ನಮ್ಮ ಸೌಂದರ್ಯ ಬೇರೆಯವರಿಗೆ ಚೆನ್ನಾಗಿ ಕಾಣಬೇಕು ಎಂದರೆ ಅದಕ್ಕೆ ನಮ್ಮ ತ್ವಚೆ ಮತ್ತು ನಮ್ಮ ತಲೆ ಕೂದಲು ಪ್ರಮುಖ ಕಾರಣವಾಗುತ್ತದೆ. ನಮ್ಮ ಸೌಂದರ್ಯಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಕೂಡ ಮಾನ್ಯತೆ ಕೊಡಬೇಕು. ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡರೆ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ ನಿಜ.
ನಾವು ಆರೋಗ್ಯಕರ ಎಂದು ತಿಳಿದುಕೊಂಡು ತಿನ್ನುವ ಬಹುತೇಕ ಆಹಾರ ಪದಾರ್ಥಗಳು ನಮ್ಮ ತಲೆ ಕೂದಲಿಗೆ ಸಕಾರಾತ್ಮಕವಾಗಿ ಕೆಲಸ ಮಾಡುತ್ತವೆ. ಇವುಗಳಿಂದ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತೇಜಿಸುತ್ತದೆ. ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುವುದು, ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಇಂತಹ ಎಲ್ಲವೂ ಪರಿಹಾರವಾಗುತ್ತದೆ.
ಕೆಲವರ ಕೂದಲು ಎಷ್ಟು ಉದುರುತ್ತದೆಯೆಂದರೆ ಸಣ್ಣ ವಯಸ್ಸಿನಲ್ಲಿಯೇ ಬೋಳು ತಲೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೂದಲು ಯಾವ ಕಾರಣದಿಂದ ಹಾನಿಗೊಳಗಾದರೂ ಅದು ಡ್ರೈ ಆಗಲು ಶುರುವಾಗುತ್ತದೆ. ಪರಿಣಾಮ ಕೂದಲು ಉದುರುತ್ತದೆ. ಕೂದಲ ಬೆಳವಣಿಗೆ ನಿಲ್ಲುತ್ತದೆ. ಹೀಗಾಗುತ್ತಿದ್ದಾಗ ಕೆಮಿಕಲ್ ಬಳಸುವ ಬದಲು ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸಿದರೆ ಕೂದಲ ಸಮಸ್ಯೆ ಬಗೆಹರಿಯುತ್ತದೆ. ಮೊಸರು ಕೂಡಾ ಕೂದಲಿಗೆ ನೈಸರ್ಗಿಕವಾಗಿ ಬಳಸುವ ಒಂದು ಉತ್ಪನ್ನವಾಗಿದೆ.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸುಹಾಸ್ ಶೆಟ್ಟಿ ಕೊಲೆಯೇ ಸಾಕ್ಷಿ – ಸದಾನಂದ ಗೌಡ!
ಕೂದಲಿಗೆ ಮೊಸರು :
ಮೊಸರು ಹೊಟ್ಟೆ ಮತ್ತು ಕರುಳಿಗೆ ಮಾತ್ರವಲ್ಲದೆ ಕೂದಲಿಗೆ ಕೂಡಾ ತುಂಬಾ ಪ್ರಯೋಜನಕಾರಿಯಾಗಿದೆ. ಕೂದಲಿಗೆ ಮೊಸರನ್ನು ಹಚ್ಚಿದರೆ, ಅದರಲ್ಲಿರುವ ವಿಶೇಷ ಪೋಷಕಾಂಶಗಳು ಕೂದಲನ್ನು ತಲುಪುತ್ತವೆ. ಇದು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಕೂದಲು ನೈಸರ್ಗಿಕವಾಗಿ ರೇಷ್ಮೆಯಂತಾಗುತ್ತದೆ :
ಮೊಸರಿನಲ್ಲಿರುವ ವಿಶೇಷ ಪೋಷಕಾಂಶಗಳು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ. ಇದು ಬೇರುಗಳಿಂದ ಶುಷ್ಕತೆಯನ್ನು ನಿವಾರಿಸಿ, ಪೋಷಣೆಯನ್ನು ನೀಡುತ್ತದೆ. ಕೂದಲನ್ನು ನೈಸರ್ಗಿಕವಾಗಿ ರೇಷ್ಮೆಯಂತೆ ಮೃದುವಾಗಿರುವಂತೆ ಮಾಡುತ್ತದೆ. ಮೊಸರಿನಲ್ಲಿರುವ ಆರೋಗ್ಯಕರ ಕೊಬ್ಬು ಕೂದಲಿನ ನುಣುಪನ್ನು ಕಾಯ್ದುಕೊಳ್ಳುತ್ತದೆ. ಇದರಿಂದಾಗಿ ಕೂದಲು ದೀರ್ಘಕಾಲದವರೆಗೆ ರೇಷ್ಮೆಯಂತೆ ಇರುತ್ತದೆ.
ಕೂದಲು ಉದುರುವಿಕೆಯನ್ನು ತಡೆಯುತ್ತದೆ :
ಹೆಚ್ಚಿನ ಸಂದರ್ಭಗಳಲ್ಲಿ, ಕೂದಲಿನಲ್ಲಿ ಪೋಷಕಾಂಶಗಳ ಕೊರತೆಯಿಂದ ಕೂದಲು ಉದುರುತ್ತದೆ. ಮೊಸರನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. ಇದು ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
ಬಿಳಿ ಕೂದಲ ಸಮಸ್ಯೆಯನ್ನು ನಿವಾರಿಸುತ್ತದೆ.
ಒಂದು ಕಪ್ ಮೊಸರಿಗೆ ನಿಂಬೆ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಈ ಮಿಶ್ರಣವನ್ನು ನಿಯಮಿತವಾಗಿ ಬಳಸಿದರೆ ಕ್ರಮೇಣ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.
ಬಳಸುವ ಸರಿಯಾದ ವಿಧಾನ :
ಬೆಳಿಗ್ಗೆ ಕೂದಲು ತೊಳೆಯುವ 2 ಗಂಟೆಗಳ ಮೊದಲು ಮೊಸರನ್ನು ಕೂದಲಿಗೆ ಚೆನ್ನಾಗಿ ಹಚ್ಚಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ನಿಮ್ಮ ಕೂದಲನ್ನು ಸರಿಯಾಗಿ ತೊಳೆದ ನಂತರ, ಕೂದಲು ರೇಷ್ಮೆಯಂತಾಗುತ್ತದೆ.