ನವದೆಹಲಿ: ಪಾಕ್ ಆಕ್ರಮಿಕ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ನಡೆದ ಭಾರತೀಯ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂಧೂರಕ್ಕೆ ಬೆಚ್ಚಿಬಿದ್ದ ಪಾಪಿ ಪಾಕಿಸ್ತಾನ, ಟರ್ಕಿಸ್ ಡ್ರೋನ್ ಗಳ ಮೂಲಕ ಭಾರತದ ಮೇಲೆ ಅಟ್ಯಾಕ್ ಮಾಡಿದೆ.
ಕಳೆದ ರಾತ್ರಿ, ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿಗಳೊಂದಿಗೆ ಜಮ್ಮು, ಪಠಾಣ್‌ಕೋಟ್, ಜೈಸಲ್ಮೇರ್ ಸೇರಿದಂತೆ ಹಲವಾರು ಪ್ರದೇಶಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫ; ಯಯತ್ನ ನಡೆಸಿದೆ.
ಆದರೆ ಭಾರತದ S-400 ರಕ್ಷಣಾ ವ್ಯವಸ್ಥೆಯಿಂದ ಪಾಕ್ ಸಂಚು ವಿಫಲಗೊಳಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಕರ್ನಲ್ ಸೋಫಿಯಾ ಖುರೇಶಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ನರಿ ಬುದ್ಧಿ ಪಾಕ್ ನ ನಿಜ ಬಣ ಬಯಲು ಮಾಡಿದ್ದಾರೆ.
ಆಪರೇಷನ್ ಸಿಂಧೂರ್ ನಿಂದ ನಿರಾಶೆಗೊಂಡ ಪಾಕಿಸ್ತಾನ, ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಲು ಪ್ರಯತ್ನಿಸಿದೆ. ಆದರೆ ಭಾರತೀಯ ಪಡೆಗಳು ಅದನ್ನು ಸಂಪೂರ್ಣವಾಗಿ ವಿಫಲಗೊಳಿಸಿವೆ. ಗುರುವಾರ ರಾತ್ರಿ 8 ರಿಂದ 10 ಗಂಟೆಯ ನಡುವೆ ಪಾಕಿಸ್ತಾನವು ಯುದ್ಧ ವಿಮಾನಗಳು, ಡ್ರೋನ್‌ಗಳು, ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ಜಮ್ಮು, ಪಠಾಣ್‌ಕೋಟ್, ಫಿರೋಜ್‌ಪುರ, ಕಪುರ್ತಲಾ, ಜಲಂಧರ್ ಮತ್ತು ಜೈಸಲ್ಮೇರ್‌ಗಳಲ್ಲಿನ ಸೇನಾ ನೆಲೆಗಳು ಮತ್ತು ಶಸ್ತ್ರಾಸ್ತ್ರ ಕೇಂದ್ರಗಳ ಮೇಲೆ ದಾಳಿಗೆ ಯತ್ನಿಸಿತ್ತು. ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿ, ಅದರ ರಾಡಾರ್ ವ್ಯವಸ್ಥೆಯನ್ನು ನಾಶಪಡಿಸುವ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿದೆ.