ಚಾಮರಾಜನಗರ : ಕೇಂದ್ರ ಸರ್ಕಾರದಿಂದ ಪೆಟ್ರೋಲ್, ಡಿಸೇಲ್, ಎಲ್.ಪಿ.ಜಿ.ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಯೋಗೇಂದ್ರ ಅವರ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ, ಖಾಲಿ ಸಿಲಿಂಡರ್, ಸೈಕಲ್ ಪ್ರದರ್ಶಿಸಿ ನಡುರಸ್ತೆಯಲ್ಲಿ ಸೌದೆ ಒಲೆ ಹೊತ್ತಿಸಿ ಪ್ರತಿಭಟನೆ ನಡೆಸಿದರು. https://ainkannada.com/khaki-shock-to-ipl-betting-houses-betting-racketeers-arrested/ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಮುಸಾಯಿಬ್, ಫರ್ದನ್, ಗೀತಾ ಸಿದ್ದರಾಜು, ಚಂದನ್, ಪ್ರಧಾನ ಕಾರ್ಯದರ್ಶಿ ನಂಜುಂಡಶೆಟ್ಟಿ, ವಿಶ್ವ, ಮುಖಂಡ ನಾಗೇಂದ್ರ ನಾಯಕ ಜಿಲ್ಲಾ ಕಾಂಗ್ರೆಸ್ ನ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಕ್ಷಯ್ ಕುಮಾರ್, ಉಸ್ಮಾನ್, ಸಚಿನ್, ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಮೋಹನ್ ನಗು, ಶಶಾಂಕ್, ಮುತ್ತು, ರಾಜ್ಯ ಕಾರ್ಯದರ್ಶಿ ಸ್ವಾಮಿ, ಆನಂತ್, ಸೈಯದ್ ತೋಸಿಫ್, ಲೋಹಿತ್, ವಿಜಯ್, ಅಜಯ್, ವಿಶ್ವ, ಶಿವರಾಜ್, ಪೃಥ್ವಿ, ವಿಶ್ವಾಸ್, ಮಾದೇಶ್ , ನವೀನ್ ಇತರರು ಭಾಗವಹಿಸಿದ್ದರು.
Author: AIN Author
ಬೆಂಗಳೂರು:- ಕರ್ನಾಟಕ ರಾಜ್ಯ ಸರ್ಕಾರ ಅತ್ತ ಹಾಲು, ಬಸ್ ಪ್ರಯಾಣ ದರ, ಮೆಟ್ರೋ ದರ ಬಳಿಕ ಹಾಲು, ವಿದ್ಯುತ್ ದರ ಏರಿಸಿ ಶಾಕ್ ಕೊಟ್ಟಿತ್ತು. ಅಲ್ಲದೇ ಡೀಸೆಲ್ ಬೆಲೆಯನ್ನೂ 2ರೂ ಹೆಚ್ಚಳ ಮಾಡಿದೆ. https://ainkannada.com/bhagya-lakshmi-serial-actress-amrutha-gowda-achieved-distinction-in-second-puc/ ಇದೀಗ ಡೀಸೆಲ್ ಬೆಲೆ ಹೆಚ್ಚಳದ ಹೊರೆಯನ್ನು ಪೋಷಕರ ಹೆಗಲಿಗೆ ಹಾಕಲು ಖಾಸಗಿ ಶಾಲಾ ವಾಹನ ಸಂಘ ನಿರ್ಧಾರ ಕೈಗೊಂಡಿದೆ. ಪ್ರತಿ ಲೀಟರ್ ಡೀಸೆಲ್ ದರ 2 ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಶಾಲಾ ವಾಹನದ ಶುಲ್ಕವನ್ನು ಹೆಚ್ಚಿಸಲು ಸಂಘ ನಿರ್ಧಾರ ಕೈಗೊಂಡಿದೆ. ಸದ್ಯ ತಿಂಗಳಿಗೆ 2,000 ರೂ – 3,000 ರೂ. ಶುಲ್ಕವಿದೆ. ದರ ಏರಿಕೆಯಿಂದ 2,500 ರೂ- 3,500 ರೂ.ಗೆ ಏರಿಕೆಯಾಗಲಿದೆ. ಇದೇ ಶೈಕ್ಷಣಿಕ ವರ್ಷದಿಂದ ನೂತನ ದರ ಜಾರಿಯಾಗಲಿದೆ. ಸದ್ಯ ಬೆಂಗಳೂರಲ್ಲೇ 7 ಸಾವಿರಕ್ಕೂ ಅಧಿಕ ಶಾಲಾ ವಾಹನಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲೇ ನಿತ್ಯ ಶಾಲೆಗೆ ತೆರಳುತ್ತಿದ್ದಾರೆ.
