ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.
ಈಗಾಗಲೇ ಪ್ಲೇ ಆಫ್‌ಗೆ 4 ತಂಡಗಳು ಪ್ರವೇಶ ಪಡೆದರೂ ಅಗ್ರ-2 ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ ಇನ್ನೂ ಕಡಿಮೆಯಾಗಿಲ್ಲ. 14 ಪಂದ್ಯಗಳಿಂದ 19 ಅಂಕ ಪಡೆದಿರುವ ಪಂಜಾಬ್ ಈಗಾಗಲೇ ಕ್ವಾಲಿಫೈಯರ್-1ಗೆ ಅರ್ಹತೆ ಪಡೆದಿದೆ. ಕ್ವಾಲಿಫೈಯರ್ ಅರ್ಹತೆ ಪಡೆಯುವ ಎರಡನೇ ತಂಡಕ್ಕೆ ಆರ್‌ಸಿಬಿ ಮತ್ತು ಗುಜರಾತ್ ಮಧ್ಯೆ ಪ್ರಬಲ ಸ್ಪರ್ಧೆ ನಡೆಯುತ್ತಿದೆ. ಗುಜರಾತ್ ಸತತ 2 ಪಂದ್ಯಗಳನ್ನು ಸೋತರೆ ಆರ್‌ಸಿಬಿ ಹೈದರಾಬಾದ್ ವಿರುದ್ಧ ಸೋತಿದೆ.
ಸಿಗರೇಟ್ ಕೊಟ್ಟಿಲ್ಲ ಅಂತ ಅಂಗಡಿ ವಸ್ತುಗಳನ್ನು ಬಿಸಾಡಿ ಪುಡಿರೌಡಿಯ ದಾಂಧಲೆ: ವಿಡಿಯೋ ನೋಡಿ!
ಅಂಕಪಟ್ಟಿಯಲ್ಲಿ ಗುಜರಾತ್ 18 ಅಂಕ ಪಡೆದರೆ ಆರ್‌ಸಿಬಿ 17 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್‌ನ ಸತತ 2 ಪಂದ್ಯಗಳನ್ನು ಸೋತ ಕಾರಣ ಆರ್‌ಸಿಬಿಗೆ ಅಗ್ರ-2 ಸ್ಥಾನಕ್ಕೇರುವ ಸುವರ್ಣಾವಕಾಶ ಒದಗಿಬಂದಿದೆ. ಒಂದು ವೇಳೆ ಲಕ್ನೋ ವಿರುದ್ಧ ಆರ್‌ಸಿಬಿ ಸೋತರೆ ಮುಂಬೈ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗುತ್ತದೆ.
ಆರ್‌ಸಿಬಿ ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಬಹುದು. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೂ, ಆರ್‌ಸಿಬಿಗೆ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲಿದೆ.
ಸಂಭಾವ್ಯ ಆರ್‌ಸಿಬಿ ಟೀಂ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೆವಿಡ್, ರೊಮಾರಿಯೋ ಶೆಫಾರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್