ಭಾರತದ ಪ್ರತೀಕಾರದ ಕ್ರಮದಿಂದಾಗಿ ಪಾಕಿಸ್ತಾನದಲ್ಲಿ ಭೀತಿ ಉಂಟಾಗಿದೆ. ಅದರ ಹಲವು ನಗರಗಳಲ್ಲಿ ಅವ್ಯವಸ್ಥೆಯ ವಾತಾವರಣವಿದೆ. ಸೇನಾ ಶಿಬಿರಗಳಿಂದ ಜನರನ್ನು ಸ್ಥಳಾಂತರಿಸುವ ಕೆಲಸವೂ ನಡೆಯುತ್ತಿದೆ. ವಾಸ್ತವವಾಗಿ, ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ ನಂತರ,
ಭಾರತವು ಲಾಹೋರ್, ಇಸ್ಲಾಮಾಬಾದ್, ಕರಾಚಿ, ಸಿಯಾಲ್ಕೋಟ್, ಬಹವಾಲ್ಪುರ್ ಮತ್ತು ಪೇಶಾವರ್ ಸೇರಿದಂತೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಸ್ಥಳೀಯ ಆಕಾಶ್ ರಕ್ಷಣಾ ಕ್ಷಿಪಣಿ ಪಾಕಿಸ್ತಾನದ ದಾಳಿಗಳನ್ನು ವಿಫಲಗೊಳಿಸಿತು.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಇನ್ನೂ ಈ ವಿಚಾರವಾಗಿ ಕಂಗನಾ ರಣಾವತ್ ಮಾತನಾಡಿದ್ದಾರೆ. ಪಾಕಿಸ್ತಾನವನ್ನು ‘ಭಯೋತ್ಪಾದಕರ ನಾಡು’ ಎಂದು ಕರೆದಿರುವ ಅವರು, ‘ವಿಶ್ವದ ಮ್ಯಾಪ್ನಿಂದಲೇ ಅವರನ್ನು ತೆಗೆದು ಹಾಕಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದವರು ಭಾರತದ ಮೇಲೆ ಹಲವು ಕಡೆಗಳಲ್ಲಿ ಡ್ರೋನ್ ದಾಳಿ ಮಾಡಲು ಪ್ರಯತ್ನಿಸಿದ್ದು ಇದೆ.
ಜಮ್ಮು, ಸಾಂಬಾ, ಸತ್ವಾರಿ, ಅಮೃತ್ಸರ್, ಜಲಂಧರ್ ಮೊದಲಾದ ಕಡೆಗಳಲ್ಲಿ ಪಾಕ್ ಡ್ರೋನ್ ದಾಳಿಗೆ ಪ್ರಯತ್ನಿಸಿದ್ದು ಭಾರತ ಅದನ್ನು ಹಿಮ್ಮೆಟ್ಟಿಸಿದೆ. ಇನ್ನು, ಪಹಲ್ಗಾಮ್ ದಾಳಿ ಹಿಂದೆ ನಮ್ಮ ಕೈವಾಡ ಇಲ್ಲ ಎಂದು ಪಾಕ್ ವಾದಿಸುತ್ತಲೇ ಬರುತ್ತಿದೆ.
ಈ ವಿಚಾರಗಳ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ. ‘ಪಾಕಿಸ್ತಾನ ರಕ್ತಸಿಕ್ತ ಜಿರಳೆಗಳಿಂದ ಕೂಡಿದೆ. ಭಯೋತ್ಪಾದಕರಿಂದ ತುಂಬಿರುವ ಭಯಾನಕ, ಅಸಹ್ಯ ರಾಷ್ಟ್ರ. ವಿಶ್ವ ಭೂಪಟದಿಂದಲೇ ಅವರನ್ನು ಅಳಿಸಿಹಾಕಬೇಕು’ ಎಂದು ಕಂಗನಾ ಅವರು ಗುಡುಗಿದ್ದಾರೆ. ಅವರ ಹೇಳಿಕೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.