ಚಾಮರಾಜನಗರ : ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ಮಲೆಯಾಳಿ ಸಿನಿಮಾ ಶೂಟಿಂಗ್ ನಡೆಸಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘಟನೆ ಇಂದು ಮಾಡ್ರಳ್ಳಿ ಮಹದೇವಪ್ಪ ನೇತೃತ್ವದಲ್ಲಿಂದು ಪ್ರತಿಭಟನೆಯನ್ನು ನಡಸಲಾಯಿತು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು. ಬಂಡೀಪುರ ಹುಲಿಯೋಜನೆಯ ಒಳಗಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ತೆರಳಲು ಅರಣ್ಯ ಇಲಾಖೆ ಅನೇಕ ನೀತಿ ನಿಯಮಗಳನ್ನು ರೂಪಿಸಿದೆ. ವನ್ಯಜೀವಿಗಳ ಸಂರಕ್ಚಣೆಗಾಗಿ ಕಟ್ಟುನಿಟ್ಟಿನ ಕಾಯಿದೆಯನ್ನು ಜಾರಿಗೆ ತಂದಿದೆ ಹಾಗಾಗಿ ಸ್ಥಳೀಯರೂ ಸೇರಿದಂತೆ ಖಾಸಗೀ ವಾಹನಗಳಿಗೆ ಅವಕಾಶವಿಲ್ಲ. ಅಂತಹದರಲ್ಲಿ ಆದರೆ ಮಲೆಯಾಳಿ ಸಿನಿಮಾದ ಶೂಟಿಂಗ್ ಗಾಗಿ ಅರಣ್ಯ ಇಲಾಖೆ ಅರಣ್ಯ ಕಾಯಿದೆಯನ್ನು ಉಲ್ಲಂಘನೆ ಮಾಡಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತು ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. https://ainkannada.com/violation-of-rules-in-bandipur-tiger-reserve-did-the-forest-minister-give-permission/ ಖಾಸಗಿ ವ್ಯಕ್ತಿಗಳಿಗೆ ಶೂಟಿಂಗ್ ನಡೆಸಲು ಅನುಮತಿಯನ್ನು ಸರ್ಕಾರವೇ ನೀಡಿದೆ ಎಂದು ಆದೇಶದ ಪ್ರತಿ ಸೃಷ್ಟಿಸಿದ್ದಾರೆ. ಅರಣ್ಯ ಇಲಾಖೆಗೆ ಶೂಟಿಂಗ್ ನಡೆಸಿರುವವರು 1 ಲಕ್ಚ…
Author: AIN Author
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ, ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿ, ಮಳೆಗೆ ಹೊಲದಲ್ಲಿದ್ದ ವಿದ್ಯುತ್ ವೈರ್ ಕಟ್ ಆಗಿ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸಿದ್ದಪ್ಪ ಜುಲಪಿ ಎಂಬುವರ ಹೊಲದಲ್ಲಿ ವಿದ್ಯುತ್ ತಂತಿ ಮುರಿದುಬಿದ್ದಿದೆ. ಕಟ್ ಆಗಿ ಬಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಆತಂಕ ಮೂಡಿಸಿದೆ. https://ainkannada.com/a-storm-caused-a-power-line-to-fall-two-people-were-injured-electronic-equipment-caught-fire/ ವೈರ್ ಕಟ್ ಆಗಿ ಬಿದ್ದರೂ ಸಹ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಈ ಕುರಿತಂತೆ ಹೆಸ್ಕಾಂ ಸಿಬ್ಬಂದಿಗಳಿಗೆ ಫೋನ್ ಮಾಡಿ ಹೇಳಿದರೂ ಯಾರು ಕೇರ್ ಮಾಡುತ್ತಿಲ್ಲ. ವಿದ್ಯುತ್ ತಂತಿ ಕಟ್ ಆಗಿರೋ ಜಮೀನಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಭಯದಲ್ಲೇ ಕೆಲಸ ಮಾಡುವಂತಾಗಿದೆ.
