ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಿರ್ದೇಶಕ ನಾಗಣ್ಣ ಒನ್ಸ್ ಅಗೇನ್ ಒಂದಾಗಿದ್ದಾರೆ. ನಾಲ್ಕನೇ ಬಾರಿ ಈ ಜೋಡಿ ಮೋಡಿ ಮಾಡೋದಿಕ್ಕೆ ಸಜ್ಜಾಗಿದೆ. ಇದೇ ಅಕ್ಷಯ ತೃತೀಯಗೆ ನಾಗಣ್ಣ ಉಪ್ಪಿಯ ಹೊಸ ಸಿನಿಮಾದ ಶೀರ್ಷಿಕೆ ಘೋಷಣೆಯಾಗಲಿದೆ.
2023ರಲ್ಲಿ ಬಿಡುಗಡೆಯಾಗಿದ್ದ ಕುಟುಂಬ ಚಿತ್ರದ ಮೂಲಕ ನಾಗಣ್ಣ ಉಪೇಂದ್ರ ಕೈ ಜೋಡಿಸಿದ್ದರು. ಈ ಚಿತ್ರ ಹಿಟ್ ಬಳಿಕ ಗೋಕರ್ಣ, ಗೌರಮ್ಮ, ದುಬೈ ಸೀನು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದಾದ ಬಳಿಕ ಇವರಿಬ್ಬರು ಮತ್ತೆ ಒಂದಾಗಲಿದ್ದಾರೆ ಅನ್ನೋ ಸುದ್ದಿ ಸುದ್ದಿಯಾಗಿಯೇ ಉಳಿದಿತ್ತು. ಅದಕ್ಕೀಗ ಕಾಲ ಕೂಡಿಬಂದಿದ್ದು, ಈ ಕ್ರೇಜಿ ಕಾಂಬಿನೇಷನ್ ನ್ನು ಸೂರಪ್ಪ ಬಾಬು ಒಟ್ಟಿಗೆ ತೆರೆಗೆ ತರುತ್ತಿದ್ದಾರೆ.
ನಾಗಣ್ಣ ನಿರ್ದೇಶನದ ಕೋಟಿಗೊಬ್ಬ, ಬಂಧು ಬಳಗ ಚಿತ್ರಗಳಿಗೆ ಇದೇ ಸೂರಪ್ಪ ಬಾಬು ಹಣ ಹಾಕಿದ್ದರು.ಈಗ ಈ ಮೂವರು ಜುಗಲ್ಬಂಧಿಯಲ್ಲೊಂದು ಬೊಂಬಾಟ್ ಸಿನಿಮಾ ರೂಪಗೊಳಿಸ್ತಿದೆ. ಅಕ್ಷಯ ತೃತೀಯ ದಿವ್ಯದಂದೇ ಶೀರ್ಷಿಕೆಯನ್ನು ಪ್ರೇಕ್ಷಕರ ಮುಂದೆ ತರಲಿದೆ.
ಐತಿಹಾಸಿಕ ಅಥವಾ ಭಕ್ತಿ ಪ್ರಧಾನ ಚಿತ್ರ?
ಉಪೇಂದ್ರ ಅವರಿಗೆ ನಾಗಣ್ಣ ಕನಕದಾಸರ ಬಗೆಗಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಇದು ಭಕ್ತಿಪ್ರಧಾನ ಮತ್ತು ಐತಿಹಾಸಿಕ ಎರಡೂ ಜಾನರ್ ಇರಲಿದೆಯಂತೆ, ಉಪ್ಪಿ ಕನಕದಾಸರ ಪಾತ್ರ ಪೋಷಣೆ ಮಾಡಲಿದ್ದು, ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.