ಕೆಜಿಎಫ್ ಸರಣಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ಜೋಡಿಯಾಗಿ ಮಿಂಚಿದ್ದವರು ಶ್ರೀನಿಧಿ ಶೆಟ್ಟಿ. ಆ ಬಳಿಕ ಅವರು ಕನ್ನಡದ ಜೊತೆಗೆ ತೆಲುಗು, ತಮಿಳು ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ರಾಕಿಭಾಯ್ ಮನದರಸಿ ರೀನಾ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಅಮೋಘವಾಗಿ ನಟಿಸಿದ್ದರು. ಇವರಿಬ್ಬರ ಕಾಂಬೋ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಈ ಜೋಡಿಯನ್ನು ಮತ್ತೊಮ್ಮೆ ನೋಡಲು ಕಾಯುತ್ತಿದ್ದವರಿಗೆ ಶ್ರೀನಿಧಿ ಶೆಟ್ಟಿ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಹಿಟ್ 3 ಸಿನಿಮಾ ಪ್ರಚಾರದ ವೇಳೆ ಶ್ರೀನಿಧಿ ತಮಗೆ ರಾಮಾಯಣ ಸಿನಿಮಾದಿಂದ ಆಫರ್ ಬಂದಿರುವುದಾಗಿ ಹೇಳಿದ್ದಾರೆ. ರಾಮಾಯಣ ಚಿತ್ರಕ್ಕೆ ಸ್ಕ್ರೀನ್ ಟೆಸ್ಟ್ ನೀಡಿ ಬಂದಿದ್ದರಂತೆ. ಈ ಬಗ್ಗೆ ಮಾತನಾಡಿರುವ ಅವರು, “ಹೌದು, ನಾನು ಸ್ಕ್ರೀನ್ ಟೆಸ್ಟ್ ನೀಡಿದ್ದೇನೆ. ಮೂರು ದೃಶ್ಯಗಳನ್ನು ಮಾಡಿ ತೋರಿಸಿದ್ದೆ. ಆ ವೇಳೆ, ಯಶ್ ಕೂಡ ಈ ಸಿನಿಮಾದ ಭಾಗವಾಗ್ತಾರೆ ಎಂದು ಕೇಳಿಪಟ್ಟಿದ್ದೆ, ಅದೇ ಸಮಯದಲ್ಲೇ ‘ಕೆಜಿಎಫ್ 2’ ರಿಲೀಸ್ ಆಗಿತ್ತು. ನನ್ನ ಮತ್ತು ಯಶ್ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಎರಡೂ ತಿಂಗಳಲ್ಲಿ, ರಾಮಾಯಣ ಆಡಿಷನ್ ಆಗಿತ್ತು. ಆಗ ನಾನು ಯಶ್ ಅವರು ರಾವಣನ ಪಾತ್ರ ನಿರ್ವಹಿಸುತ್ತಾರೆ ಎಂದು ಅಂದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.
ಆಗ ನಾನು ಯೋಚಿಸಿದ್ದು ಇಷ್ಟೇ ಯಶ್ ರಾವಣನಾಗಿ, ನಾನು ಸೀತೆಯಾಗಿ ನಟಿಸಿದ್ರೆ ಅಭಿಮಾನಿಗಳು ಒಪ್ಪಿಕೊಳ್ತಾರೆ ಎಂದೆನಿಸಲಿಲ್ಲ. ಅಷ್ಟು ನಮ್ಮ ಜೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಹಾಗಾಗಿ ಈ ಸಿನಿಮಾವನ್ನು ಬಿಟ್ಟೆ ಎಂದು ಶ್ರೀನಿಧಿ ಶೆಟ್ಟಿ ಇಂಟ್ರೆಸ್ಟಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ನಿತಿಶ್ ತಿವಾರಿ ನಿರ್ದೇಶದನಲ್ಲಿ ಮೂಡಿ ಬರುತ್ತಿರುವ ರಾಮಾಯಣ ಸಿನಿಮಾದಲ್ಲಿ ರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ಅಭಿನಯಿಸುತ್ತಿದ್ದಾರೆ. ಯಶ್ ರಾವಣನಾಗಿ ಗಹಗಹಿಸಲಿದ್ದಾರೆ. ಎರಡು ಭಾಗದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಮುಂದಿನ ವರ್ಷದ ದೀಪಾವಳಿ ಮೊದಲ ಭಾಗ ತೆರೆಗೆ ಬರಲಿದೆ.