ಬೆಂಗಳೂರು:- ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ 18 ಬಿಜೆಪಿ ಶಾಸಕರನ್ನು 6 ತಿಂಗಳು ಅಮಾನತು ಮಾಡಲಾಗಿತ್ತು. https://ainkannada.com/you-should-leave-the-country-us-warning-to-foreign-terrorists/ ಇದೀಗ ವಿಧಾನ ಸಭೆಯಿಂದ ಅಮಾನತ್ತುಗೊಂಡ ಶಾಸಕರು ಇಂದು ಪ್ರತ್ಯೇಕ ಸಭೆ ನಡೆಸಿದ್ದಾರೆ. ವಿಧಾನಸಭೆ ಕಾರ್ಯ ಕಲಾಪಕ್ಕೆ ಅಡ್ಡಿ, ಅಶಿಸ್ತು ಹಿನ್ನಲೆ ಅಮಾನತ್ತಾಗಿದ್ದ ಬಿಜೆಪಿಯ 18 ಶಾಸಕರು ಖಾಸಗಿ ಹೋಟೆಲ್ ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ ವಿಪಕ್ಷ ಬಿಜೆಪಿಯ ಮುಖ್ಯ ಸಚೇತನ ದೊಡ್ಡನಗೌಡ ಪಾಟೀಲ್ ಕರೆದ ಸಭೆಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ್ ನೇತೃತ್ವ ವಹಿಸಿದ್ದರು. ಅಮಾನತ್ತು ಆದೇಶ ಮರು ಪರಿಶೀಲಿಸುವಂತೆ ಸ್ಪೀಕರ್ ಗೆ ಮನವಿ ಮಾಡುವುದು ಸೇರಿದಂತೆ.. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ರಮಗಳು, ಜನರ ಅಹವಾಲು ಆಲಿಸಲು, ಅಧಿಕಾರಿಗಳ ಸಭೆ ನಡೆಸುವುದರ ಬಗ್ಗೆ ಸ್ಪೀಕರ್ ಗೆ ಮನವಿ ಸಲ್ಲಿಸುವುದರ ಬಗ್ಗೆ ಚರ್ಚೆ ನಡೆದಿದೆ. ಅಮಾನತುಗೊಂಡ 18 ಶಾಸಕರು:- ದೊಡ್ಡನಗೌಡ ಹೆಚ್.ಪಾಟೀಲ್, ಡಾ.ಅಶ್ವಥ್ ನಾರಾಯಣ್ ಸಿ.ಎನ್. ಎಸ್.ಅರ್.ವಿಶ್ವನಾಥ್, ಬಿ.ಎ.ಬಸವರಾಜ, ಎಂ.ಅರ್.ಪಾಟೀಲ್, ಚನ್ನಬಸಪ್ಪ, ಬಿ.ಸುರೇಶ್ ಗೌಡ, ಉಮಾನಾಥ್ ಕೋಟ್ಯಾನ್,…
ವಾಷಿಂಗ್ಟನ್:- ಟ್ರಂಪ್ ಆಡಳಿತವು ಏಲಿಯನ್ ಎನಿಮೀಸ್ ಆಕ್ಟ್ ಬಳಸಿ ಗಡಿಪಾರು ಮಾಡುವುದನ್ನು ತಾತ್ಕಾಲಿಕವಾಗಿ ತಡೆಯುವ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಯುಎಸ್ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಶ್ವೇತ ಭವನ ವಿದೇಶಿ ಉಗ್ರರಿಗೆ ವಾರ್ನಿಂಗ್ ನೀಡಿದೆ. https://ainkannada.com/door-to-door-robbery-jewellery-cash-stolen/ ನೀವೇ ದೇಶವನ್ನು ತೊರೆಯಿರಿ ಅಥವಾ ಜೈಲು ಶಿಕ್ಷೆಯನ್ನು ಅನುಭವಿಸಿ ಎಂದು ಅಮೆರಿಕ ವಿದೇಶಿ ಉಗ್ರರಿಗೆ ಎಚ್ಚರಿಕೆ ನೀಡಿದೆ. ಅಮೆರಿಕದಲ್ಲಿ ನೆಲೆಸಿರುವ ಉಗ್ರರು ಅವರಾಗಿಯೇ ದೇಶ ತೊರೆಯಬೇಕು. ಇಲ್ಲದಿದ್ದರೆ ಬಂಧಿಸಿ ಅವರ ದೇಶಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಎಚ್ಚರಿಕೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತಕ್ಕೆ ಭಾರಿ ಕಾನೂನು ಜಯವನ್ನು ನೀಡಿದೆ. ಏಲಿಯನ್ ಎನಿಮೀಸ್ ಆಕ್ಟ್ ಅಡಿಯಲ್ಲಿ ವಿದೇಶಿ ಭಯೋತ್ಪಾದಕರನ್ನು ದೇಶದಿಂದ ಹೊರ ಹಾಕಲು ನಮಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಕ್ಷಸ, ಎಡಪಂಥೀಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದರು.
