ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಅಂತಾರೇ. ಆದ್ರೆ ಇವರಿಬ್ಬರ ಜಗಳವೀಗ ಹಾದಿರಂಪ ಬೀದಿರಂಪವಾಗಿದೆ. ತಮಿಳಿನ ಖ್ಯಾತ ನಟ ರವಿ ಮೋಹನ್ ತಮ್ಮ ಪತ್ನಿ ಆರತಿ ರವಿ ಅವರಿಂದ ಬೇರ್ಪಡುವುದಾಗಿ ಘೋಷಿಸಿದಾಗಿನಿಂದ ಅವರ ವೈಯಕ್ತಿಕ ಜೀವನದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಸಿಂಗರ್ ಕೆನಿಶಾ ಫ್ರಾನ್ಸಿಸ್ ಕೈ ಹಿಡಿದು ಓಡಾಡಿದ್ದ ವಿಡಿಯೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದಕ್ಕೆ ರವಿ ಪತ್ನಿ ಆರತಿ ರವಿ ಗರಂ ಆಗಿದ್ದರು. ತಮ್ಮ ಮಕ್ಕಳನ್ನು ಬಿಟ್ಟು ಹೀಗೆಲ್ಲಾ ಮಾಡುತ್ತಿರುವುದು ಸರಿ ಎಲ್ಲ ಎಂದು ಆರೋಪಿಸಿದ್ದರು.
ಪತ್ನಿ ಆರೋಪಕ್ಕೆ ಜಯಂ ರವಿ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಸುದೀರ್ಘ ಪತ್ರ ಬರೆದಿರುವ ಅವರು, “ನಮ್ಮ ದೇಶವು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ವೈಯಕ್ತಿಕ ವಿಷಯಗಳು ಸಾರ್ವಜನಿಕ ಅಭಿಪ್ರಾಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಇದು ನನಗೆ ನೋವುಂಟು ಮಾಡುತ್ತದೆ. ನನ್ನ ಖಾಸಗಿ ಜೀವನವು ಸತ್ಯ ಅಥವಾ ತಿರುಚಿದ ಗಾಸಿಪ್ ಆಗಿ ಬದಲಾಗುವುದನ್ನು ನೋಡುವುದು ತೀವ್ರ ಆಘಾತಕಾರಿಯಾಗಿದೆ. ನನ್ನ ಮೌನವು ದೌರ್ಬಲ್ಯವಾಗಿರಲಿಲ್ಲ. ವಯಸ್ಕನಾಗಿ ಮತ್ತು ವರ್ಷಗಳ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ತೀವ್ರ ಆರ್ಥಿಕ ಕಿರುಕುಳದ ನಡುವೆ, ಈ ವರ್ಷಗಳಲ್ಲಿ ನನ್ನ ಹೆತ್ತವರನ್ನು ಭೇಟಿಯಾಗದಂತೆ ನಾನು ಪಂಜರದಲ್ಲಿ ಬಂಧಿಸಲ್ಪಟ್ಟಿದ್ದೆ, ಬದುಕಲು ಯೋಗ್ಯವಲ್ಲದ ಜೀವನದಿಂದ ದೂರ ಸರಿಯಲು ನಾನು ಅಂತಿಮವಾಗಿ ನಿರ್ಧಾರ ತೆಗೆದುಕೊಂಡೆ. ಇದರಿಂದ ದೂರ ಆಗುವ ಆಯ್ಕೆ , ನಾನು ಹಗುರವಾಗಿ ತೆಗೆದುಕೊಂಡ ನಿರ್ಧಾರವಲ್ಲ – ಮತ್ತು ಆದ್ದರಿಂದ, ನಾನು ಇದನ್ನು ನಿಮಗೆ ಭಾರವಾದ ಹೃದಯದಿಂದ ಬರೆಯುತ್ತಿದ್ದೇನೆ. ನನ್ನ ಮಕ್ಕಳನ್ನು ಆರ್ಥಿಕ ಲಾಭ ಮತ್ತು ಸಾರ್ವಜನಿಕರಿಂದ ಸೆಳೆಯಲು ಸಾಧನವನ್ನಾಗಿ ಬಳಸುತ್ತಿದ್ದಾರೆ. ಇದೆಲ್ಲ ನೋಡಲು ನನಗೆ ಅತ್ಯಂತ ಬೇಸರವನ್ನುಂಟುಮಾಡುತ್ತದೆ. ಕೆನೀಶಾ ಫ್ರಾನ್ಸಿಸ್ ಬಗ್ಗೆ ಹೇಳುವುದಾದರೆ , ಆರಂಭದಲ್ಲಿ ಸೋತು ಹೋಗಿದ್ದ ವ್ಯಕ್ತಿಯನ್ನು ಉಳಿಸಲು ಆಯ್ಕೆ ಮಾಡಿಕೊಂಡ ಸ್ನೇಹಿತೆ ,ಜೀವನಾಡಿಯಾದಳು” ಎಂದು ಬರೆದರು. “ಬರಿಗೈಲಿನಲ್ಲಿ, ನೈಟ್ ಸೂಟ್ ಧರಿಸಿ, ಕೈಚೀಲ ಮತ್ತು ಘನತೆಯನ್ನು ಕಳೆದುಕೊಂಡು ಮನೆಯಿಂದ ಹೊರಟಾಗ ಆಕೆ ತನ್ನ ಪಕ್ಕದಲ್ಲಿದ್ದಳು” ಎಂದು ಹೇಳಿಕೊಂಡಿದ್ದಾರೆ.
View this post on Instagram
Actor Ravi Mohan With His Partner Kenishaa francis At Vels வெட்டிங்.. pic.twitter.com/GLPLWXwPAH
— Alex (@alex_q20) May 9, 2025
ಯಾರು ಕೆನಿಶಾ?
ಕೆನಿಶಾ ಬೆಂಗಳೂರಿನವರು. ಅಲ್ಲಿನ ವಿವೇಕ್ ನಗರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದಾರೆಂದು ಎನ್ನಲಾಗುತ್ತಿದೆ