ಸಿಂಗಾಪುರದಲ್ಲಿ ಶಾಲೆಯೊಂದರಲ್ಲಿ ಮಂಗಳವಾರ ಸಂಭವಿಸಿದ್ದ ಬೆಂಕಿ ಆವರಣದಲ್ಲಿ ಟಾಲಿವುಡ್ ಸ್ಟಾರ್ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕಿರಿಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. https://ainkannada.com/chamarajanagar-unrelenting-wild-elephant-infestation/ ವಿಷಯ ತಿಳಿಯುತ್ತಿದ್ದಂತೆ ಸಿಂಗಾಪುರಕ್ಕೆ ತೆರಳಿದ ಪವನ್ ಕಲ್ಯಾಣ್ ಅವರು ಮಗನ ಆರೋಗ್ಯ ವಿಚಾರಿಸಿದ್ದಾರೆ. ಸಿಂಗಾಪುರಕ್ಕೆ ತೆರಳುವ ಮುನ್ನ ಪುತ್ರನ ಆರೋಗ್ಯ ಸ್ಥಿತಿ ಹೇಗಿದೆ ಎಂದು ಪವನ್ ಕಲ್ಯಾಣ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಶಂಕರ್‌ಗೆ ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ ಎಂದು ಅವರು ತಿಳಿಸಿದ್ದಾರೆ. ಮಾಧ್ಯಮಕ್ಕೆ ಪವನ್ ಕಲ್ಯಾಣ್ ಮಾತನಾಡಿ, ಪುತ್ರ ಮಾರ್ಕ್ ಶಂಕರ್ ಶಾಲೆಯ ಸಮ್ಮರ್ ಕ್ಯಾಂಪ್‌ಗೆ ಭಾಗಿಯಾಗಿದ್ದು, ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಪುತ್ರನೊಂದಿಗೆ ಇತರೆ ವಿದ್ಯಾರ್ಥಿಗಳು ಸಹ ಇದ್ದರು. ಮಗನ ಕೈ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ ಎಂದಿದ್ದಾರೆ. ಮಗನ ಶ್ವಾಸಕೋಶವನ್ನು ಸರಿಪಡಿಸಲು ಬ್ರಾಂಕೋಸ್ಕೋಪಿ ಮಾಡಲಾಗಿದೆ. ಅವನ ದೇಹಕ್ಕೆ ಸಾಕಷ್ಟು ಹೊಗೆ ಸೇರಿದೆ. ಹಾಗಾಗಿ ಮಗನಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು.…
ಸ್ಯಾಂಟೊ ಡೊಮಿಂಗೊ:- ನೈಟ್‌ಕ್ಲಬ್‌ನಲ್ಲಿ ಛಾವಣಿ ಕುಸಿದು ಕನಿಷ್ಠ 79 ಜನರು ಸಾವನ್ನಪ್ಪಿದ ಘಟನೆ ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿ ಜರುಗಿದೆ. ಘಟನೆಯಲ್ಲಿ 155 ಜನರು ಗಾಯಗೊಂಡಿದ್ದಾರೆ. https://ainkannada.com/indrajit-lankeshs-sons-debut-film-is-also-appreciated-on-ott-samarjit-is-in-demand-in-other-languages-too/ ದುರಂತದಲ್ಲಿ ಜನಪ್ರಿಯ ಗಾಯಕ, ಪ್ರಾಂತೀಯ ಗವರ್ನರ್ ಮತ್ತು ಇಬ್ಬರು ಮಾಜಿ ಮೇಜರ್ ಲೀಗ್‌ನ ಬೇಸ್‌ಬಾಲ್ ಆಟಗಾರರಾದ ಆಕ್ಟೇವಿಯೊ ಡೋಟೆಲ್ ಮತ್ತು ಟೋನಿ ಬ್ಲಾಂಕೊ ಮೃತಪಟ್ಟಿದ್ದಾರೆ. ಡೊಮಿನಿಕನ್ ರಿಪಬ್ಲಿಕನ್‌ನ ತುರ್ತು ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಜುವಾನ್ ಮ್ಯಾನುಯೆಲ್ ಮೆಂಡೆಜ್ ಪ್ರಕಾರ, ಛಾವಣಿ ಕುಸಿತದ ಸಮಯದಲ್ಲಿ ಕ್ಲಬ್ ಒಳಗೆ ಇದ್ದ ಜನರ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಮಧ್ಯರಾತ್ರಿ 12:44 ಕ್ಕೆ ಈ ದುರ್ಘಟನೆ ಸಂಭವಿಸಿದೆ. ಕ್ಲಬ್‌ನಲ್ಲಿ 500 ರಿಂದ 1,000 ಜನರಿದ್ದರು ಕೆಲವು ಮಾಧ್ಯಮಗಳು ತಿಳಿಸಿವೆ ಎಂದರು.
ಬೇಸಿಗೆಯಲ್ಲಿ ಎಲ್ಲರೂ ಕಾಮನ್ ಆಗಿ ಉಪಯೋಗಿಸುವ ಹಣ್ಣುಗಳಲ್ಲಿ ಕಲ್ಲಂಗಡಿಯೂ ಒಂದು. ಬೇಸಿಗೆಯಲ್ಲಿ ಅನೇಕ ಜನರು ಇಷ್ಟಪಡುವ ಹಣ್ಣೆಂದರೆ ಕಲ್ಲಂಗಡಿ ಹಣ್ಣು. ಇದು ಹೇರಳವಾದ ನೀರಿನ ಅಂಶವನ್ನು ಹೊಂದಿದ್ದು, ಇದರ ಸೇವನೆಯು ದೇಹವನ್ನು ತಂಪಾಗಿರಿಸುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಆದರೆ ನೀವು ಅಗತ್ಯಕ್ಕಿಂತ ಹೆಚ್ಚು ಕಲ್ಲಂಗಡಿ ಸೇವಿಸಿದರೆ, ಅದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. https://ainkannada.com/condemning-the-centres-gas-cylinder-price-hike-nsui-attempts-to-siege-bjp-office/ ಕಲ್ಲಂಗಡಿ ಆರೋಗ್ಯಕರ ಮತ್ತು ರುಚಿಕರವಾದ ಹಣ್ಣು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದರ ಹೊರತಾಗಿಯೂ, ಕಲ್ಲಂಗಡಿ ಅತಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗುತ್ತದೆ. ಅಲ್ಲದೆ, ಕೆಲವು ವೈದ್ಯರು ರಾತ್ರಿಯಲ್ಲಿ ಕಲ್ಲಂಗಡಿ ತಿನ್ನಬಾರದೆಂದು ಶಿಫಾರಸು ಮಾಡುತ್ತಾರೆ. ಹೆಚ್ಚು ಕಲ್ಲಂಗಡಿ ತಿನ್ನುವುದರಿಂದ ಹೊಟ್ಟೆಯಲ್ಲಿ ಅನಿಲ, ಅತಿಸಾರ ಅಥವಾ ಉಬ್ಬರ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಕಲ್ಲಂಗಡಿಯಲ್ಲಿ ಫ್ರಕ್ಟೋಸ್ ಅಂಶ ಇರುವುದರಿಂದ ಅದನ್ನು ಹೆಚ್ಚಿನ FODMAP ಆಹಾರವೆಂದು ಪೌಷ್ಟಿಕ ತಜ್ಞರು ಪರಿಗಣಿಸುತ್ತಾರೆ. ಫ್ರಕ್ಟೋಸ್ ಒಂದು ಮೊನೊಸ್ಯಾಕರೈಡ್ ಅಥವಾ ಸರಳ ಸಕ್ಕರೆಯಾಗಿದ್ದು, ಇದರ ಅತಿಯಾದ ಸೇವನೆಯು ಹೊಟ್ಟೆಯಲ್ಲಿ ಉಬ್ಬರಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ರಾತ್ರಿಯಲ್ಲಿ…
