ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಆರ್ ಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ತವರಿನ ಸೋಲಿನ ಹಸಿವನ್ನು ನೀಗಿಸಿಕೊಂಡಿತು.
ಈ ರಾಶಿಯವರು ಯಾವುದಾದರೂ ಒಂದು ಮೂಲದಿಂದ ಬೃಹತ್ ಪ್ರಮಾಣದ ಧನ ಸಂಪಾದನೆ: ಶುಕ್ರವಾರದ ರಾಶಿ ಭವಿಷ್ಯ 25 ಏಪ್ರಿಲ್ 2025!
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ನೆರವಿನಿಂದ 205 ರನ್ ಗಳಿಸಿತು. ಇದಾದ ನಂತರ, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಅವರ ಬಲವಾದ ಇನ್ನಿಂಗ್ಸ್ ರಾಜಸ್ಥಾನಕ್ಕೆ ಗೆಲುವಿನ ಭರವಸೆ ನೀಡಿತು. ಆದರೆ ಜೋಶ್ ಹ್ಯಾಜಲ್ವುಡ್ ಮತ್ತು ಕೃನಾಲ್ ಪಾಂಡ್ಯ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಪಂದ್ಯವನ್ನು ತಿರುಗಿಸಿ ಬೆಂಗಳೂರಿಗೆ ಗೆಲುವು ತಂದುಕೊಟ್ಟರು
ಬೆಂಗಳೂರು ತಂಡವು ರಾಜಸ್ಥಾನವನ್ನು 11 ರನ್ಗಳಿಂದ ಸೋಲಿಸಿ ತವರಿನಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಈ ಆರನೇ ಗೆಲುವಿನೊಂದಿಗೆ ಆರ್ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ವಿರಾಟ್ ಕೊಹ್ಲಿ 70 ರನ್ ಗಳಿಸಿದರೆ, ಪಡಿಕ್ಕಲ್ 50 ರನ್ ಗಳಿಸಿದರು. ಬೌಲಿಂಗ್ನಲ್ಲಿ ಹ್ಯಾಜಲ್ವುಡ್ 4 ವಿಕೆಟ್ಗಳನ್ನು ಪಡೆಯುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.