ಸೆಲೆಬ್ರಿಟಿಗಳ ಲೈಫ್ ಕಲರ್ಫುಲ್, ಅಷ್ಟೇ ದುಬಾರಿ.. ಅವರು ಹಾಕೋ ಬಟ್ಟೆಯಿಂದ ಹಿಡಿದು ತಿನ್ನೋ ಊಟ ಕೂಡ ಹೈಫೈ ಆಗಿರುತ್ತೇ. ಲಕ್ಷ ಲಕ್ಷ ಬೆಲೆಯ ಬಟ್ಟೆ ಹಾಕ್ತಾರೆ. ಕೋಟಿ ಕೋಟಿ ಕಾರಿನಲ್ಲಿ ಓಡಾಡ್ತಾರೆ. ಸದ್ಯ ಟಾಲಿವುಡ್ ಮನ್ಮಥ ನಾಗಾರ್ಜುನ್ ಅಕ್ಕಿನೇನಿ ಪುತ್ರ ಅಕ್ಕಿನೇನಿ ನಾಗಚೈತನ್ಯ ಪತ್ನಿ ಶೋಭಿತಾ ಧೂಳಿಪಾಲ ತೊಟ್ಟ ಸೀರೆ ಎಲ್ಲರ ಕಣ್ಣು ಕುಕ್ಕಿದೆ.
ನಿನ್ನೆ ಮುಂಬೈನ ಜಿಯೋವರ್ಲ್ಡ್ ಸೆಂಟರ್ನಲ್ಲಿ ವೇವ್ಸ್ ಶೃಂಗಸಭೆ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಹೇಮಾ ಮಾಲಿನಿ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ತೆಲುಗಿನಿಂದ ನಟ ಚಿರಂಜೀವಿ, ನಟ ನಾಗಾರ್ಜುನ್ ಹಾಗೂ ಪತ್ನಿ ಶೋಭಿತಾ ಕೂಡ ವೇವ್ಸ್ ನಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶೋಭಿತಾ ಮಲ್ಲಿಗೆ ಹೂವು ಮುಡಿದು, ಹಣೆಗೆ ಕುಂಕುಮ ಹಾಕಿ ಭಾರತೀಯ ನಾರಿಯಂತೆ ಮಿಂಚಿದ್ದಾರೆ.
ಶೋಭಿತಾ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಶೋಭಿತಾ ತೊಟ್ಟ ಸೀರೆ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿರೋದು. ಆಲಿವ್ ಗ್ರೀನ್ ಟಿಶ್ಯೂ ಕಸೂತಿ ಸೀರೆಯ ಬೆಲೆ ಬರೋಬ್ಬರಿ 4 ಲಕ್ಷವಂತೆ. 4 ಲಕ್ಷದ ಸೀರೆಯಲ್ಲಿ ಶೋಭಿತಾ ಕಂಗೊಳಿಸಿದ್ದಾರೆ. 4 ಲಕ್ಷ ಸೀರೆ ಬದಲು 40 ಗ್ರಾಂ ಬಂಗಾರ ತಗೊಳ್ಳಬಹುದಿತ್ತು ಅನ್ನೋ ಅಭಿಪ್ರಾಯ ಕೇಳಿ ಬರ್ತಿದೆ.
ಶೋಭಿತಾ ಸೆಲೆಬ್ರಿಟಿ. ಹೀಗಾಗಿ ಅವರ ಲೈಫ್ ಸ್ಟೈಲ್ ಕೂಡ ದುಬಾರಿಯಾಗಿಯೇ ಇರುತ್ತದೆ ಅಲ್ವೇ?