ಬೆಂಗಳೂರು:- ಜನಾದೇಶದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನತೆಗೆ ಒಂದಿಲ್ಲೊಂದು ಬರೆ ಎಳೆದಿದ್ದು, ಗ್ಯಾರಂಟಿ ಸಹವಾಸ ಸಾಕಪ್ಪ ಸಾಕು ಎನ್ನುತ್ತಿದ್ದಾರೆ. ಅದರಂತೆ ಇದೀಗ ಮತ್ತೊಮ್ಮೆ ಮದ್ಯಪ್ರಿಯರಿಗೆ ಬಿಗ್ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಕರ್ನಾಟಕದಲ್ಲಿ ಮತ್ತೆ ಐಎಂಎಲ್ ಮೇಲಿನ ದರ ಏರಿಕೆ ಆಗಿದೆ.
ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಕಾರಣ 2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಬರೋಬ್ಬರಿ 38600 ಕೋಟಿ ರುಪಾಯಿ ಟಾರ್ಗೆಟ್ ನೀಡಿತ್ತು. ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ ಕೋಟಿ ಟಾರ್ಗೆಟ್ ನೀಡಲಾಗಿದೆ ಅಂದರೆ ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರೂಪಾಯಿ ಟಾರ್ಗೆಟ್ ನೀಡಿದ್ದು, ಈ ಹೊಸ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಮುಂದಾಗಿದೆ.
ಇನ್ನೂ ಈಗಾಗಲೇ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು,16 ಸ್ಲ್ಯಾಬ್ ಗಳಲ್ಲಿ 1 ರಿಂದ 4 ಸ್ಲ್ಯಾಬ್ ಗಳ ಮೇಲೆ ದರ ಏರಿಕೆ ಏರಿಕೆ ಮಾಡಿರುವ ಅಬಕಾರಿ ಇಲಾಖೆ. ಸ್ಯ್ಲಾಬ್-1, ಒಂದು ಕ್ವಾರ್ಟರ್ 65 ರೂಪಾಯಿ ಇದ್ದು ಅದರ ಮೇಲೆ 15 ರೂಪಾಯಿ ಏರಿಕೆ ಆಗಿದೆ. ಸ್ಲ್ಯಾಬ್- 2, 80 ರೂಪಾಯಿ ಇದ್ದು, ಅದರ ಮೇಲೆ 15 ರೂಪಾಯಿ ಏರಿಕೆ ಆಗಿದೆ. ಇನ್ನು ಸ್ಲ್ಯಾಬ್- 3, 120 ರೂಪಾಯಿ ಇದ್ದು, ಅದರ ಮೇಲೆ 10 ರಿಂದ 15 ರೂಪಾಯಿ ಏರಿಕೆ ಆಗಿದೆ. ಇನ್ನು ಸ್ಲ್ಯಾಬ್- 4, 130rಊ. ಇದ್ದು ಅದರ ಮೇಲೆ 10 ರಿಂದ 15 ರೂಪಾಯಿ ಏರಿಕೆಯಾಗಿದೆ.
ಒಂದು ಕ್ವಾರ್ಟರ್ ಮೇಲೆ 10 ರಿಂದ 25 ರೂಪಾಯಿ ದರ ಏರಿಕೆ ಆದರೆ ಒಂದು ಫುಲ್ ಬಾಟಲ್ ಮೇಲೆ 50 ರಿಂದ 100 ರೂಪಾಯಿ ವರೆಗೆ ಏರಿಕೆ ಆಗಿದೆ. ಇದು ಕೇವಲ ಎಂಆರ್ಪಿ ದರ ಮಾತ್ರ. ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಈ ದರದ ಮೇಲೆ 10 ರಿಂದ 15 ರೂಪಾಯಿವರೆಗೆ ಮತ್ತೆ ಹೆಚ್ಚುವರಿ ಕೊಡಬೇಕಾಗುತ್ತದೆ. ಈ ಬಗ್ಗೆ ಮದ್ಯ ಪ್ರಿಯರು ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕರ್ನಾಟಕದಲ್ಲಿ ಮತ್ತೆ ಐಎಂಎಲ್ (ಮದ್ಯ) ಮೇಲಿನ ದರ ಏರಿಕೆ ಆಗಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು, ಇದೀಗ ಮತ್ತೆ ಮೂರನೇ ಬಾರಿ ದರ ಹೆಚ್ಚಳವಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.