ಬೆಂಗಳೂರು:- LPG ಸಿಲಿಂಡರ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಎನ್‌ಎಸ್‌ಯುಐ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. https://ainkannada.com/maoist-killed-in-encounter-with-security-forces/ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ಎನ್‌ಎಸ್‌ಯುಐ ಕಾರ್ಯಕರ್ತರು ಪ್ಲೆಕಾರ್ಡ್‌ಗಳನ್ನು ಹಿಡಿದು ನ್ಯಾಯ ಬೇಕು ಅಂತ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು NSUI ಕಾರ್ಯಕರ್ತರು ಯತ್ನಿಸಿದ್ದಾರೆ. ಪ್ರತಿಭಟನಾಕಾರರನ್ನು ಬ್ಯಾರಿಕೇಡ್ ಗಳನ್ನು ಮುಂದಿಟ್ಟು ಪೊಲೀಸರು ತಡೆದಿದ್ದಾರೆ. ಪ್ರತಿಭಟನೆ ಹಿನ್ನೆಲೆ ಬಿಜೆಪಿ ಕಚೇರಿ ಎದುರಿನ ರಸ್ತೆ ಬಂದ್ ಮಾಡಲಾಗಿದ್ದು, ಎನ್‌ಎಸ್‌ಯುಐ ಕಾರ್ಯಕರ್ತರಿಂದ ಮುತ್ತಿಗೆ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಅಲ್ಲದೇ ಪ್ರತಿಭಟನಾಕಾರರನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ಪೊಲೀಸರು, ವ್ಯಾನ್ ಗೆ ತುಂಬಿದ್ದಾರೆ. ಎನ್‌ಎಸ್‌ಯುಐ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ಯಿದ್ದಾರೆ. ಬೆಲೆ ಏರಿಕೆ ಮಧ್ಯೆ ಕೇಂದ್ರದಿಂದ ಸಿಲಿಂಡರ್ ದರ ಏರಿಕೆ: ಕರ್ನಾಟಕ ರಾಜ್ಯ ಸರ್ಕಾರ ಅತ್ತ ಹಾಲು, ಬಸ್ ಪ್ರಯಾಣ ದರ, ಮೆಟ್ರೋ ದರ ಬಳಿಕ ಹಾಲು, ವಿದ್ಯುತ್ ದರ ಏರಿಸಿ ಶಾಕ್ ಕೊಟ್ಟಿತ್ತು. ಇದೀಗ…
19 ವರ್ಷದ ಪ್ರಿಯಾಂಶ್ ಆರ್ಯ ಆರ್ಭಟಕ್ಕೆ ಸಿಎಸ್ಕೆ ಉಡೀಸ್ ಆಗಿದ್ದು, ಪಂಜಾಬ್ ವಿರುದ್ಧ 18 ರನ್ ಗಳಿಂದ ಸೋತಿದೆ. ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅದ್ಭುತ ಪ್ರದರ್ಶನ ತೋರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರನ್ಗಳ ರೋಚಕ ಜಯ ಸಾಧಿಸಿದೆ. https://ainkannada.com/which-zodiac-signs-are-compatible-for-marriage-and-will-bring-good-results-3/ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು. ಪಂಜಾಬ್ ಕಿಂಗ್ಸ್ ಪರ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ 103 ರನ್ ಗಳಿಸಿದರೆ, ಶಶಾಂಕ್ ಸಿಂಗ್ ಅಜೇಯ 52 ರನ್ ಗಳಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್ಕೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ಗಳಿಸಲಷ್ಟೇ ಶಕ್ತವಾಗಿ 18 ರನ್ಗಳಿಂದ ಸೋಲು ಕಂಡಿತು. 220ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಪವರ್ ಪ್ಲೇನಲ್ಲಿ 60 ರನ್ಗಳಿಸಿ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ಗೆ ಕಿವೀಸ್ ಜೋಡಿಗಳಾದ ರಚಿನ್ ರವೀಂದ್ರ…
ಪಾಟ್ನಾ: ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಸ್ವಯಂ ಘೋಷಿತಾ ಏರಿಯಾ ಕಮಾಂಡರ್ ಸಾವನ್ನಪ್ಪಿದ್ದಾನೆ. ಬಿಹಾರದ ಬಂಕಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಎನ್‌ಕೌಂಟರ್ ನಡೆಸಿದ್ದು, 35 ವರ್ಷದ ಮಾವೋವಾದಿಯೊಬ್ಬ ಮೃತಪಟ್ಟಿದ್ದಾನೆ. ರಮೇಶ್ ತುಡು ಅಲಿಯಾಸ್ ಟೆಡುವಾ ಮೃತನಾಗಿದ್ದು, ಆತನ ಹತ್ಯೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈತ ಬಿಹಾರ ಮತ್ತು ಪಕ್ಕದ ಜಾರ್ಖಂಡ್‌ನಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ. https://ainkannada.com/falaknuma-express-train-separates-while-moving-passengers-safe/ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಲೋಥರ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪೊಲೀಸರನ್ನು ಕಂಡ ತುಡು ಮತ್ತು ಅವರ ಸಹಚರರು ಗುಂಡು ಹಾರಿಸಲು ಪ್ರಾರಂಭಿಸಿದಾಗ ಎನ್ ಕೌಂಟರ್ ಏರ್ಪಟ್ಟಿತು. ಕಟೋರಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅರವಿಂದ್ ರೈ ನೇತೃತ್ವದ ಪೊಲೀಸ್ ತಂಡವು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಲ್ಲಿ ತುಡುಗೆ ಗಾಯಗಳಾಗಿದ್ದವು. ನಂತರ ಆತನನ್ನು ಕಟೋರಿಯಾದ ಸರ್ಕಾರಿ ರೆಫರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟನು. ಅವನ ಸಹಚರರು ಬುಧಿ ಘಾಟ್ ಮತ್ತು ಕಲೋಥರ್ ನಡುವಿನ ಅರಣ್ಯದೊಳಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ಗೆ ಜಾಮೀನು ಸಿಕ್ಕರೂ ಸಂಕಷ್ಟ ತಪ್ಪಿಲ್ಲ. ಜಾಮೀನು ಪಡೆದು ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. https://ainkannada.com/khaki-shock-to-ipl-betting-houses-betting-racketeers-arrested/ ಹೌದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಆರು ತಿಂಗಳ ಬಳಿಕ ಜೈಲಾಧಿಕಾರಿಗಳ ವಿಚಾರಣೆ ತನಿಖೆಗೆ ಗೃಹ ಇಲಾಖೆ ಅನುಮತಿ ಕೊಟ್ಟಿದೆ. ಕಳೆದ ಒಂದುವಾರದಿಂದ ಜೈಲಿನ ಅಧಿಕಾರಿ ,ಸಿಬ್ಬಂದಿ ವರ್ಗ ವಿಚಾರಣೆ ನಡೆಸಿ, ಸ್ಪೆಷಲ್ ಟೀಂ, ಹೇಳಿಕೆ ದಾಖಲಿಸಿಕೊಂಡಿದೆ. ಅಧಿಕಾರಿಗಳ ವಿರುದ್ದ ಪಿಸಿ ಆಕ್ಟ್ ಅಡಿಯಲ್ಲಿ ಪೊಲೀಸರು ತನಿಖೆಗೆ ನಡೆಸುತ್ತಿದ್ದಾರೆ. ದರ್ಶನ್ ರಾಜಾತಿಥ್ಯ ಸಂಬಂಧ ಮೂರು ಪ್ರಕರಣಗಳು ದಾಖಲಾಗಿತ್ತು, ಮೂರು ಪ್ರಕರಣಗಳನ್ನ ಪಿಸಿ ಆಕ್ಟ್ ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ದ ತನಿಖೆ ಅಲ್ಲದೇ ಅಧಿಕಾರಿಗಳ ವಿರುದ್ದವೂ ತನಿಖೆ ಶುರುವಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪೊಲೀಸರು, ತನಿಖೆ ನಡೆಸ್ತಿದ್ದಾರೆ. ಅತೀ ಶೀಘ್ರವೇ ಪೊಲೀಸರು, ಮೂರು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಇನ್ನೂ ಮೂರು ಪ್ರಕರಣದಲ್ಲಿ…
ಜನ್ಮ ಜಾತಕ ಅಥವಾ ಕುಂಡಲಿ ಲಗ್ನದಿಂದ ಅಂದರೆ ಕೇಂದ್ರದಿಂದ ಸಪ್ತಮ ಸ್ಥಾನ ಶನಿ ಸ್ವಾಮಿ ಇದ್ದರೆ ಮದುವೆ ವಿಳಂಬಕ್ಕೆ ಶನಿಸ್ವಾಮಿಯೇ ಕಾರಣವಾಗುತ್ತಾನೆ. ಲಗ್ನದಿಂದ ಸಪ್ತಮ ಸ್ಥಾನದಲ್ಲಿ ಶನಿ ಇದ್ದರೆ ತಮ್ಮ ಮದುವೆ ತಡವಾಗಿ ಅಂದರೆ ಮೂವತ್ತರ ಪ್ರಾಯದ ಮೇಲೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ಶನಿ ಸ್ವಾಮಿಯು ನಿಮಗೇನಾದರೂ ಒಲಿದರೆ ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತಾನೆ, ಆದರೆ ಒಲಿಯದೆ ಹೋದರೆ ತಮಗೆ ದುಃಖ ನೀಡುತ್ತಾನೆ, ಕರ್ಮ ಕಾರನೂ ಆಗಿರುತ್ತಾನೆ , ಅಲ್ಪ ಆಯಸ್ಸು ಮತ್ತು ಕಂಟಕನಾಗಿರುತ್ತಾನೆ. ಶನಿ ಸ್ವಾಮಿಗೆ ತುಲಾ ರಾಶಿಯ ಉಚ್ಚ ಸ್ಥಾನವಾಗಿದ್ದು. ಮೇಷರಾಶಿ ನೀಚಸ್ಥಾನ ವಾಗಿರುತ್ತದೆ . ಇಲ್ಲಿ ಮೇಷ ರಾಶಿಗೆ ಅಧಿಪತಿ ಕುಜ. ಕುಜ ಮತ್ತು ಶನಿ ಶತ್ರು ಗ್ರಹಗಳು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಗ್ನದಿಂದ ಸಪ್ತಮ ಸ್ಥಾನ ಕಂಕಣಬಲ ಸೂಚಿಸುತ್ತದೆ. ಒಂದು ವೇಳೆ ಶನಿ ಸ್ವಾಮಿ ಸಪ್ತಮ ಸ್ಥಾನದಲ್ಲಿದ್ದರೆ ಮದುವೆ ವಿಳಂಬವಾಗುತ್ತದೆ. ಅಷ್ಟೇ ಅಲ್ಲ ಉದ್ಯೋಗದಲ್ಲಿ ಏರಿಳಿತ ಅನುಭವಿಸುವಿರಿ. ಶನಿ ಸ್ವಾಮಿಯು ನಮ್ಮ…