ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾದವರು ನಟಿ ನಮ್ರತಾ ಗೌಡ. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯೂ ಆಗಿದ್ದ ಅವರು ಜನ್ಮದಿನದ ಖುಷಿಯಲ್ಲಿದ್ದಾರೆ. ನಮ್ರತಾ ಹುಟ್ಟುಹಬ್ಬಕ್ಕೆ ರಕ್ಷಕ್ ಬುಲೆಟ್ ಸರ್ ಪ್ರೈಸ್ ಕೊಟ್ಟಿದ್ದಾರೆ. ನಮ್ರತಾಗೆ ಬಿಗ್ ಬಾಸ್ ಮೂಲಕ ಪರಿಚಯವಾದವರು ರಕ್ಷಕ್ . ರಕ್ಷಕ್ ಅವರನ್ನು ನಮ್ರತಾ ತಮ್ಮ ಎಂದು ಪ್ರೀತಿಯಿಂದ ಕರೆಯುತ್ತಾರೆ. ಹೀಗಾಗಿ ಅಕ್ಕನ ಹುಟ್ಟುಹಬ್ಬವನ್ನು ರಕ್ಷಕ್ ಸ್ಪೆಷಲ್ ಆಗಿ ಆಚರಿಸಿದ್ದಾರೆ.
ರಕ್ಷಕ್ ನಮ್ರತಾಗೆ ಪಪ್ಪು ಎಂದು ಕರೆಯುತ್ತಾರೆ. ಪಪ್ಪು ಬರ್ತಡೇಗೆ ಸ್ಪೆಷಲ್ ಡಿಕೋರೇಟ್ ಮಾಡಿ ನಮ್ರತಾಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ರಕ್ಷಕ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ನಮ್ರತಾ ಬರ್ತಡೇ ವಿಡಿಯೋ ಹಂಚಿಕೊಂಡು ಹ್ಯಾಪಿ ಬರ್ತಡೇ ಪಪ್ಪು ಕೊನೆವರೆಗೂ ನಿನ್ನ ಜೊತೆ ಇರ್ತಿನಿ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ರಕ್ಷಕ್ ಸರ್ ಪ್ರೈಸ್ ನೋಡಿ ನಮ್ರತಾ ಎಮೋಷನಲ್ ಆಗಿದ್ದಾರೆ. ತನಿಷಾ ಕೂಡ ನಮ್ರತಾ ಗೌಡ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಿದ್ದಾರೆ.