ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಸರಳತೆ ಬಗ್ಗೆ ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ಒಂದು ಸಿನಿಮಾಗೆ 100 ರಿಂದ 200 ಕೋಟಿ ಸಂಭಾವನೆ ಪಡೆಯುವ ದಳಪತಿ ತಮಿಳುಚಿತ್ರರಂಗದ ನಂಬರ್ 1 ಕುಬೇರ. ವಿಜಯ್ ಬಳಿ ಕೋಟಿ ಕೋಟಿ ಕಾರುಗಳಿವೆ. ಆದರೆ ಅವರು ಇಂದು ಸಿಂಪಲ್ ಆಗಿ ಸ್ವೀಪ್ಟ್ ಕಾರಿನಿಂದ ಬಂದು ಎಲ್ಲರ ಗಮನಸೆಳೆದಿದ್ದಾರೆ.
ಸಾಮಾನ್ಯ ಸೂಪರ್ ಸ್ಟಾರ್ಸ್ ಗಳು ತಮ್ಮ ಬಳಿ ಇರುವ ಐಷಾರಾಮಿ ಕಾರುಗಳಲ್ಲಿಯೇ ಸುತ್ತುವುದು ಜಾಸ್ತಿ. ಆದ್ರೆ ಈ ವಿಷಯದಲ್ಲಿ ವಿಜಯ್ ಬೇರೆ ರೀತಿ ಕಾಣಿಸಿಕೊಳ್ಳುತ್ತಾರೆ. ಇಂದು ಅಂಬೇಡ್ಕರ್ ಜಯಂತಿ. ಈ ಹಿನ್ನೆಲೆ, ಚೆನ್ನೈನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ವಿಜಯ್ ಆಗಮಿಸಿದ್ದರು. ಸಾಮಾನ್ಯ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ವಿಜಯ್ ಪುಷ್ಪಾರ್ಚನೆ ಮಾಡಿ ತೆರಳಿದ್ದಾರೆ. ಇನ್ನೊಂದು ವಿಶೇಷ ಎಂದರೆ ವಿಜಯ್ ಒಬ್ಬರೇ ಬಂದಿದ್ದು, ಅವರ ಸುತ್ತ ಬಾಡಿಗಾರ್ಡ್ ಆಗಿರಲಿ. ಅಭಿಮಾನಿಗಳು ಯಾರು ಇರಲಿಲ್ಲ.
ವಿಜಯ್ ಒಂದೇ ಕಾರಿನಲ್ಲಿ ಬಂದರು, ಮತ್ತು ಈ ಕಾರ್ಯಕ್ರಮದ ಸುತ್ತಲೂ ಯಾವುದೇ ರೀತಿಯ ಸಾರ್ವಜನಿಕ ಗಮನವಿರಲಿಲ್ಲ. ಇಂದಿನ ಕಾರ್ಯಕ್ರಮದಲ್ಲಿ ವಿಜಯ್ ಅವರನ್ನು ಸುತ್ತುವರೆದಿರುವ ಯಾವುದೇ ಅಭಿಮಾನಿಗಳು ಅಥವಾ ಅಭಿಮಾನಿಗಳು ಕಾಣುತ್ತಿಲ್ಲ. ಸಾಮಾನ್ಯವಾಗಿ, ದಳಪತಿ ವಿಜಯ್ ಅವರಂತಹ ಸೂಪರ್‌ಸ್ಟಾರ್‌ಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಸುತ್ತಲೂ ಜನಸಂದಣಿಯ ಇದ್ದೇ ಇರುತ್ತದೆ. ಆದರೆ ವಿಜಯ್ ಒಬ್ಬರೇ ಒಂದು ಸೈಲೆಂಟಾಗಿ ಹೋದಂತಿದೆ. ವಿಜಯ್ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ಅದಕ್ಕಾಗಿಯೇ ಟಿವಿಕೆ ಪಕ್ಷ ಸ್ಥಾಪಿಸಿದ್ದಾರೆ. ಜನನಾಯಗನ್ ಎಂಬ ಕೊನೆ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಬಳಕ ಫುಲ್ ಟೈಮ್ ಪಾಲಿಟಿಕ್ಸ್ ಗೆ ಇಳಿಯುತ್ತಿದ್ದಾರೆ ಮಾಸ್ಟರ್.