ಬೆಂಗಳುರು:- ಕನ್ನಡಿಗರನ್ನು ಉಗ್ರರಿಗೆ ಹೋಲಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಈಗಾಗಲೇ ಕನ್ನಡ ಫಿಲ್ಮ್ ಚೇಂಬರ್ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
IPL 2025: ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿವು: ಅಗ್ರ ಎರಡು ಸ್ಥಾನಕ್ಕಾಗಿ ಬಿಗ್ ಫೈಟ್!
ಅದರಂತೆ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡಿರುವ ಪೊಲೀಸರಿಗೆ ಒಂದು ತಲೆ ನೋವು ಶುರುವಾಗಿದೆ. ಎಷ್ಟೇ ಆದ್ರೂ ಅವಲಹಳ್ಳಿ ಪೊಲೀಸರಿಗೆ ಗಾಯಕ ಸೋನು ನಿಗಮ್ ಡೇಟ್ ಸಿಕ್ತಿಲ್ಲ.ಗಾಯಕನ ಮನೆಗೆ ತೆರಳಿ ಹೇಳಿಕೆ ದಾಖಲಿಸಲು ಒಂದೆಡೆ ಕೋರ್ಟ್ vಅನುಮತಿ ನೀಡಿದೆ. ಬೆಂಗಳೂರಿಗೆ ಸೋನು ನಿಗಮ್ ಹಾಜರಾದರೆ ಸಮಸ್ಯೆ ಆಗಬಹುದು ಎಂಬ ಕಾರಣದಿಂದ ಸೋನು ನಿಗಮ್ ವೆಚ್ಚದಲ್ಲೇ ಅವರಿದ್ದ ಸ್ಥಳದಲ್ಲಿ ತನಿಖೆಗೆ ಅವಕಾಶ ಮಾಡಿಕೊಡಲಾಗಿದೆ.
ಅಲ್ಲದೇ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶವಿದೆ..ಸದ್ಯ ಸೋನು ನಿಗಮ್ ಸಂಪರ್ಕ ಮಾಡಿರುವ ಅವಲಹಳ್ಳಿ ಪೊಲೀಸರಿಗೆ ಗಾಯಕನ ಡೇಟ್ ಸಿಕ್ತಿಲ್ಲ. ಸಾಲು ಸಾಲು ಪ್ರೋಗ್ರಾಂಗಳಿಗೆ ಡೇಟ್ ಕೊಟ್ಟಿರೋ ಕಾರಣ ಪೊಲೀಸರ ವಿಚಾರಣೆಗೆ ಹಾಜರಾಗಲು ಆಗುತ್ತಿಲ್ಲ..
ವಕೀಲರಿಂದ ಮಾಹಿತಿ ಪಡೆದು ಸಮಯ ನೀಡೋದಾಗಿ ಗಾಯಕ ಹೇಳಿದ್ದಾರೆ. ಡೇಟ್ ಸಿಗದೇ ಹೋದರೆ ಮತ್ತೆ ಕೋರ್ಟ್ ಮೊರೆ ಹೋಗಲು ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ.. ಈ ವಾರ ಕಾಯ್ದು ನಂತರ ಕೋರ್ಟ್ ಮೊರೆ ಹೋಗಲು ಖಾಕಿ ನಿರ್ಧಾರ ಮಾಡಿದೆ