ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಜಯ ಸಾಧಿಸಿರುವ ಪಂಜಾಬ್ ಕಿಂಗ್ಸ್ ಟೇಬಲ್ ಟಾಪರ್ ಆಗಿದೆ. 11 ವರ್ಷಗಳ ಬಳಿಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಪಂಜಾಬ್ ಕಿಂಗ್ಸ್ ಇದೇ ಮೊದಲಬಾರಿಗೆ ನಂ.1 ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ
ಈ ರಾಶಿಯವರ ಕಮಿಷನ್ ವ್ಯವಹಾರಗಳಿಗೆ ನಿರೀಕ್ಷೆ ಮೀರಿದ ಆದಾಯ: ಮಂಗಳವಾರದ ರಾಶಿ ಭವಿಷ್ಯ 27 ಮೇ 2025
ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಚಚ್ಚಿ ಗೆಲುವು ಸಾಧಿಸಿತು. ಈ ಪಂದ್ಯದ ಮುಕ್ತಾಯದೊಂದಿಗೆ ಉಭಯ ತಂಡಗಳೂ 18ನೇ ಆವೃತ್ತಿಯ ಲೀಗ್ ಸುತ್ತಿನ ಪಂದ್ಯಗಳನ್ನು ಮುಕ್ತಾಯಗೊಳಿಸಿದವು.
ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ 4.2 ಓವರ್‌ಗಳಲ್ಲಿ 34 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆದ್ರೆ 2ನೇ ವಿಕೆಟ್‌ಗೆ ಜೋಶ್ ಇಂಗ್ಲಿಸ್ ಹಾಗೂ ಪ್ರಿಯಾಂಶ್ ಆರ್ಯ ಶತಕದ ಜೊತೆಯಾಟ ನೆರವಿನಿಂದ ಸುಲಭ ಗೆಲುವಿನತ್ತ ಮುನ್ನಡೆಯಿತು. 2ನೇ ವಿಕೆಟಿಗೆ ಈ ಜೋಡಿ 59 ಎಸೆತಗಳಲ್ಲಿ 109 ರನ್ ಗಳಿಸಿತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 2 ಸಿಕ್ಸರ್, 9 ಬೌಂಡರಿ ಸಹಿತ 62 ರನ್ ಸಿಡಿಸಿ ಔಟಾಗುತ್ತಿದ್ದಂತೆ ಜೋಶ್ ಇಂಗ್ಲಿಷ್ ಆರ್ಭಟ ಮುಂದುವರಿಸಿದರು. ಇದಕ್ಕೆ ನಾಯಕ ಶ್ರೇಯಸ್ ಅಯ್ಯರ್ ಕೂಡ ಸಾಥ್ ನೀಡಿದ್ರು.
ಇಂಗ್ಲಿಷ್ 48 ಎಸೆತಗಳಲ್ಲಿ 73 ರನ್ (42 ಎಸೆತ, 3 ಸಿಕ್ಸರ್, 9 ಬೌಂಡರಿ) ಚಚ್ಚಿದ್ರೆ, ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ ಅಜೇಯ 26 ರನ್, ನೇಹಾಲ್ ವಧೇರ ಅಜೇಯ 2 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರು.