Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ರಣಮಳೆ ಅಬ್ಬರ: ರಾಜ್ಯಾದ್ಯಂತ ಒಂದೇ ದಿನ ಮಳೆಗೆ 12 ಬಲಿ, 4ದಿನ ಯಲ್ಲೋ ಅಲರ್ಟ್

    By Author AINMay 14, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರಣಮಳೆ ಅಬ್ಬರಿಸಿ ಬೊಬ್ಬರಿದಿದೆ.

    ಬಿರುಗಾಳಿ ಸಹಿತ ಮಳೆ, ಸಿಡಿಲು ಬಡಿದು, ಮರ ಉರುಳಿರುವುದು ಸೇರಿದಂತೆ ವರುಣನ ಅಬ್ಬರಕ್ಕೆ ರಾಜ್ಯದಲ್ಲಿ ಒಂದೇ ದಿನ 12 ಜನರು ಬಲಿಯಾಗಿದ್ದಾರೆ.

    ಸಿಡಿಲಾಘಾತಕ್ಕೆ 7 ಬಲಿ

    ರಾಜ್ಯದಲ್ಲಿ ಮಂಗಳವಾರ ಸಿಡಿಲಾಘಾತಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಇಬ್ಬರು, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

    ಬಳ್ಳಾರಿ ಜಿಲ್ಲೆಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ   ಬೀರಪ್ಪ (45) ಹಾಗೂ ಅವರ ಅಣ್ಣನ ಮಗ ಸುನೀಲ್‌ (26) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಬಸನಗೌಡ (40) ಹಾಗೂ ಕನಕಗಿರಿ ತಾಲೂಕಿನ ಹುಲಿಹೈದರ್‌ ಗ್ರಾಮದ ಯಂಕಪ್ಪ ಜಾಡಿ (45) ಸಿಡಿಲಿಗೆ ಬಲಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ (47) ಸಾವನ್ನಪ್ಪಿದ್ದಾರೆ.

    ಆಪರೇಷನ್‌ ಸಿಂಧೂರ ವಿಜಯೋತ್ಸವದಲ್ಲಿ ಪಾಕ್‌ ಪರ ಘೋಷಣೆ: ಟೆಕ್ಕಿ ಅರೆಸ್ಟ್!

    ಹಾವೇರಿಯಲ್ಲೂ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಹೊಲದ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿದು ಯುವ ರೈತ ಸುನೀಲ ಸುರೇಶಪ್ಪ ಕಾಳೇರ(19) ಮೃತಪಟ್ಟ ಘಟನೆ ರಟ್ಟೀಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ನಡೆದಿದೆ.

    ‌4ದಿನ ಯಲ್ಲೋ ಅಲರ್ಟ್

    ಬೆಂಗಳೂರು, ಮೈಸೂರು, ಕೊಪ್ಪಳ, ಶಿವಮೊಗ್ಗ, ಧಾರವಾಡ, ವಿಜಯಪುರ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಮುಂದಿನ 4 ದಿನ  ಕೆಲ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

    Post Views: 6

    Demo
    Share. Facebook Twitter LinkedIn Email WhatsApp

    Related Posts

    ಹುಧಾ ಮಹಾನಗರ ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷೆಯಾಗಿ ಜುಬೇದಾ ನಧಾಪ್ ನೇಮಕ

    May 15, 2025

    ಮಗಳು-ಅಳಿಯ ಕಳ್ಳ-ಕಳ್ಳಿ ಎಂದ ಅಪ್ಪ..ತಂದೆ ಆರೋಪಕ್ಕೆ ಕ್ವಾಟರ್‌ ಕಥೆ ಹೇಳಿದ ಚೈತ್ರಾ ಕುಂದಾಪುರ

    May 15, 2025

    Operation sindoor: ಕಾಂಗ್ರೆಸ್‌ ಬಳಿಕ ಸೇನೆ ಬೆಂಬಲಿಸಿ ಬಿಜೆಪಿ ತಿರಂಗಾ ಯಾತ್ರೆ

    May 15, 2025

    ಗೋಡೆ ಕೊರೆದು,ಬೆತ್ತಲೆಯಾಗಿ ಕಳ್ಳತನ ಮಾಡಿದ ಖತರ್ನಾಕ್ ಕಳ್ಳ..! CCTVಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

    May 15, 2025

    ಮೇ.20ಕ್ಕೆ ಗ್ಯಾರಂಟಿ ಸರ್ಕಾರಕ್ಕೆ 2ವರ್ಷ: ಹೊಸಪೇಟೆಯಲ್ಲಿ ನಡೆಯೋದು ಸಾಧನಾ ಸಮಾವೇಶ ಅಲ್ಲವಂತೆ..!

    May 15, 2025

    ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳು ಅರೆಸ್ಟ್.!

    May 15, 2025

    ಗ್ರೇಟರ್‌ ಬೆಂಗಳೂರು: ಡಿಸಿಎಂ ಡಿಕೆಶಿ ಕನಸಿನ ಕೂಸು, ಪರಂ ಹೇಳಿದ್ದೇನು ?

    May 15, 2025

    ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ: ತಾಯಿಯ ಕಿಡ್ನಿಯಿಂದ ಉಳಿಯಿತು ಮಗಳ ಜೀವ!

    May 15, 2025

    ಚೈತ್ರಾ ಕುಂದಾಪುರ ಕಳ್ಳಿ, ಅವಳ ಗಂಡ ಕೂಡ ಕಳ್ಳ..ತಂದೆಯ ಸ್ಫೋಟಕ video ವೈರಲ್!

    May 15, 2025

    Greater Bengaluru: BBMP ಇನ್ಮುಂದೆ GBA: ಇಂದಿನಿಂದ “ಗ್ರೇಟರ್ ಬೆಂಗಳೂರು” ಜಾರಿ

    May 15, 2025

    SDA ಅಧಿಕಾರಿ ಮನೆ ಮೇಲೆ ಲೋಕಾ ದಾಳಿ: ಲಕ್ಷ, ಲಕ್ಷ ಕ್ಯಾಶ್‌ – ಕೆಜಿಗಟ್ಟಲೇ ಚಿನ್ನ, ಬೆಳ್ಳಿ ಪತ್ತೆ..!

    May 15, 2025

    International Family Day: “ಅಂತಾರಾಷ್ಟ್ರೀಯ ಕುಟುಂಬ”ಗಳ ದಿನದ ಇತಿಹಾಸ, ಮಹತ್ವ‌ ಬಗ್ಗೆ ನಿಮಗೆಷ್ಟು ಗೊತ್ತು..?

    May 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.