ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಅದ್ಭುತ ನಟ. ಅದರ ಹೊರತಾಗಿ ಅವರಿಗೆ ಕಾರ್ ರೇಸಿಂಗ್ ಕ್ರೇಜ್ ಜೊತೆಗೆ ಬೈಕ್ ಏರಿ ದೇಶ ಸುತ್ತುತ್ತಾರೆ. ವರ್ಷದ ಆರಂಭದಲ್ಲಿ ದುಬೈನಲ್ಲಿ ನಡೆದ ಕಾರ್ ರೇಸಿಂಗ್ ವೇಳೆ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಅಜಿತ್ ರೇಸಿಂಗ್ ಕಾರು ಅಪಘಾತಗೊಂಡಿದೆ.
ಬೆಲ್ಜಿಯಂನಲ್ಲಿ ನಡೆದ ರೇಸಿಂಗ್ ಕಾರ್ಯಕ್ರಮದ ವೇಳೆ ಸಂಭವಿಸಿದ ಮತ್ತೊಂದು ಕಾರು ಅಪಘಾತದಲ್ಲಿ ಅಜಿತ್ ಕುಮಾರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ.
ಅಜಿತ್ ರೇಸಿಂಗ್ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ಕಾರಿನ ಮುಂಭಾಗ ತೀವ್ರ ಹಾನಿಯಾಗಿದೆ. ಕಾರಿನ ಎಂಜಿನ್ ನಜ್ಜುಗುಜ್ಜುಯಾಗಿರುವ ವಿಡಿಯೋ ವೈರಲ್ ಆಗಿದೆ.
ಅಜಿತ್ ಕುಮಾರ್ ನಟನೆಯ ಗುಡ್ ಬ್ಯಾಡ್ ಆಗ್ಲಿ ಸಿನಿಮಾ ಸೂಪರ್ ಆಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಅಜಿತ್ ರೇಸಿಂಗ್ ಕಾರು ಅಪಘಾತವಾಗಿದ್ದು, ಅಭಿಮಾನಿಗಳು ಆತಂಕದಲ್ಲಿದ್ದಾರೆ.