ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ತಕ್ಕ ಉತ್ತರ ನೀಡಿದೆ. ಈ ನಡುವೆ, 1971ರಲ್ಲಿ ಪಾಕ್ ಖಡಕ್ ಎಚ್ಚರಿಕೆ ಕೊಟ್ಟು ಮಣಿಸಿದ್ದ ಇಂದಿರಾಗಾಂಧಿ ಹೇಳಿಕೆ, ದಿಟ್ಟತನ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.
ಪಾಕ್ ಜತೆ ಕದನ ವಿರಾಮಕ್ಕೆ ಮುಂದಾದ ಪ್ರಧಾನಿ ಮೋದಿ ವಿರುದ್ಧ ದೇಶಾದ್ಯಂತ ಅಸಮಾಧಾನ ವ್ಯಕ್ತವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಇಂದಿರಾಗಾಂಧಿ ಹೆಸರು ಪ್ರಸ್ತಾಪಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇಂದಿರಾಗಾಂಧಿ ಪರ ನಿಲುವು ಪರ ಕಾಂಗ್ರೆಸ್ ನಾಯಕರು ಬ್ಯಾಟಿಂಗ್ ಮಾಡುವಂತಹ ಪರಿಸ್ಥಿತಿ ಇಲ್ಲ, ಯಾವ ಪ್ರಶ್ನೆಯೂ ಇಲ್ಲ. ಎಲ್ಲವೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇದಕ್ಕೆ ಯಾರೂ ಕಿವಿಕೊಡಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
ಯುದ್ಧ ನಡೆಯುತ್ತಿರುವಂತೆ ನಿಮಗೆ ಕನಸು ಬಿತ್ತಾ..? ಹಾಗಿದ್ರೆ ಇದರ ಹಿಂದೆ ನಿಮ್ಮ ಜೀವನದ ರಹಸ್ಯ ಅಡಗಿದೆ..!
ಕದನ ವಿರಾಮ ಆದ್ಮೇಲೆ ಪಾಕಿಸ್ತಾನದ ಸೇನೆ ಗೊತ್ತಿದ್ದು ಗೊತ್ತಿದ್ದು ದಾಳಿ ಮಾಡಿದೆ. ಭಾರತದ ಹಲವು ಕಡೆ ಪಾಕ್ ದಾಳಿ ಮಾಡಿ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ನಾನು ನಮ್ಮ ಸೇನೆಗೆ ಅಭಿನಂದಿಸುತ್ತೇನೆ. ಆದ್ರೆ ಭಾರತ ಸರ್ಕಾರ ಏನ್ ನಿರ್ಣಯ ತೆಗೆದುಕೊಂಡಿದೆ, ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಒಗ್ಗಟ್ಟಾಗಿ ಸೇನೆಗೆ ಬೆಂಬಲ ನೀಡಬೇಕು ಎಂದು ದೇಶಪಾಂಡೆ ಸಲಹೆ ನೀಡಿದ್ದಾರೆ.