ಅದು ಮದುವೆ ಕಾರ್ಯಕ್ರಮ ಇರಬಹುದು ಅಥವಾ ಬೇರೆ ಯಾವುದೋ ಫಂಕ್ಷನ್ ಇರಬಹುದು, ಊಟದ ಕೊನೆಯಲ್ಲಿ ಮೊಸರು ಇದ್ದೇ ಇರುತ್ತದೆ!ಇಲ್ಲಾಂದ್ರೆ ಮಧ್ಯಾಹ್ನದ ಊಟಕ್ಕೆ ಹೋಟೆಲ್ಗೆ ಹೋಗಿ ಸೌತ್ ಇಂಡಿಯಾ ಮೀಲ್ಸ್ ಥಾಲಿ ಆರ್ಡರ್ ಮಾಡಿದರೆ, ಊಟದ ತಟ್ಟೆಯ ಪಕ್ಕ ಒಂದು ಸಣ್ಣ ಕಪ್ ಮೊಸರು ಇದ್ದೇ ಇರುವುದು! ಇದಕ್ಕೆ ಕಾರಣ ಇಷ್ಟೇ ಹೊಟ್ಟೆ ತುಂಬಾ ಊಟ ಮಾಡಿದ ನಂತರ, ಒಂದು ಸಣ್ಣ ಕಪ್ ಮೊಸರು ಸೇವನೆ ಮಾಡುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆಯು ಸರಾಗವಾಗಿ ನಡೆಯುವುರ ಜೊತೆಗೆ ಹಲವಾರು ರೀತಿಯಲ್ಲಿ ಪ್ರಯೋಜನಗಳು ಸಿಗುತ್ತವೆ, ಆದರೆ ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ನಿಂತಿಲ್ಲ.
ಬೇಸಿಗೆಯಲ್ಲಿ ಮೊಸರು ತಿನ್ನುವುದರಿಂದ ದೇಹ ಹೈಡ್ರೇಟೆಡ್ ಆಗಿರುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಮೊಸರನ್ನು ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಬಿ12 ನಂತಹ ಅನೇಕ ಪೋಷಕಾಂಶಗಳಿವೆ.
ಈ ವಿಚಾರ ನಿಮಗೆ ಗೊತ್ತಿರಲಿ. ಮೊಸರು ತಿಂದ ಬೆನ್ನಲ್ಲೇ ನೀರು ಕುಡಿಯಬಾರದು. ಮೊಸರು ತಿಂದ ತಕ್ಷಣ ನೀರು ಕುಡಿಯುವುದು ಹಾನಿಕಾರಕ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಇದು ಹೊಟ್ಟೆಯ ಆಮ್ಲವನ್ನು ದುರ್ಬಲಗೊಳಿಸುತ್ತದೆ. ಮೊಸರು ತಿಂದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆ ನೋವು ಮತ್ತು ಹೊಟ್ಟೆ ಉಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ
ಜೊತೆಗೆ ಪ್ರೋಬಯಾಟಿಕ್ ಗುಣಗಳು ಕಡಿಮೆಯಾಗುತ್ತವೆ. ಇದರಿಂದ ಮೊಸರಿನಿಂದ ಸಿಗುವ ಲಾಭ ಕಡಿಮೆ ಆಗುತ್ತದೆ. ಅದಕ್ಕಾಗಿ ಊಟ ಮಾಡುವಾಗ ಮೊಸರು ತಿನ್ನಿ, ತಕ್ಷಣ ನೀರು ಕುಡಿಯಬೇಡಿ. ಅಷ್ಟೇ ಅಲ್ಲದೇ, ಮೊಸರು ತಿಂದ ತಕ್ಷಣ ಹಣ್ಣುಗಳು, ಮೀನು, ಮೊಟ್ಟೆ, ಕರಿದ ಆಹಾರಗಳು, ಉಪ್ಪಿನಕಾಯಿ, ಚಹಾ, ಕಾಫಿ ಮತ್ತು ಈರುಳ್ಳಿ ತಿನ್ನಬೇಡಿ ಅಂತಲೂ ಹೇಳುತ್ತಾರೆ. ಮೊಸರು ತಿಂದ ನಂತರ ಕನಿಷ್ಠ ಅರ್ಧ ಗಂಟೆ ನೀರು ಕುಡಿಯಬಾರದು ಅನ್ನೋದು ತಜ್ಞರು ಅಭಿಪ್ರಾಯ. ಇನ್ನು, ಸಂಜೆ, ರಾತ್ರಿ ಮೊಸರು ತಿನ್ನಬಾರದು. ಇದನ್ನು ತಿನ್ನುವುದರಿಂದ ಶೀತ ಮತ್ತು ಕೆಮ್ಮು ಬರುವ ಸಾಧ್ಯತೆ ಇರುತ್ತದೆ.
ಮೊಸರಿನಲ್ಲಿ ವಿಟಮಿನ್ ಸಿ ಇರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಪ್ರತಿದಿನ ಒಂದು ಕಪ್ ಮೊಸರು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರು ತಿನ್ನುವುದರಿಂದ ಋತುಮಾನದ ಕಾಯಿಲೆಗಳನ್ನು ತಡೆಯಬಹುದು. ರೋಗನಿರೋಧಕ ಶಕ್ತಿಗಾಗಿ ಪ್ರತಿದಿನ ಕ್ಯಾಲ್ಸಿಯಂ ಭರಿತ ಮೊಸರು ತಿನ್ನುವ ಮೂಲಕ ನಿಮ್ಮ ಮೂಳೆಗಳನ್ನು ಬಲಪಡಿಸಬಹುದು. ಮೂಳೆಗಳು ದುರ್ಬಲಗೊಳ್ಳುವುದನ್ನು ತಡೆಯಲು ಮೊಸರು ಸಹಾಯ ಮಾಡುತ್ತದೆ. ಮೂಳೆಗಳು ಬಲಿಷ್ಠವಾಗಿವೆ