ಕಲಬುರಗಿ : ಗ್ಯಾಸ್ ಕಟರ್ ಬಳಸಿ ಎಟಿಎಮ್ ಮುರಿದು ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ರಾಮನಗರದದಲ್ಲಿನ ಚೌಕ್ ಬಳಿಯ ಎಸ್ ಬಿಐ ಶಾಖೆಗೆ ಸೇರಿದ ಎಟಿಎಂಗೆ ಖದೀಮರು ಕನ್ನ ಹಾಕಿದ್ದಾರೆ. ಸಿಸಿಟಿವಿಗೆ ಬ್ಲಾಕ್ ಸ್ಪ್ರೇ ಮಾಡಿ, ಗ್ಯಾಸ್ ಕಟರ್ ಬಳಸಿ ಎಟಿಎಂ ಮುರಿದು ಲೂಟಿ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮಂಗಳವಾರ ಸಂಜೆ ಆರು ಗಂಟೆಗೆ ಎಟಿಎಂಗೆ ಹಣ ಹಾಕಿದ್ದರು. ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಇಲ್ಲದನ್ನ ಗಮನಿಸಿ ಕಳ್ಳರು , ಇಂದು ನಸುಕಿನ ಜಾವ ನಾಲ್ಕು ಗಂಟೆಗೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಎಟಿಎಂ ನಲ್ಲಿದ್ದ 18 ಲಕ್ಷ ರೂಪಾಯಿ ದೋಚಿದ್ದಾರೆ. https://ainkannada.com/door-to-door-robbery-jewellery-cash-stolen/ ಇನ್ನೂ ಘಟನೆಯ ಸಂಬಂಧ ಸಬ್ ಅರ್ಬನ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚಾಮರಾಜನಗರ: ಚಾಮರಾಜನಗರದ ಪ್ರಗತಿ ನಗರದ ಇಮ್ಯಾನುವೆಲ್ ಸ್ಕೂಲ್ ಬಳಿ ಇರುವ ಮನೆಯೊಂದರಲ್ಲಿ ಭಾನುವಾರ ರಾತ್ರಿ ಕಳ್ಳತನವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಮಸಮುದ್ರ ಗ್ರಾಮದ ಭಟ್ಟಮ್ಮ ಪ್ರಭುಸ್ಚಾಮಿರವರ ಪುತ್ರ ನಂಜುಂಡಸ್ವಾಮಿ ಉರುಫ್ ನಂದಿ ಅವರ ಮನೆಯಲ್ಲಿ ಕಳ್ಖತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮನೆಯ ಬಾಗಿಲನ್ನು ಮೀಟಿ 30 ಗ್ರಾಂ ಚಿನ್ನ, 750 ಗ್ರಾಂ. ಬೆಳ್ಳಿ ಹಾಗೂ 1.20 ಲಕ್ಷ ನಗದು ಕಳ್ಳತನ ಮಾಡಿದ್ದಾರೆ ಎಂದು ಮನೆಯ ಮಾಲೀಕ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. https://ainkannada.com/hit-and-run-case-in-chikkamagaluru-accident-caught-on-camera/ ನಂದಿಯವರ ತಂದೆ ಪ್ರಭುಸ್ವಾಮಿ ಹಾಗೂ ತಾಯಿ ಭಟ್ಟಮ್ಮರವರು ದೊಡ್ಡ ಮಗ ಮಂಜುನಾಥ್ ಕಾಚಕ್ಕಿರವರ ಮೈಸೂರು ಮನೆಗೆ ತೆರಳಿದ್ರು. ಕಿರಿಯ ಮಗ ನಂದಿ ಕೂಡ ಪತ್ನಿ ಸಮೇತ ಸಂಬಂಧಿಕರ ಊರಿಗೆ ತೆರಳಿದ್ರು. ಮನೆಯಲ್ಲಿ ಯಾರು ಇಲ್ಲದ ಸಮಯ ಗಮನಿಸಿದ ಖದೀಮರು ಮನೆಯ ಬಾಗಿಲು ಮೀಟಿ ಒಳನುಗ್ಗಿ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. …
