರೂ ಅನೇಕ ದೇಶಗಳು ಪರಿಸ್ಥಿತಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಪಾಕಿಸ್ತಾನ ದಾಳಿ ಎದುರಿಸಿದರೆ ಸೂಕ್ತ ಪ್ರತಿಕ್ರಿಯೆ ನೀಡುವುದು ನಿಶ್ಚಿತ. ಭಾರತದಿಂದ ಉಲ್ಲಂಘನೆಯಾದರೆ, ನಾವು ಪ್ರತಿಕ್ರಿಯಿಸುತ್ತೇವೆ. ನಮ್ಮ ಪ್ರತಿಕ್ರಿಯೆಯ ಸ್ವರೂಪವು…

Read More