ನೈಸರ್ಗಿಕವಾಗಿ ದೊರೆಯುವ ರಸಭರಿತ ಹಣ್ಣುಗಳಲ್ಲಿ ಅನಾನಸ್ ಸಹ ಒಂದು. ಉಷ್ಣ ವಲಯದಲ್ಲಿ ಹೆಚ್ಚಾಗಿ ಬೆಳೆಯುವ ಈ ಹಣ್ಣನ್ನು ತಾಜಾ ರೂಪದಲ್ಲಿ ಮತ್ತು ವಿವಿಧ ಖಾದ್ಯಗಳ ತಯಾರಿಕೆಯಲ್ಲಿ ಬಳಸಲಾಗುವುದು. ಶತಮಾನಗಳಿಂದಲೂ ಜೀರ್ಣಕ್ರಿಯೆ ಮತ್ತು ಉರಿಯೂತದಂತಹ ಸಮಸ್ಯೆಗೆ ಈ ಹಣ್ಣನ್ನು ಚಿಕಿತ್ಸಕವನ್ನಾಗಿ ಬಳಸಲಾಗುತ್ತಿದೆ.
ಹುಳಿ ಮತ್ತು ಸಿಹಿ ಮಿಶ್ರಣದ ರುಚಿಯನ್ನು ಹೊಂದಿರುವ ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಮ್ಯಾಂಗನೀಸ್, ನಾರಿನಂಶ ಹಾಗೂ ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಹೊಂದಿರುವ ಈ ಹಣ್ಣನ್ನು ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡಲಾಗುವುದು. ಒಂದು ಕಪ್ ಅನಾನಸ್ ಹಣ್ಣಿನಲ್ಲಿ 82.5 ಕ್ಯಾಲೋರಿ,
1.7 ಗ್ರಾಂ ಕೊಬ್ಬು, ಪ್ರೋಟೀನ್ 1 ಗ್ರಾಂ, ಕಾರ್ಬ್ 21.6 ಗ್ರಾಂ, ನಾರಿನಂಶ 2.3 ಗ್ರಾಂ, ವಿಟಮಿನ್ ಸಿ ಮತ್ತು ಎ, ಮ್ಯಾಂಗನೀಸ್, ವಿಟಿನ್ ಬಿ6, ತಾಮ್ರ, ಫೋಲೇಟ್, ಪೊಟ್ಯಾಸಿಯಮ್, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಮ್ ಸೇರಿದಂತೆ ಇನ್ನಿತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.
ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ:
ಅನಾನಸ್ ನ ಹಣ್ಣಿನಲ್ಲಿ, ದೇಹದ ದೈನಂದಿನ ಕಾರ್ಯನಿರ್ವಹಣೆಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ಇಂಟರ್ನ್ಯಾಷನಲ್ ಜನರಲ್ ಆಫ್ ನ್ಯೂಟ್ರಿಷನ್ ಅಂಡ್ ಫುಡ್ ಸೈನ್ಸಸ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಅನಾನಸ್ ಸಾಕಷ್ಟು ಪ್ರಮಾಣದ ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಸಹ ಹೊಂದಿರುತ್ತದೆ. ಹಾಗಾಗಿ ಇದರ ಸೇವನೆ ಮಾಡುವುದು ತುಂಬಾ ಉತ್ತಮ.
ಅನಾನಸ್ ನಲ್ಲಿ ಆಂಟಿಆಕ್ಸಿಡೆಂಟ್ ಹೇರಳವಾಗಿವೆ:
ಆ್ಯಂಟಿಆಕ್ಸಿಡೆಂಟ್ಗಳು ನಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೀವಕೋಶಗಳ ಹಾನಿಯ ವಿರುದ್ಧ ಹೋರಾಡುತ್ತವೆ ಮತ್ತು ಗಂಭೀರ ರೋಗಗಳಿಂದ ರಕ್ಷಿಸುತ್ತವೆ. ಆದ್ದರಿಂದ ನಿಮ್ಮ ಆಹಾರವನ್ನು ಹೆಚ್ಚು ಆರೋಗ್ಯಕರವಾಗಿಸಲು ಈ ಹಣ್ಣಿನ ಸೇವನೆ ಮಾಡಬಹುದು.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:
ಅನಾನಸ್ ಹಣ್ಣಿನ ಮತ್ತೊಂದು ಪ್ರಯೋಜನವೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಫೈಬರ್ ನಿಂದ ಸಮೃದ್ಧವಾಗಿದೆ:
ಅನಾನಸ್ ಫೈಬರ್ ನ ಸಮೃದ್ಧ ಮೂಲವಾಗಿದೆ. ಇದು ಮಲಬದ್ಧತೆಯನ್ನು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲದಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅನಾನಸ್ ಹಣ್ಣು ಉತ್ತಮ ಔಷಧವಾಗಿದೆ.
ಕ್ಯಾನ್ಸರ್ ತಡೆಗಟ್ಟಬಹುದು:
ಅನಾನಸ್ ಸೇವನೆಯು ಕ್ಯಾನ್ಸರ್ ಅನ್ನು ತಡೆಯಬಹುದು, ಏಕೆಂದರೆ ಆಕ್ಸಿಡೇಟಿವ್ ಒತ್ತಡದಿಂದಾಗಿ ಅನೇಕ ಕ್ಯಾನ್ಸರ್ ಗಳು ಬರುತ್ತವೆ. ಅನಾನಸ್ ನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಗುಣವಿದ್ದು ಆ ಮೂಲಕ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿಯೇ ಇದನ್ನು ಕ್ಯಾನ್ಸರ್ ಚಿಕಿತ್ಸೆಗೆ ಸಹ ಬಳಸಲಾಗುತ್ತದೆ ಎಂದು ಅಧ್ಯಯನವು ಹೇಳುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಅನಾನಸ್ ಹಣ್ಣು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೋವು ನಿವಾರಕ ಗುಣಗಳನ್ನು ಒಳಗೊಂಡಿದೆ:
ಅನಾನಸ್ ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವುದರಿಂದ ನೋವಿನಿಂದ ಮುಕ್ತಿ ಸಿಗುತ್ತದೆ. ಫುಡ್ಸ್ ನಲ್ಲಿ ಪ್ರಕಟವಾದ ಅಧ್ಯಯನವು, ಸಂಧಿವಾತದಿಂದ ಉಂಟಾಗುವ ನೋವನ್ನು ಗುಣಪಡಿಸಲು ಅನಾನಸ್ ಒಳ್ಳೆಯದು ಎಂದು ಹೇಳಲಾಗುತ್ತದೆ. ಜೊತೆಗೆ ಇದು ಬೆನ್ನು ನೋವನ್ನು ನಿವಾರಣೆ ಮಾಡುತ್ತದೆ. ಜೊತೆಗೆ ಇದು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ ಆದರೆ ಇದನ್ನು ಋತುಚಕ್ರದ ಮೊದಲ ಮೂರು ದಿನಗಳಲ್ಲಿ ಸೇವಿಸಬೇಕು.