ದೀರ್ಘಕಾಲದವರೆಗೆ ನಿಮ್ಮ ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಬಂಜೆತನದ ಸಮಸ್ಯೆ ಉಲ್ಬಣಗೊಳಿಸಬಹುದು. ಹೌದು ಇದರ ಬಗ್ಗೆ ನೀವು ಎಚ್ಚರ ವಹಿಸಲೇಬೇಕು. ಇಲ್ಲಿದೆ ಆ ಕುರಿತು ಹೆಚ್ಚಿನ ಮಾಹಿತಿ. ಅವುಗಳನ್ನು ತಿಳಿದುಕೊಳ್ಳಿ. https://ainkannada.com/business-on-the-corpse-only-those-who-bring-wood-can-burn-the-corpse-brokers-are-invading-the-cemetery/ ಲ್ಯಾಪ್ ಟಾಪ್ ನಿರುಪದ್ರವಿಯಾದರೂ ಅದು ವೈಯರ್ ಲೆಸ್ ಇಂಟರ್ನೆಟ್ ಸಿಗ್ನಲ್ ಮತ್ತು ರೇಡಿಯೇಟ್ ಇಎಂಎಫ್ ಗಳನ್ನು ಸ್ವೀಕರಿಸುತ್ತದೆ. ಇದನ್ನು ಬಳಕೆ ಮಾಡುವುದರಿಂದ ಪುರುಷರ ವೀರ್ಯದ ಗಣತಿ ಮೇಲೆ ಮತ್ತು ಮಹಿಳೆಯರಲ್ಲಿ ಅಂಡೋತ್ಪತ್ತಿ ಉತ್ಪಾದನೆ ಮೇಲೆ ಪರಿಣಾಮವಾಗಲಿದೆ. ವಿಕಿರಣದಿಂದ ವೀರ್ಯದ ಅಂಗಾಂಶಗಳಲ್ಲಿನ ಡಿಎನ್ ಎಗೆ ಲ್ಯಾಪ್ ಟಾಪ್ ನಿಂದಾಗಿ ಹಾನಿ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಇದು ಪುರುಷರಲ್ಲಿ ಫಲವತ್ತತೆ ಮೇಲೆ ಪರಿಣಾಮ ಬೀರುವುದು ಎಂದು ಇನ್ನೊಂದು ಅಧ್ಯಯನವು ಹೇಳಿದೆ. ವೈಯರ್ ಲೆಸ್ ಇಂಟರ್ ನೆಟ್ ನ್ನು ಬಳಕೆ ಮಾಡುವ ಪರಿಣಾಮಕಾಗಿ ಅದು ನೇರವಾಗಿ ಪುರುಷರ ಸಂತಾನೋತ್ಪತ್ತಿ ಅಂಗಾಂಗದ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗಿದೆ. ಅದರಲ್ಲೂ ಇಂದಿನ ದಿನಗಳಲ್ಲಿ ಲ್ಯಾಪ್ ಟಾಪ್ ನ್ನು ವೈಯರ್…
ಬೆಂಗಳೂರು:-ಇದ್ದಾಗಂತೂ ನೆಮ್ಮದಿ ಇಲ್ಲ, ಸತ್ತಮೇಲಾದರೂ ನೆಮ್ಮಲಿ ಸಿಗಲಿ ಅಂತ ಜನ ಮಾತಿಗೆ ಹೇಳ್ತಾರೆ. ಆದ್ರೆ ಇಲ್ಲಿ ಜನಗಳ ಪರಿಸ್ಥಿತಿ ಹೇಗಾಗಿದೆ ಅಂದರೆ ಸತ್ತ ಮೇಲೂ ನೆಮ್ಮದಿ ಇಲ್ಲ ಎನ್ನವಂತಾಗಿದೆ. https://ainkannada.com/minister-santosh-lad-performs-gudali-puja-for-development-work/ ಎಸ್, ಇತ್ತೀಚಿನ ದಿನಗಳಲ್ಲಿ ಬ್ರೋಕರ್ ಗಳ ಹಾವಳಿ ಮಿತಿಮೀರಿ ಹೋಗಿದೆ. ಎಲ್ಲೆಲ್ಲೂ ನಾವೇ ಇದ್ದೀವಿ ಎನ್ನುವಂತೆ ಎಲ್ಲಾ ಕಡೆ ಸುತ್ತು ವರೆದಿದ್ದಾರೆ. ಅದರಂತೆ ಸ್ಮಶಾನದಲ್ಲಿಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಸ್ಮಶಾನದಲ್ಲಿ ಹೆಣ ಸುಡಬೇಕು ಅಂದರೆ ಸೌದೆಗೆ ಆರು ಸಾವಿರ ರೂ. ಕೊಡಬೇಕು. ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರದಲ್ಲಿ ಈಗಲೂ ಸೌದೆ ಬಳಸಿ ಹೆಣಗಳನ್ನು ಸುಡಲಾಗುತ್ತದೆ. ಈ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ತಿರ್ಮಾನಿಸಲಾಗಿದೆ. ಸದ್ಯ ಸೌದೆಗಳ ಮೂಲಕವೇ ಹೆಣ ಸುಡಲಾಗುತ್ತಿದೆ. ಈ ಸ್ಮಶಾನದಲ್ಲಿ ಹೆಣ ಸುಡಬೇಕಾದರೆ ಸೌದೆಗಾಗಿ 6 ಸಾವಿರ ರೂ. ಕೊಡಬೇಕು. ಸೌದೆ ತೆಗೆದುಕೊಂಡರೆ ಮಾತ್ರ ಮೃತದೇಹ ಸುಡಲು ಸ್ಲಾಟ್ ಕೊಡುತ್ತಾರೆ. ಸೌದೆ ಬ್ರೋಕರ್‌ಗಳ ಕಾರುಬಾರು ವಿಪರೀತ ಹೆಚ್ಚಾಗಿದ್ದು ಇರುವ ಸ್ಲಾಟ್‌ಗಳನ್ನು ಮೂವರು ಸೌದೆ…
ಚಿಕ್ಕಮಗಳೂರು: ಲೈನ್‌ಮ್ಯಾನ್ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಬಾಳೆಹೊನ್ನೂರು – ಚಿಕ್ಕಮಗಳೂರು ಮಾರ್ಗದ ಜೇನುಬೈಲು ಬಳಿ ಹಿಟ್ ಅಂಡ್ ರನ್ ಕೇಸ್ ನಡೆದಿದೆ. ರಸ್ತೆ ತಿರುವಿನಲ್ಲಿ ಚಲಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾಗಿದೆ. ಅಪಘಾತ ರಭಸಕ್ಕೆ ಲೈನ್‍ಮ್ಯಾನ್ ಅವಿನಾಶ್ ಬೈಕಿನಿಂದ ಹಾರಿ ಬಿದ್ದಿದ್ದು, ತೀವ್ರ ಗಾಯಗಳಾಗಿವೆ. ಸದ್ಯ ಅವಿನಾಶ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. https://ainkannada.com/khaki-shock-to-ipl-betting-houses-betting-racketeers-arrested/ ವಿದ್ಯುತ್ ಲೈನ್ ದುರಸ್ಥಿಗೆಂದು ಅವಿನಾಶ್ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇನ್ನೂ ಈ ಅಪಘಾತದ ದೃಶ್ಯವನ್ನು ಹಿಂದಿನ ಬೈಕ್ ಸವಾರ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಸದ್ಯ ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ : ಶಿಗಿಗಟ್ಟಿ ಆರೇಬಸನಕೋಪ್ಪ ಹಸರಂಬಿ ಹೋಗುವ ರಸ್ತೆ ತುಂಬಾ ಹದಗೆಟ್ಟು ಹೋಗಿತ್ತು. ಅಲ್ಲಿನ ಸಾರ್ವಜನಿಕ ಕೋರಿಕೆ ಮೇರೆಗೆ ರಸ್ತೆ ಕಾಮಗಾರಿ ಆರಂಭವಾಗುತ್ತಿದ್ದು, ಸಚಿವ ಸಂತೋಷ್ ಲಾಡ್ ಅವರೇ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. https://ainkannada.com/congress-protests-against-increase-in-petrol-diesel-and-lpg-gas-prices/ ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೂವಕ್ಕ ಲಮಾಣಿ, ರವಿ ಲಮಾಣಿ. ರಾಮು ಲಮಾಣಿ, ಲಕ್ಷಣ ರಾವಜಿ, ಮಂಜುನಾಥ, ಮುರಳಿ, ನರೇಶ್, ಮಲ್ಲಡ ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.