ಐಪಿಎಲ್ 2025ರ ಪಂದ್ಯ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಈ ಹೊತ್ತಲ್ಲೇ ರಾಬಿನ್ ಉತ್ತಪ್ಪ ಅವರು ಫೈನಲ್ ಪಂದ್ಯ ಆಡುವ ಎರಡು ತಂಡಗಳನ್ನು ಹೆಸರಿಸಿದ್ದಾರೆ.
ಜೂ.6ರಂದು ಮಾದೇವ ಸಿನೆಮಾ ರಿಲೀಸ್: ರಾಯರ ದರ್ಶನದ ಬಳಿಕ ಆಂಜನೇಯ ಮಂದಿರದಲ್ಲಿ ವಿನೋದ್ ಪ್ರಭಾಕರ್ ಪೂಜೆ
ಟೀಂ ಇಂಡಿಯಾದ ಮಾಜಿ ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಎರಡು ಫೈನಲ್ ತಂಡಗಳ ಬಗ್ಗೆ ಮಾತನಾಡಿದ್ದು, ‘ಪಂಜಾಬ್ ಕಿಂಗ್ಸ್ ಅದ್ಭುತವಾಗಿ ಆಡುವ ಮೂಲಕ ಪ್ಲೇಆಫ್‌ಗೆ ತಲುಪಿದೆ. ಪಂಜಾಬ್‌ನ ಬ್ಯಾಟಿಂಗ್ ತುಂಬಾ ಬಲಿಷ್ಠವಾಗಿ ಕಾಣುತ್ತದೆ. ಅರ್ಶ್‌ದೀಪ್ ಸಿಂಗ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದು, ಇದು ಮುಂಬರುವ ಪ್ರಮುಖ ಪಂದ್ಯಗಳಲ್ಲಿ ಅವರು ದೊಡ್ಡ ಪ್ರದರ್ಶನ ನೀಡಲಿದ್ದಾರೆ ಎಂಬುದರ ಸೂಚನೆಯಾಗಿದೆ. ಐಪಿಎಲ್ 2025 ರ ಅಂತಿಮ ಪಂದ್ಯ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ ಎಂಬುದು ನನ್ನ ಅನಿಸಿಕೆ ಎಂದು ಉತ್ತಪ್ಪ ಹೇಳಿದ್ದಾರೆ.
ಆರ್‌ಸಿಬಿ ಬಗ್ಗೆ ಉತ್ತಪ್ಪ ಮಾತನಾಡಿ, ‘ಜೋಶ್ ಹೇಜಲ್‌ವುಡ್ ಮರಳಿರುವುದು ನನಗೆ ತುಂಬಾ ಸಂತೋಷ ತಂದಿದೆ. ತಂಡದಲ್ಲಿ ಅವರ ಉಪಸ್ಥಿತಿಯು ಆರ್‌ಸಿಬಿಯನ್ನು ಬಲಪಡಿಸುತ್ತದೆ. ಹೇಜಲ್‌ವುಡ್ ಉತ್ತಮವಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ, ಆದರೆ ವಿರಾಟ್ ಕೊಹ್ಲಿ ಚೇಸ್ ಮಾಸ್ಟರ್ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಅವರು 20 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಬೇಕಾಗುತ್ತದೆ, ಅವರು ಹಾಗೆ ಮಾಡಿದರೆ ಎದುರಾಳಿ ತಂಡ ಒತ್ತಡಕ್ಕೆ ಒಳಗಾಗುತ್ತದೆ ಎಂದಿದ್ದಾರೆ.