ಈ ಬಾರಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಅಬ್ಬರ ಜೋರಾಗಿದೆ. ಪಾಯಿಂಟ್ ಟೇಬಲ್‌ನಲ್ಲಿ ಆರ್‌ಸಿಬಿ ನಂಬರ್ 1 ಸ್ಥಾನದಲ್ಲಿದ್ದು, ಕಪ್ ಕೂಡ ಗೆಲ್ಲುವ ಎಂಬ ಭರವಸೆ ಇದೆ. ಆರ್‌ಸಿಬಿ ಐಪಿಎಲ್ ಕಣದಲ್ಲಿ ರೋಚಕ ಆಟ ಮುಂದುವರೆಸುತ್ತಿದ್ದು, ಈ ನಡುವೆ ಇಂದು ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹಾಗೂ ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ತಿರುಪತಿ ತಿಮ್ಮಪ್ಪನಿ ದರ್ಶನ ಪಡೆದಿದ್ದಾರೆ.
ಆರ್‌ಸಿಬಿ 10 ಪಂದ್ಯಗಳಿಂದ 7 ಗೆಲುವುಗಳ ಅದ್ಭುತ ದಾಖಲೆಯೊಂದಿಗೆ, ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 0.521 ನೆಟ್ ರನ್ ರೇಟು ಪಡೆದುಕೊಂಡಿದೆ. ಶನಿವಾರ ಚಿನ್ನಸ್ವಾಮಿಯಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ ಸೆಣೆಸಾಡಲಿದ್ದು, ಅದಕ್ಕೂ ಮುನ್ನ ನಾಯಕ ರಜತ್ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.