ಬೆಂಗಳೂರು: ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸೀಸನ್11ರ ಮತ್ತೋರ್ವ ಸ್ಪರ್ಧಿ ಮದುವೆಯಾಗಿದ್ದಾರೆ. ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಕುಮಾರ್ ಪ್ರೀತಿಸಿದ ಹುಡುಗಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಡಿಸೈನರ್ ಆಗಿರೋ ಮಾನಸಾ ಮತ್ತು ರಂಜಿತ್ ಅವರ ಮದುವೆ ಜೋರಾಗಿಯೇ ನಡೆದಿದೆ. ಎಲ್ಲ ಶಾಸ್ತ್ರಗಳೊಂದಿಗೆ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದೆ.
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
ರಂಜಿತ್ ಮತ್ತು ಮಾನಸಾ ಮದುವೆ ಬೆಂಗಳೂರಿನಲ್ಲಿಯೇ ನಡೆದಿದೆ. ದೊಡ್ಡಬಳ್ಳಾಪುರದ ಮೇನ್ ರೋಡ್, ಎಚ್.ಪಿ.ಪೆಟ್ರೋಲ್ ಪಂಪ್ ಎದುರು, ಹೊನ್ನೇನಹಳ್ಳಿಯಲ್ಲಿರೋ KSHEMYAA ದಲ್ಲಿಯೇ ಇವರ ಮದುವೆ ನಡೆದಿದೆ. ಗುರು-ಹಿರಿಯರ ಸಮ್ಮುಖದಲ್ಲಿಯೇ ಶಾಸ್ತ್ರೋಕ್ತವಾಗಿಯೇ ಇವರ ಮದುವೆ ಆಗಿದೆ.
ರಂಜಿತ್ ಮತ್ತು ಮನಸಾ ಮನೆಯಲ್ಲಿ ಮೊನ್ನೆಯಿಂದಲೇ ಮದುವೆ ಶಾಸ್ತ್ರಗಳ ನಡೆದಿವೆ. ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮವೂ ನಡೆದಿದೆ. ಈ ಮದುವೆ ಸಂಭ್ರಮದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ.