ಜೂನ್ 24ರಿಂದ ಜುಲೈ 23ರವರೆಗೆ ಇಂಗ್ಲೆಂಡ್ ವಿರುದ್ದ ಪ್ರವಾಸಕ್ಕೆ ಭಾರತದ U-19 ತಂಡದ ಪಟ್ಟಿ ಪ್ರಕಟವಾಗಿದೆ. ಸಿಎಸ್‌ಕೆ ತಂಡದಲ್ಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ್ದ 17 ವರ್ಷದ ಆಯುಷ್ ಮ್ಹಾತ್ರೆಗೆ ಬೊಂಬಾಟ್ ಚಾನ್ಸ್ ಸಿಕ್ಕಿದೆ. ಆಯುಷ್ ಭಾರತದ U-19 ತಂಡದ ನಾಯಕನ ಪಟ್ಟಗಿಟ್ಟಿಸಿಕೊಂಡಿದ್ದಾರೆ. ರಾಜಸ್ತಾನ ರಾಯಲ್ಸ್ ತಂಡದಲ್ಲಿ ಸಿಡಿಲ್ಲಬರ ಬ್ಯಾಟಿಂಗ್ ಆಡಿದ್ದ 14 ವರ್ಷದ ವೈಭವ್ ಸೂರ್ಯವಂಶಿಗೂ ಈ ಪಂದ್ಯದಲ್ಲಿ ಆಡುವ ಅವಕಾಶ ದೊರೆತಿದೆ.
ಇಂದು ಬಿಸಿಸಿಐ ಬಿಸಿಸಿಐ ಅಂಡರ್ 19 ತಂಡವನ್ನು ಪ್ರಕಟ ಮಾಡಿದ್ದು, ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಅವಕಾಶವನ್ನು ಟೀಮ್ ಇಂಡಿಯಾದ ಕಿರಿಯರ ತಂಡದಲ್ಲಿ ಅವಕಾಶ ನೀಡಲಾಗಿದೆ. ಇದರಲ್ಲಿ 50 ಓವರ್‌ಗಳ ಅಭ್ಯಾಸ ಪಂದ್ಯ, ಐದು ಯೂತ್ ODI ಸರಣಿ ಮತ್ತು ಇಂಗ್ಲೆಂಡ್ U-19 ವಿರುದ್ಧ ಎರಡು ಪಂದ್ಯಗಳು ಇವೆ. ಜೂನಿಯರ್ ಕ್ರಿಕೆಟ್ ಸಮಿತಿ ತಂಡವನ್ನು ಆಯ್ಕೆ ಮಾಡಿದೆ.
ತಂಡದಲ್ಲಿ ಯಾರಿದ್ದಾರೆ?
ಆಯುಷ್ ಮ್ಹಾತ್ರೆ (ನಾಯಕ), ಅಭಿಜ್ಞಾನ್ ಕುಂಡು (ಉಪನಾಯಕ ಮತ್ತು ವಿಕೆಟ್ ಕೀಪರ್), ಹರ್ವಾಂಶ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರ, ಮೌಲ್ಯರಾಜ್‌ಸಿನ್ಹ್ ಚಾವ್ಡಾ, ರಾಹುಲ್ ಕುಮಾರ್, ಆರ್.ಎಸ್. ಅಂಬರೀಶ್, ಕನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ಯುಧಾಜಿತ್ ಗುಹಾ, ಪ್ರಣವ್ ರಾಘವೇಂದ್ರ, ಮೊಹಮ್ಮದ್ ಎನಾನ್, ಆದಿತ್ಯ ರಾಣಾ, ಅನ್ಮೋಲ್‌ಜೀತ್ ಸಿಂಗ್.
🚨 𝗡𝗘𝗪𝗦 🚨
India U19 squad for Tour of England announced.
Details 🔽
— BCCI (@BCCI) May 22, 2025