ಬೆಂಗಳೂರು:- ರಾಜಧಾನಿ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯನ್ನು ಗರ್ಭಿಣಿ ಮಾಡಿ, ಪತಿ ಎಸ್ಕೇಪ್ ಆಗಿರುವ ಘಟನೆ ಜರುಗಿದೆ. ಹೇಮಂತ್ ಕುಮಾರ್ ಎಂಬಾತನೇ ಪತ್ನಿ ಬಿಟ್ಟು ಎಸ್ಕೇಪ್ ಆಗಿರುವ ಗಂಡ.
ಹೇಮಂತ್ ಕುಮಾರ್ ಎಂಬಾತನಿಗೆ ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕುಣಿಗಲ್ ಮೂಲದ ಯುವತಿ ಪರಿಚಯವಾಗಿದೆ. ಹೇಮಂತ್, ಯುವತಿಯ ಬೆನ್ನು ಬಿದ್ದು ಪ್ರೀತಿಸುವಂತೆ ಒತ್ತಾಯ ಮಾಡಿದ್ದ. ನಂತರ ಕಳೆದ ಮಾರ್ಚ್‌ನಲ್ಲಿ ಇಬ್ಬರು ವಿವಾಹವಾಗಿದ್ದರು. ಆದರೆ ಮದುವೆಯಾದ ಮೂರೇ ತಿಂಗಳಲ್ಲಿ ಪತ್ನಿಯ ನಡತೆ ಸರಿಯಲ್ಲ ಎಂದು ದೂಷಿಸಿ, ಮನೆಬಿಟ್ಟು ಹೋಗಿದ್ದ.
ಇದೀಗ 3 ತಿಂಗಳ ಗರ್ಭಿಣಿಯಾಗಿರೋ ಪತ್ನಿ, ಪತಿಗಾಗಿ ಹುಡುಕಾಟ ನಡೆಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಶ್ಚಿಮ ವಿಭಾಗ ಮಹಿಳಾ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಲಾಗಿದೆ. ಪೊಲೀಸರು ಪತಿ, ಪತ್ನಿ ಇಬ್ಬರನ್ನೂ ಕರೆಸಿ ತಿಳಿ ಹೇಳಿ ಕಳುಹಿಸಿದ್ದಾರೆ.