ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಹಿಟ್-3. ಟೀಸರ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿದ್ದ ಈ ಚಿತ್ರದ ಜಬರ್ದಸ್ತ್ ಟ್ರೇಲರ್ ಬಿಡುಗಡೆಯಾಗಿದೆ. ನಾನಿ ಹಿಂದೆಂದೂ ಕಾಣದ ಲುಕ್ ನಲ್ಲಿ ಅಬ್ಬರಿಸಿದ್ದಾರೆ. ನಾನಿ ಹಿಟ್- 3ಗಾಗಿ ಕಂಪ್ಲೀಟ್ ರಗಡ್ ಜೊತೆ ರಕ್ತಸಿಕ್ತ ಅವತಾರ ತಾಳಿದ್ದು, 3 ನಿಮಿಷ 31 ಸೆಕೆಂಡ್ ಇರುವ ಟ್ರೇಲರ್ ನಲ್ಲಿ ಅಬ್ ಕಿ ಬಾರ್ ಅರ್ಜುನ್ ಸರ್ಕಾರ್ ಎನ್ನುತ್ತಾ ಅಬ್ಬರಿಸಿದ್ದಾರೆ.
ಕ್ರೈಂ ಮತ್ತು ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಈ ಚಿತ್ರಕ್ಕೆ ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ‘ಹಿಟ್ ಸಿನಿಮಾದ ಮೂರನೇ ಫ್ರಾಂಚೈಸಿ ಹಿಂದಿನ ಎರಡು ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಹೆಚ್ಚು ಕ್ರೂರ ಮತ್ತು ರಕ್ತ, ಹಿಂಸೆ ಕಾಣಿಸುತ್ತಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ನಾನಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪ್ರಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ಮಿಕ್ಕಿ ಜೆ ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ಹಿಟ್-3 ಚಿತ್ರಕ್ಕಿದೆ.ಟ್ರೇಲರ್ ಮೈ ಜುಮ್ ಅನ್ನೋ ಹಾಗೆ ಇದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದ್ದು, ಮೇ 1ರಂದು ಚಿತ್ರ ಬಿಡುಗಡೆಯಾಗಲಿದೆ.