ಭಾರತೀಯ ಚಿತ್ರರಂಗದಲ್ಲಿ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಪಟ್ಟಿಗಳಲ್ಲಿ ಕನ್ನಡದ ಕಾಂತಾರ ಪ್ರೀಕ್ವೆಲ್ ಕೂಡ ಒಂದಾಗಿದೆ. ಕಾಂತಾರ ಸೀಕ್ವೆಲ್ ಕಮಲ್ ಮಾಡಿದ್ಮೇಲೆಂತೂ ಅಖಂಡ ಸಿನಿಮಾಪ್ರೇಮಿಗಳು ಕಾಂತಾರ 1 ಕಣ್ತುಂಬಿಕೊಳ್ಳೊದಿಕ್ಕೆ ಕಾತರರಾಗಿದ್ದಾರೆ. ಕಾಂತಾರ ಪ್ರೀಕ್ವೆಲ್ ಮೂಲಕ ರಿಷಬ್ ಶೆಟ್ಟಿ ಅದ್ಯಾವ ಕಥೆಯನ್ನು ಹರವಿಡಲಿದ್ದಾರೆ ಅನ್ನೋದನ್ನು ಕ್ಯೂರಿಯಾಸಿಟಿ ದುಪ್ಪಟ್ಟಿದೆ. ವಿಶೇಷ ಎನ್ನುವಂತೆ ಡಿವೈನ್ ಸ್ಟಾರ್ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಪ್ರಭಾಸ್, ಹೃತಿಕ್ ರೋಷನ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟು ನಂಬರ್ 1 ಸ್ಥಾನ ಪಡೆದಿದ್ದಾರೆ.
2025ರ ಅತಿ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಕಾಂತಾರ ಪ್ರೀಕ್ವೆಲ್ ಪಾಲಾಗಿದೆ. ಕಾಂತಾರ 1 ಸಿನಿಮಾವನ್ನು ಸಿನಿಮಾಪ್ರೇಮಿಗಳು ಅದೆಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದಾರೆ ಅನ್ನೋದಕ್ಕೆ ಐಎಂಡಿಬಿ ಪಟ್ಟಿಯೇ ಉದಾಹರಣೆಯಾಗಿದೆ.
ಐಎಂಡಿಬಿ ಪಟ್ಟಿಯಲ್ಲಿ ಕಾಂತಾರ ಪ್ರೀಕ್ವೆಲ್ 1 ಸ್ಥಾನದಲ್ಲಿದ್ದರೆ, ಸೂರ್ಯ ‘ರೆಟ್ರೋ’ ಸಿನಿಮಾ ಮೂರನೇ ಸ್ಥಾನ ಪಡೆದುಕೊಂಡಿದೆ. ಅಜಯ್ ದೇವಗನ್ ಅಭಿನಯದ ‘ರೇಡ್ 2’ ಚಿತ್ರ ನಾಲ್ಕು, ರಜನಿಯ ‘ಕೂಲಿ’ ಸಿನಿಮಾಗೆ ಐದನೇ ಸ್ಥಾನದಲ್ಲಿದೆ. ಹೃತಿಕ್ ರೋಷನ್ ‘ವಾರ್ 2’ ಸಿನಿಮಾ 6ನೇ ಸ್ಥಾನದಲ್ಲಿ, ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ 7ನೇ ಸ್ಥಾನದಲ್ಲಿದೆ. ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಸಿನಿಮಾ 8ನೇ ಸ್ಥಾನ ಪಡೆದುಕೊಂಡಿದೆ.
ಕಾಂತಾರ ಪ್ರೀಕ್ವೆಲ್ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಇಲ್ಲಿವರೆಗೂ ಚಿತ್ರತಂಡ ಸ್ಟಾರ್ ಕಾಸ್ಟ್ ಬಗ್ಗೆ ಸಣ್ಣದೊಂದು ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ರಿಷಬ್ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ 1ಗೆ ಹೊಂಬಾಳೆ ಪೊಡಕ್ಷನ್ ನಿರ್ಮಾಣ ಮಾಡುತ್ತಿದೆ.