ಬೆಂಗಳೂರು: ಬಂಗಾರ-ಬೆಳ್ಳಿ ಭಾರತದಲ್ಲಿ ಮೊದಲಿನಿಂದಲೂ ಸಾಕಷ್ಟು ಖರೀದಿಸಲ್ಪಡುವ ಲೋಹಗಳಾಗಿವೆ. ಸಾಮಾನ್ಯವಾಗಿ ಆಭರಣಗಳ ರೂಪದಲ್ಲಿ ಬಂಗಾರ-ಬೆಳ್ಳಿಗಳನ್ನು ಖರೀದಿ ಮಾಡಲಾಗುತ್ತದೆ. ಚಿನ್ನ ಎಂಬುದು ಪ್ರಾಚೀನ ಕಾಲದಿಂದಲೂ ಮಹತ್ವ ಪಡೆದ ಅಪರೂಪದ ಲೋಹವಾಗಿದ್ದು ಸಾಕಷ್ಟು ಮೌಲ್ಯವನ್ನು ಹೊಂದಿದೆ.
ನಿಮ್ಮ ಲ್ಯಾಪ್ ಟಾಪ್ ನಲ್ಲಿ ಬೇಗ ಚಾರ್ಜ್ ಕಡಿಮೆ ಆಗುತ್ತಾ!? ಹಾಗಿದ್ರೆ ಈ ರೀತಿ ಮಾಡಿ!
ಜಗತ್ತಿನಾದ್ಯಂತ ಚಿನ್ನಕ್ಕೆ ಅಪಾರವಾದ ಬೇಡಿಕೆಯಿದೆ ಹಾಗೂ ಚಿನ್ನ ವರ್ಷದಿಂದ ವರ್ಷಕ್ಕೆ ತನ್ನ ಮೌಲ್ಯ ವೃದ್ಧಿಸಿಕೊಂಡೇ ಸಾಗುತ್ತಿದೆ. ಈ ಕಾರಣದಿಂದಾಗಿಯೂ ಚಿನ್ನವನ್ನು ಹೂಡಿಕೆಯ ಪ್ರಮುಖ ವಸ್ತುವನ್ನಾಗಿ ಗುರುತಿಸಲಾಗಿದೆ.
ಇಂದು ಆಭರಣ ಚಿನ್ನದ ಬೆಲೆ ಗ್ರಾಮ್ಗೆ 25 ರೂಗಳಷ್ಟು ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯೂ ಇವತ್ತು ಯಥಾಸ್ಥಿತಿ ಕಾಯ್ದುಕೊಂಡಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,700 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 9ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,690 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,270 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,690 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,550 ರೂ
- ಚೆನ್ನೈ: 89,550 ರೂ
- ಮುಂಬೈ: 89,550 ರೂ
- ದೆಹಲಿ: 89,700 ರೂ
- ಕೋಲ್ಕತಾ: 89,550 ರೂ
- ಕೇರಳ: 89,550 ರೂ
- ಅಹ್ಮದಾಬಾದ್: 89,600 ರೂ
- ಜೈಪುರ್: 89,700 ರೂ
- ಲಕ್ನೋ: 89,700 ರೂ
- ಭುವನೇಶ್ವರ್: 89,550 ರೂ